ದಾವಣಗೆರೆ: ಜಮೀನು ಮಾರಾಟ ಮಾಡಲುಮುಂಗಡವಾಗಿ ನೀಡಿರುವ ಒಪ್ಪಿಗೆ ಪತ್ರ ರದ್ದುಮಾಡಬೇಕು, ಒಪ್ಪಿಗೆ ಪಡೆಯದೆ ದರ ನಿಗದಿಮಾಡಿರುವುದನ್ನು ಹಿಂಪಡೆಯಬೇಕು ಎಂದುಒತ್ತಾಯಿಸಿ ಮಂಗಳವಾರ ಹಳೇಕುಂದವಾಡಗ್ರಾಮದ ರೈತರು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಅವರಿಗೆ ಮನವಿ ಸಲ್ಲಿಸಿದರು.ಹಳೇ ಕುಂದವಾಡದಲ್ಲಿ ಕೃಷಿಯನ್ನೇನಂಬಿಕೊಂಡು ಜೀವನ ನಡೆಸುವರುಹೆಚ್ಚಾಗಿದ್ದಾರೆ.
2018-19ರಲ್ಲಿ ದಾವಣಗೆರೆಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದಸರ್ವೇ ನಂ 125 ರಿಂದ 139/7 ರ ತನಕಒಟ್ಟು 59,19 ಎಕರೆ ಜಮೀನಿನಲ್ಲಿ ಹೊಸಲೇಔಟ್‌ಗೆ ಜಮೀನುಗಳನ್ನು ಒಳ್ಳೆಯಬೆಲೆ ಕೊಟ್ಟು ಖರೀದಿ ಮಾಡಿಕೊಳ್ಳುತ್ತೇವೆಎಂದು ಒತ್ತಾಯಪೂರ್ವಕವಾಗಿ ಒಪ್ಪಿಗೆಪತ್ರ ಬರೆಯಿಸಿಕೊಂಡಿದ್ದರು. ಈಗ ಮತ್ತೆಭೂಸ್ವಾಧೀನ ಮಾಡಲಾಗುತ್ತದೆ ಎಂಬ ಮಾತುಕೇಳಿ ಬರುತ್ತಿವೆ. ಪಿತ್ರಾìಜಿತ ಜಮೀನು ಕೊಟ್ಟರೆ ಊರನ್ನೇ ಬಿಡಬೇಕಾದ ಪರಿಸ್ಥಿತಿ ಬರುತ್ತದೆ.
ಹಾಗಾಗಿ ಜಮೀನು ಮಾರಾಟ ಮಾಡಲುಮುಂಗಡವಾಗಿ ನೀಡಿರುವ ಒಪ್ಪಿಗೆ ಪತ್ರ ರದ್ದುಮಾಡಬೇಕು ಎಂದು ಒತ್ತಾಯಿಸಿದರು.ಈಚೆಗೆ ದರ ನಿರ್ಧರಣಾ ಸಲಹಾಸಮಿತಿ ಸಭೆಯಲ್ಲಿ ಒತ್ತಾಯ ಪೂರ್ವಕವಾಗಿಯಾವ ರೈತರ ಜಮೀನುಗಳನ್ನುಪಡೆದುಕೊಳ್ಳುವುದಿಲ್ಲ. ಕೊಡಬೇಕೆನಿಸಿದರೆಮಾತ್ರ ಖರೀದಿಸಲಾಗುವುದು ಎಂದುಹೇಳಲಾಗಿತ್ತು.
ದರ ನಿಗದಿಯಾಗದೆ ಸಭೆಅಂತ್ಯಗೊಂಡಿತ್ತು. ಆದರೆ ಕುಂದುವಾಡರೈತರು ವಸತಿ ಯೋಜನೆಗೆ ಸಮ್ಮತಿ ಸೂಚಿಸಿದಬಗ್ಗೆ ಹಾಗೂ ಎಕರೆಗೆ 1.18 ಕೋಟಿ ರೂ.ಜಮೀನಿನ ಬೆಲೆ ನಿಗದಿಯಾಗಿರುತ್ತದೆ ಎಂದುಹೇಳಲಾಗಿದೆ. ತಾವೇ ಜಮೀನು ದರ ನಿಗದಿಮಾಡಿರುವುದನ್ನು ಒಪ್ಪಲಾಗದು. ಒಪ್ಪಿಗೆಪಡೆಯದೆ ದರ ನಿಗದಿ ಮಾಡಿರುವುದನ್ನುಹಿಂಪಡೆಯಬೇಕು.
ಅಕ್ರಮವಾಗಿ ಜಮೀನುಸ್ವಾಧೀನಕ್ಕೆ ಪಡೆಯಲು ಪ್ರಯತ್ನಿಸುತ್ತಿರುವವರವಿರುದ್ಧ ಉಗ್ರ ಹೋರಾಟ ಮಾಡುವುದಾಗಿರೈತರು ಎಚ್ಚರಿಸಿದರು. ರೈತರ ಒಪ್ಪಿಗೆ ಇಲ್ಲದೆಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದುಜಿಲ್ಲಾಧಿಕಾರಿ ಭರವಸೆ ನೀಡಿದರು.