Advertisement

ಸ್ಮಾರ್ಟ್‌ಸಿಟಿ ಯಿಂದ ವಿದ್ವತ್‌ ಲರ್ನಿಂಗ್‌ ಆ್ಯಪ್‌ ಸೌಲಭ್ಯ

03:59 PM Feb 03, 2022 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ವತಿಯಿಂದಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಪ್ರೌಢಶಾಲಾವಿದ್ಯಾರ್ಥಿಗಳಿಗೆ ವಿದ್ವತ್‌ಲರ್ನಿಂಗ್‌ ಆ್ಯಪ್‌ ಮೂಲಕಉಚಿತ ಶಿಕ್ಷಣ ನೀಡುವವ್ಯವಸ್ಥೆ ಮಾಡಲಾಗಿದೆ ಎಂದುಸ್ಮಾರ್ಟ್‌ಸಿಟಿ ಯೋಜನೆವ್ಯವಸ್ಥಾಪಕ ನಿರ್ದೇಶಕರವೀಂದ್ರ ಬಿ. ಮಲ್ಲಾಪುರ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈವಿಷಯ ತಿಳಿಸಿದ ಅವರು, ಸ್ಮಾರ್ಟ್‌ಸಿಟಿ ಮತ್ತುಮೈಸೂರಿನ ವಿದ್ವತ್‌ ಇನ್ನೋವೇಟಿವ್‌ ಸಲ್ಯೂಷನ್ಸ್‌ಪ್ರಾಯೋಜಕತ್ವದಲ್ಲಿ ವಿದ್ವತ್‌ ಲರ್ನಿಂಗ್‌ ಆ್ಯಪ್‌ಸಿದ್ಧಪಡಿಸಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿಶಾಲೆಗಳ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು 2ತಿಂಗಳು ಉಚಿತವಾಗಿ ವಿದ್ವತ್‌ ಲರ್ನಿಂಗ್‌ ಆ್ಯಪ್‌ನಉಚಿತ ಸಬ್‌ಸ್ಕ್ರಿಪ್ಷನ್‌ ಪಡೆದುಕೊಳ್ಳಲು ಅವಕಾಶಇದೆ ಎಂದರು.ಕಳೆದ ವರ್ಷ ಕೊರೊನಾ ಕಾರಣಕ್ಕೆ ಮಕ್ಕಳುಶಾಲೆಗಳಿಗೆ ಭೌತಿಕವಾಗಿ ಹಾಜರಾಗಲುಸಾಧ್ಯವಾಗಿರಲಿಲ್ಲ.

ಆನ್‌ಲೈನ್‌ ತರಗತಿಅನಿವಾರ್ಯವಾಗಿತ್ತು. ವಿದ್ವತ್‌ ಇನೋವೇಟಿವ್‌ನಿಂದ ದಾವಣಗೆರೆಯಲ್ಲಿ ಸರ್ಕಾರಿ ಶಾಲೆಯ5 ರಿಂದ 10 ನೇ ತರಗತಿ, ಪಿಯು, ಡಿಗ್ರಿವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಪಠ್ಯಗಳನ್ನುಒಳಗೊಂಡಂತೆ ಸ್ಮಾರ್ಟ್‌ಕ್ಲಾಸ್‌ಗಳಿಗೆ ಕಂಟೆಂಟ್‌ಗಳನ್ನು ಒದಗಿಸಿಕೊಟ್ಟಿತ್ತು. ಕಳೆದ ವರ್ಷ ಸುಮಾರುಎಸ್ಸೆಸ್ಸೆಲ್ಸಿಯ 6900 ವಿದ್ಯಾರ್ಥಿಗಳು ವಿದ್ವತ್‌ಲರ್ನಿಂಗ್‌ ಆ್ಯಪ್‌ ಸದುಪಯೋಗ ಪಡೆದು ಉತ್ತಮಅಂಕ ಗಳಿಸಿದ್ದಾರೆ.

ಈ ವರ್ಷವೂ ಎರಡು ತಿಂಗಳುವಿದ್ವತ್‌ ಲರ್ನಿಂಗ್‌ ಆ್ಯಪ್‌ನ ಉಚಿತ ಸಬ್‌ಸ್ಕ್ರಿಪ್ಷನ್‌ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.ರಾಜ್ಯ ಪಠ್ಯ ಕ್ರಮದ ಕನ್ನಡ, ಉರ್ದು ಮಾಧ್ಯಮ,ಸಿಬಿಎಸ್‌ಇ ವಿದ್ಯಾರ್ಥಿಗಳು ಈ ಆ್ಯಪ್‌ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಚೆನ್ನಾಗಿಅಭ್ಯಾಸ ಮಾಡಿ, ಉತ್ತಮ ಸಾಧನೆ ಮಾಡಬೇಕುಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next