Advertisement

ನೋಡುಗರ ಕಣ್ಮನ ಸೆಳೆದ ಪರಿಸರ ಸ್ನೇಹಿ ಉತ್ಪನ್ನಗಳು

06:00 PM Jan 11, 2022 | Team Udayavani |

ದಾವಣಗೆರೆ: ಅಡಿಕೆ ಸಿಪ್ಪೆಯಿಂದತಯಾರಿಸಿದ ಊದುಬತ್ತಿ, ಅಡಿಕೆನಾರಿನ ಮಾಸ್ಕ್ಗಳು, ವೀಳೆÂದೆಲೆಮಿಶ್ರಿತ ಹಲ್ಲಿನ ಪೇಸ್ಟ್‌, ಅಡಿಕೆಉಪ್ಪಿನಕಾಯಿ ಸೇರಿದಂತೆ ಹತ್ತು ಹಲವುಹೊಸ ಪರಿಸರಸ್ನೇಹಿ ಉತ್ಪನ್ನಗಳುನೋಡುಗರ ಕಣ್ಮನ ಸೆಳೆದವು.ಇವು ಯಾವುದೇ ವಸ್ತುಗಳಮಾರಾಟ ಮೇಳದಲ್ಲಿ ಕಂಡುಉತ್ಪನ್ನಗಳಲ್ಲ.

Advertisement

ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಜೈವಿಕತಂತ್ರಜ್ಞಾನ ವಿಭಾಗ ಕಾಲೇಜಿನಲ್ಲಿಸೋಮವಾರ ಏರ್ಪಡಿಸಿದ್ದ ಉತ್ಪನ್ನಮೇಳದಲ್ಲಿ ವಿದ್ಯಾರ್ಥಿಗಳೇಸಂಶೋಧಿಸಿ ಉತ್ಪಾದಿಸಿದ ವಿಶೇಷಉತ್ಪನ್ನಗಳು.ಜೈವಿಕ ತಂತ್ರಜ್ಞಾನದ ಹೊಸತಾಂತ್ರಿಕತೆ ಬಳಸಿ ವಿದ್ಯಾರ್ಥಿಗಳುತಯಾರಿಸಿದ ಒಟ್ಟು 43 ಹೊಸಉತ್ಪನ್ನಗಳು ಪ್ರರ್ದಶನದಲ್ಲಿದ್ದವು.

ಇವುಗಳಲ್ಲಿ ಮುಖ್ಯವಾಗಿ ಅಡಿಕೆಉತ್ಪನ್ನಗಳು, ಹೀಲಿಂಗ್‌ ಉತ್ಪನ್ನಗಳು,ಸಾವಯವ ಮತ್ತು ಪರಿಸರ ಸ್ನೇಹಿಉತ್ಪನ್ನಗಳು, ರೋಗ ನಿರೋಧಕಉತ್ಪನ್ನಗಳು ಹಾಗೂ ಶಕ್ತಿ ವರ್ಧಕಮತ್ತುಖ ಾದ್ಯ ಉತ್ಪನ್ನಗಳುಇದ್ದವು. ಅಡಿಕೆಯ ಶಾಯಿ,ಗಾಯಗಳಿಗೆ ಹಚ್ಚುವ ಜೈವಿಕಮುಲಾಮು, ಕೆಮ್ಮಿಗೆ ಬಳಸುವರಾಸಾಯನಿಕರಹಿತ ಚಾಕೊಲೇಟ್‌,ಗರಿಕೆಯಿಂದ ತಯಾರಿಸದ ಪೇಯ, ಹೇರ್‌ಡೆ„, ಸಾವಯವಲಿಪ್‌ಸ್ಟಿಕ್‌, ಬಯೋಪೆಸ್ಟಿಸೆ„ಡ್‌,ಬಯೋಡಿಗ್ರೆಡಿಬಲ್‌ ಪ್ಲಾಸ್ಟಿಕ್‌, ಸೊಳ್ಳೆನಿರೋಧಕದ್ರಾವಣ, ಜೀವಾನಿಲ,ಸಾವಯವ ಫೇಸ್‌ಕ್ರೀಂ, ಸಾವಯವಫೇಸ್‌ ವಾಶ್‌, ಕಿತ್ತಳೆ ಸಿಪ್ಪೆಯ ಸೋಪ್‌,ಸಸ್ಯಜನಿತ ಮಾಂಸ, ದಾಸವಾಳದಚಾಕೊಲೇಟ್‌, ಹಣ್ಣಿನ ವಿನೇಗರ್‌,ವೆಜೆಟೇಬಲ್‌ ಕೂಕೀಸ್‌, ರಾಗಿ ಮಿಲ್ಕಶೇಕ್‌ ಮತ್ತು ರಾಗಿಚಾಕೊಲೇಟ್‌ಸೇರಿದಂತೆ ಇನ್ನಿತರ ಉತ್ಪನ್ನಗಳುಗಮನ ಸೆಳೆದವು.

ಮೇಳವನ್ನು ಜಿ.ಎಂ. ತಾಂತ್ರಿಕಮಹಾವಿದ್ಯಾಲಯದ ಕಾರ್ಯದರ್ಶಿಜಿ. ಎಂ. ಲಿಂಗರಾಜು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ|ವೈ. ವಿಜಯಕುಮಾರ್‌, ವಿಭಾಗದಮುಖ್ಯಸ್ಥ ಡಾ| ಪ್ರಕಾಶ್‌ ಕೆ.ಕೆ., ಮೇಳದಆಯೋಜಕಿ ದೀಪ್ತಿ ಪಲ್ಲೇದ, ಟ್ರೈನಿಂಗ್‌ಆ್ಯಂಡ್‌ ಪ್ಲೇಸ್‌ಮೆಂಟ್‌ ಆμàಸರ್‌ತೇಜಸ್ವಿ ಕಟ್ಟಿಮನಿ, ಕಾಲೇಜಿನಇತರೆ ವಿಭಾಗದ ಮುಖ್ಯಸ್ಥರುಇದ್ದರು. ಸಂಜೆ ನಡೆದ ಸಮಾರೋಪಸಮಾರಂಭದಲ್ಲಿ ವಿದ್ಯಾರ್ಥಿಗಳುತಯಾರಿಸಿದ ಅತ್ಯುತ್ತಮ ಹೊಸಉತ್ಪನ್ನಗಳಿಗೆ ಅಭಿನಂದನಾ ಪತ್ರನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next