Advertisement

ಮಡಿವಾಳರನ್ನು ಪರಿಶಿಷ್ಟಜಾತಿಗೆ ಸೇರಿಸಲು ಒತ್ತಾಯ

04:44 PM Feb 02, 2022 | Team Udayavani |

ದಾವಣಗೆರೆ: ಮಡಿವಾಳ ಸಮಾಜವನ್ನುಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ದಾವಣಗೆರೆಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘದಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಮಡಿವಾಳ ಸಮಾಜವನ್ನುಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲುಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ವರದಿಸಲ್ಲಿಸಲು ಮೈಸೂರು ವಿಶ್ವವಿದ್ಯಾಲಯದಡಾ| ಅನ್ನಪೂರ್ಣಮ್ಮ ಅವರನ್ನು ನೇಮಕಮಾಡಲಾಗಿತ್ತು. ಅವರು 2010ರಲ್ಲಿಯೇಸರ್ಕಾರಕ್ಕೆ ವರದಿ ಸಲ್ಲಿಸಿ ಮಡಿವಾಳರನ್ನುಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕುಎಂಬುದಾಗಿ ಶಿಫಾರಸು ಮಾಡಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಸಿ 11 ವರ್ಷಗಳಾದರೂಮಡಿವಾಳ ಸಮಾಜವನ್ನ ಪರಿಶಿಷ್ಟರ ಪಟ್ಟಿಗೆಸೇರಿಸದಿರುವುದು ವಿಷಾದನೀಯ. ಮಡಿವಾಳ(ದೋಭಿ – ರಜಕ) ಜಾತಿಯನ್ನು 18 ರಾಜ್ಯಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟಜಾತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಒಂದುಪ್ರದೇಶದಲ್ಲಿ ಪರಿಶಿಷ್ಟ ಜಾತಿಯಲ್ಲಿರುವವರುದೇಶಾದ್ಯಂತ ಒಂದೇ ತೆರನಾಗಿ ಇರಬೇಕಾದುದುಸಂವಿಧಾನಾತ್ಮಕವಾಗಿದೆ.

ಹಾಗಾಗಿ ನಮ್ಮಸಮಾಜದ್ದು ನ್ಯಾಯಯುತ ಬೇಡಿಕೆಯಾಗಿದೆ.ಅಲ್ಲದೆ ಸಾಮಾಜಿಕ ನ್ಯಾಯಪರವಾದದ್ದಾಗಿದೆಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next