Advertisement

ಕೌಶಲ್ಯ ಪ್ರದರ್ಶನಕ್ಕೆ ತಾಂತ್ರಿಕ ಸ್ಪರ್ಧೆ ಉತ್ತಮ ವೇದಿಕೆ

04:47 PM Jan 12, 2022 | Team Udayavani |

ದಾವಣಗೆರೆ: ವಿದ್ಯಾರ್ಥಿಗಳಲ್ಲಿರುವ ನೈಪುಣ್ಯತೆ,ಪ್ರತಿಭೆ, ಕೌಶಲ್ಯದ ಪರಿಚಯಕ್ಕೆ ತಾಂತ್ರಿಕ ಸ್ಪರ್ಧೆಗಳುಅತ್ಯುತ್ತಮ ವೇದಿಕೆ ಎಂದು ಬೆಂಗಳೂರಿನ ಆರ್‌.ವಿ.ಇಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಜಿ.ಎಸ್‌.ಶರವಾನಿ ಹೇಳಿದರು.

Advertisement

ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಮಾಹಿತಿ ತಂತ್ರಜ್ಞಾನ ವಿಭಾಗದ ಆಶ್ರಯದಲ್ಲಿಏರ್ಪಡಿಸಿರುವ ಎರಡು ದಿನಗಳ ರಾಜ್ಯ ಮಟ್ಟದ”ಸಂಭ್ರಮ ಸುಕಲ್ಪ’ ಟೆಕ್ನಿಕಲ್‌ ಫೆಸ್ಟ್‌’ ಉದ್ಘಾಟಿಸಿಮಾತನಾಡಿದ ಅವರು, ಸುಕಲ್ಪ ಎಂಬ ಎರಡುದಿನಗಳ ಟೆಕ್ನಿಕಲ್‌ ಫೆಸ್ಟ್‌ ಒಂದು ಅದ್ಭುತವಾದಕಲ್ಪನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿಭಾಗವಹಿಸುವುದರಿಂದ ಅವರಲ್ಲಿನ ಆತ್ಮವಿಶ್ವಾಸಹೆಚ್ಚಾಗುತ್ತದೆ.

ವಿಷಯಗಳ ಜ್ಞಾನವನ್ನು ಹೆಚ್ಚಿಸುವಲ್ಲಿಸಹಾಯಕವಾಗಲಿದೆ. ರಾಜ್ಯ ಮಟ್ಟದ ಟೆಕ್‌ ಫೆಸ್‌rನಲ್ಲಿ ಭಾಗವಹಿಸಿರುವ ಎಲ್ಲ ವಿದ್ಯಾರ್ಥಿಗಳಿಗೆಶುಭವಾಗಲಿ. ಉತ್ತಮ ಸಾಧನೆಗೆ ವೇದಿಕೆಯಾಗಲಿಎಂದು ಆಶಿಸಿದರು.ಮಾಹಿತಿ ತಂತ್ರಜ್ಞಾನ ವಿಭಾಗದ ವಿಭಾಗದಮುಖ್ಯಸ್ಥ ಡಾ| ಬಿ.ಎಸ್‌. ಸುನೀಲ್‌ಕುಮಾರ್‌ಮಾತನಾಡಿ, ರಾಜ್ಯ ಮಟ್ಟದ ಟೆಕ್‌ ಫೆಸ್ಟ್‌ ನಲ್ಲಿವಿವಿಧೆಡೆಯ ವಿದ್ಯಾರ್ಥಿಗಳು ಭಾಗವಹಿಸಿರುವುದುಹರ್ಷದ ವಿಚಾರ. ಸುಕಲ್ಪ ಟೆಕ್‌ಫೆಸ್ಟ್‌ನ ವಿಶೇಷತೆಮತ್ತು ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳುತಿಳಿಯಬೇಕು ಎಂದರು.

ಕಾಲೇಜಿನ ಉದ್ಯೋಗ ಮತ್ತು ತರಬೇತಿವಿಭಾಗದ ಮುಖ್ಯಸ್ಥ ಪ್ರೊ| ತೇಜಸ್ವಿ ಕಟ್ಟಿಮನಿಮಾತನಾಡಿ, ಕಾಲೇಜಿನಲ್ಲಿ ಈವರೆಗೆ ನಡೆದಿರುವಉದ್ಯೋಗ ಮೇಳದಲ್ಲಿ ಹಲವಾರು ವಿದ್ಯಾರ್ಥಿಗಳುರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಂಪನಿ,ಸಂಸ್ಥೆಗಳಲ್ಲಿ ಹುದ್ದೆ ಪಡೆದುಕೊಂಡಿದ್ದಾರೆ.ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳಿಗೆಹುದ್ದೆಗಳ ಭರ್ತಿಗಾಗಿ ಹೊಸ ಕಂಪೆನಿಗಳೂಂದಿಗೆಒಪ್ಪಂದಗಳನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.

ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲ ಡಾ|ಸಂಜಯ್‌ ಪಾಂಡೆ ಮಾತನಾಡಿ, ಸ್ಪರ್ಧಾತ್ಮಕಜಗತ್ತಿನಲ್ಲಿ ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳುವುದುಮತ್ತು ಅದರ ಜೊತೆಗೆ ಆಧುನಿಕ ತಾಂತ್ರಿಕಕೌಶಲ್ಯಗಳಿಗೆ ಹೆಚ್ಚು ಒತ್ತು ಕೊಡುವುದು ಅತಿಅವಶ್ಯಕ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿಭಾಗವಹಿಸುವುದರಿಂದ ಅವರ ತಾಂತ್ರಿಕಕೌಶಲ್ಯಗಳು ಮತ್ತು ಜ್ಞಾನ ವೃದ್ಧಿಸುವಲ್ಲಿಸಹಾಯಕವಾಗಲಿದೆ ಎಂದರು.ಕಾಲೇಜು ಆಡಳಿತ ಮಂಡಳಿಯ ವೈ.ಯು.ಸುಭಾಶ್‌ಚಂದ್ರ, ಪ್ರೊ| ನಸ್ರಿàನ್‌ ತಾಜ್‌, ಪ್ರೊ|ಅಮಿತ್‌ ಶೇಖರ್‌ ಇತರರು ಇದ್ದರು.

Advertisement

ಕಾವ್ಯ ಹೆಗ್ಡೆಪ್ರಾರ್ಥಿಸಿದರು. ಜಿ.ಎಸ್‌. ಸೌಮ್ಯ ಸ್ವಾಗತಿಸಿದರು.ಪ್ರೊ| ಎಸ್‌. ಜೀವಿತಾ ನಿರೂಪಿಸಿದರು. ಪ್ರೊ|μರೋಜ್‌ ಖಾನ್‌ ವಂದಿಸಿದರು. ಎರಡು ದಿನಗಳತಾಂತ್ರಿಕ ಸ್ಪರ್ಧೆಯಲ್ಲಿ ಪ್ರಬಂಧ, ಕೋಡಿಂಗ್‌,ಪರಿಕಲ್ಪನಾ ಪ್ರಸ್ತುತಿ ಮುಂತಾದ ಸ್ಪರ್ಧೆಗಳುನಡೆಯಲಿವೆ. ದಾವಣಗೆರೆ ಒಳಗೊಂಡಂತೆರಾಜ್ಯದ ವಿವಿಧ ಕಾಲೇಜುಗಳ 250ಕ್ಕೂ ಹೆಚ್ಚುವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next