Advertisement

ಜಿಎಂಐಟಿ ಪಾಲಿಟೆಕ್ನಿಕ್‌ನಲ್ಲಿ ಲಸಿಕಾ ಅಭಿಯಾನ

06:28 PM Jan 13, 2022 | Team Udayavani |

ದಾವಣಗೆರೆ: ನಗರದ ಜಿಎಂಐಟಿ ಪಾಲಿಟೆಕ್ನಿಕ್‌ಕಾಲೇಜಿನ ಆವರಣದಲ್ಲಿ ಕೋವಿಡ್‌ ಲಸಿಕಾ ಅಭಿಯಾನನಡೆಯಿತು.ಕಾಲೇಜಿನ 15ರಿಂದ 18 ವರ್ಷದ ಒಳಗಿನವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದಂತೆ ಲಸಿಕೆಯನ್ನುನೀಡಲಾಯಿತು. ಡಿಪ್ಲೋಮಾ ಓದುತ್ತಿರುವ ಪ್ರಥಮಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂಲಸಿಕೆಯನ್ನು ನೀಡಲಾಯಿತು.

Advertisement

ಸುಮಾರು 200ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಲಸಿಕೆಪಡೆದರು.ಲಸಿಕಾ ಕಾರ್ಯಕ್ರಮವನ್ನು ಮೆಡಿಕಲ್‌ ಆμàಸರ್‌ಡಾ. ನವ್ಯ ಮತ್ತು ಕಾಲೇಜಿನ ಆಡಳಿತಾಧಿಕಾರಿವೈ.ಯು. ಸುಭಾಶ್ಚಂದ್ರ ಉದ್ಘಾಟಿಸಿದರು. ಜಿ.ಎಂ.ಫಾರ್ಮಸಿಟಿಕಲ್‌ ಸೈನ್ಸ್‌ ಆ್ಯಂಡ್‌ ರಿಸರ್ಚ್‌ಕಾಲೇಜಿನ ಪ್ರಾಂಶುಪಾಲ ಡಾ| ಗಿರೀಶ್‌ ಬೋಳಕಟ್ಟಿವಿದ್ಯಾರ್ಥಿಗಳಿಗೆ ಲಸಿಕೆಯ ಮಹತ್ವ ತಿಳಿಸಿದರು.

ಸ್ವಾಮಿ ವಿವೇಕಾನಂದರ 159ನೇ ಜನ್ಮದಿನದ ಈದಿನ ಅತ್ಯಂತ ಶ್ರೇಷ್ಠ ಮತ್ತು ಈ ದಿನ ಈಕಾರ್ಯಕ್ರಮವು ಆಯೋಜನೆಗೊಳ್ಳುತ್ತಿರುವುದುಸಂತೋಷದಾಯಕ ವಿಷಯ ಎಂದು ಕಾಲೇಜಿನಪ್ರಾಂಶುಪಾಲ ಡಾ| ಶ್ರೀಧರ ಬಿ.ಆರ್‌. ತಿಳಿಸಿದರು.ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಎರಡುತಂಡಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದರು.

ಜಿಎಂಐಟಿ ಕಾಲೇಜಿನ ಪ್ರಭಾರಿಪ್ರಾಂಶುಪಾಲ ಡಾ| ಸಂಜಯ ಪಾಂಡೆ, ಜಿ.ಎಂ.ಎಚ್‌ ಪಿಯು ಕಾಲೇಜಿನ ಪ್ರಾಂಶುಪಾಲ ಡಾ|ವೆಂಕಟರಾಯುಡು ವಿ., ಸಹ ಆಡಳಿತಾಧಿಕಾರಿಶಿವಕುಮಾರ್‌ ಜಿ.ಜೆ., ತರಬೇತಿ ಮತ್ತು ಉದ್ಯೋಗವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್‌.ಹಾಗೂ ಅಧ್ಯಾಪಕ ವರ್ಗದವರು ಮತ್ತು ಆರೋಗ್ಯಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next