Advertisement

ಕನ್ನಡಕ್ಕೆ ಅವಮಾನ: ಕ್ರಮಕ್ಕೆ ಒತ್ತಾಯ

04:25 PM Feb 03, 2022 | Team Udayavani |

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆಯ 38ನೇ ವಾರ್ಡ್‌ನ ಕನ್ನಡವನದಲ್ಲಿನ ಕನ್ನಡ ಬಾವುಟ, ಧ್ವಜ ಹಾಗೂ ಕನ್ನಡಪ್ರೇಮಿಗಳಿಗೆ ಅಪಮಾನ ಮಾಡಿರುವವರವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕುಎಂದು ಒತ್ತಾಯಿಸಿ ಸೋಮವಾರ ಕನ್ನಡಪರಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳುನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಕನ್ನಡ ವನದಲ್ಲಿನ ಹಲವಾರುವರ್ಷಗಳಿಂದ ಕನ್ನಡ ಬಾವುಟ, ಧ್ವಜವಿಟ್ಟುಕನ್ನಡ ರಾಜ್ಯೋತ್ಸವ ಮತ್ತು ರಾಷ್ಟ್ರೀಯಹಬ್ಬಗಳಂದು ಗೌರವ ವಂದನೆ, ವಿವಿಧಕಾರ್ಯಕ್ರಮ ನಡೆಸಲಾಗುತ್ತಿತ್ತು. ಈಚೆಗೆಕೆಲ ವಿದ್ರೋಹಿಗಳು ಕನ್ನಡ ಬಾವುಟ,ಧ್ವಜವನ್ನ ಕಿತ್ತು ಹಾಕಿದ್ದಾರೆ ಮಾತ್ರವಲ್ಲ ಕನ್ನಡಪ್ರೇಮಿಗಳಿಗೆ ಅಪಮಾನ ಮಾಡಿರುವುದುಅತ್ಯಂತ ಖಂಡನೀಯ.

ಕೂಡಲೇ ತಪ್ಪಿತಸ್ಥರವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುಒತ್ತಾಯಿಸಿದರು. ಮಧ್ಯ ಕರ್ನಾಟಕದ ಕೇಂದ್ರಬಿಂದು, ಕನ್ನಡ ಪರ ಸದಾ ಧ್ವನಿ ಎತ್ತುವಹೋರಾಟದ ಭೂಮಿ ದಾವಣಗೆರೆಯಲ್ಲೇಕನ್ನಡ ವಿರೋಧಿತನ ತೋರಿರುವ ಕನ್ನಡವಿರೋಧಿ ಶಕ್ತಿ, ಕಿಡಿಗೇಡಿಗಳ ಬಂಧಿಸಿ,ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕು.

ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು.ಕರುನಾಡ ಕನ್ನಡ ಸೇನೆ ರಾಜ್ಯ ಅಧ್ಯಕ್ಷ ಕೆ.ಟಿ.ಗೋಪಾಲ ಗೌಡ, ಒಕ್ಕೂಟದ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಸ್‌.ಜಿ. ಸೋಮಶೇಖರ್‌, ಎನ್‌.ರಾಜೇಂದ್ರ ಬಂಗೇರಾ, ದೇವರಾಜಸ್ವಾಮಿ,ಮೋಹನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next