ದಾವಣಗೆರೆ: ಜಿಲ್ಲೆಯ ವಿವಿಧ ಶಾಲೆಯ ಒಟ್ಟು 71ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಆದರೂ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದ್ಯಕ್ಕೆಶಾಲಾ-ಕಾಲೇಜುಗಳನ್ನು ಬಂದ್ ಮಾಡುವುದಿಲ್ಲಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದ್ದಾರೆ.ಬುಧವಾರ ಮಾಧ್ಯಮದವರೊಂದಿಗೆಮಾತನಾಡಿದ ಅವರು, ಜಿಲ್ಲೆಯ ವಿವಿಧ ಶಾಲೆಗಳಲ್ಲಿನ71 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಶಾಲಾಮಕ್ಕಳಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಶಾಲಾ- ಕಾಲೇಜು ಬಂದ್ ಮಾಡುವ ಅಧಿಕಾರವನ್ನುಸರ್ಕಾರ ಸಂಬಂಧಿತ ಜಿಲ್ಲಾಧಿಕಾರಿಗಳಿಗೆ ನೀಡಿದೆ.ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ಶಾಲೆಗಳನ್ನುಬಂದ್ ಮಾಡುವುದಿಲ್ಲ. ಆದರೆ ಸೋಂಕುಕಾಣಿಸಿಕೊಂಡ ಶಾಲೆಯನ್ನು ಮಾತ್ರ 7 ದಿನ ಬಂದ್‌ಮಾಡಲಾಗುವುದು ಎಂದರು.ಚನ್ನಗಿರಿ ತಾಲೂಕಿನ ಮಾವಿನಹೊಳೆಇಂದಿರಾಗಾಂ ಧಿ ವಸತಿ ಶಾಲೆಯಲ್ಲಿ 55, ನಿಟ್ಟುವಳ್ಳಿಮಾರುತಿ ಪ್ರೌಢಶಾಲೆ 5, ಅವರಗೊಳ್ಳ ಹಾಗೂವಡ್ಡಿನಹಳ್ಳಿಯಲ್ಲಿ ತಲಾ 1, ಜಗಳೂರು ಎನ್‌ಎಂಕೆಶಾಲೆಯಲ್ಲಿ 6 ಮತ್ತು ಗವಿಸಿದ್ದೇಶ್ವರ ಶಾಲೆ ಮೂವರುಸೇರಿದಂತೆ ಒಟ್ಟು 71 ವಿದ್ಯಾರ್ಥಿಗಳಲ್ಲಿ ಕೊರೊನಾಪಾಸಿಟಿವ್ ಬಂದಿದೆ. ಸರ್ಕಾರದ ಸೂಚನೆಯಂತೆಶಾಲೆಗಳಲ್ಲಿ ರ್‍ಯಾಂಡಂ ಪರೀಕ್ಷೆ ನಡೆಸಲಾಗುತ್ತಿದೆ.
ಮಾವಿನಹೊಳೆ ಶಾಲೆಯ 55 ವಿದ್ಯಾರ್ಥಿಗಳಲ್ಲಿಪಾಸಿಟಿವ್ ಕಂಡು ಬಂದಿದೆ. ಆರು ವಿದ್ಯಾರ್ಥಿಗಳಲ್ಲಿಸ್ವಲ್ಪ ಪ್ರಮಾಣದ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ಚಿಕಿತ್ಸೆನೀಡಲಾಗಿತ್ತು. ಈಗ ಎಲ್ಲರೂ ಗುಣಮುಖರಾಗಿದ್ದಾರೆ.ಇನ್ನುಳಿದವರು ಐಸೋಲೇಷನ್‌ನಲ್ಲಿ ಇದ್ದಾರೆ ಎಂದುಹೇಳಿದರು.ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳುಈಗಾಗಲೇ ಸಾಕಷ್ಟು ದಿನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಈಗ ಶಿಕ್ಷಣದ ಸವಿಯನ್ನುಸವಿಯುತ್ತಿದ್ದಾರೆ. ಒಂದು ಶಾಲೆಯಲ್ಲಿ ಸೋಂಕುಕಾಣಿಸಿಕೊಂಡಿದೆ ಎಂದ ಮಾತ್ರಕ್ಕೆ ಇಡೀ ತಾಲೂಕಿನಶಾಲಾ-ಕಾಲೇಜು ಬಂದ್ ಮಾಡುವುದಿಲ್ಲ. ಯಾವಶಾಲೆಯಲ್ಲಿ ಸೋಂಕು ಕಾಣಿಸಿಕೊಂಡಿದಿಯೋಅಂತಹ ಶಾಲೆಗಳನ್ನು 7 ದಿನಗಳವರೆಗೆ ಬಂದ್ ಮಾಡಿನಿಗಾ ವಹಿಸಲಾಗುವುದು ಎಂದು ತಿಳಿಸಿದರು.ಗುರುವಾರ ಏಕಾದಶಿ ಇರುವ ಹಿನ್ನೆಲೆಯಲ್ಲಿದೇವಸ್ಥಾನಗಳಲ್ಲಿ ಕೇವಲ 50 ಜನರಿಗೆ ಮಾತ್ರಅವಕಾಶ ನೀಡಲಾಗಿದೆ.
ಸಾಮಾಜಿಕ ಅಂತರ ಹಾಗೂಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೊರೊನಾನಿಯಮಾವಳಿ ಉಲ್ಲಂಘನೆ ಮಾಡಿದವರ ವಿರುದ್ಧಕ್ರಮ ತೆಗೆದುಕೊಳ್ಳಲಾಗುವುದು. ಮುಂಜಾಗ್ರತಾಕ್ರಮವಾಗಿ ಮನೆಯಲ್ಲಿಯೇ ದೇವರ ಪ್ರಾರ್ಥನೆಮಾಡುವಂತೆ ಮನವಿ ಮಾಡಿದರು.