ದಾವಣಗೆರೆ: ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜ. 11 ಹಾಗೂ 12ರಂದು “ಸುಕಲ್ಪ’ರಾಜ್ಯ ಮಟ್ಟದ ತಾಂತ್ರಿಕ ಸ್ಪರ್ಧಾ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲಡಾ| ವೈ. ವಿಜಯಕುಮಾರ್ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ವಿವಿಧ ತಾಂತ್ರಿಕಸ್ಪರ್ಧೆಗಳು ನಡೆಯಲಿವೆ.
ಇದರಲ್ಲಿ ಪ್ರಬಂಧಮಂಡನೆ, ಕೋಡಿಂಗ್ ಸ್ಪರ್ಧೆ, ಪರಿಕಲ್ಪನಾ ಪ್ರಸ್ತುತಿಸೇರಿದಂತೆ ಇನ್ನಿತರ ಸ್ಪರ್ಧೆಗಳು ಒಳಗೊಂಡಿರುತ್ತವೆ.ಕಾರ್ಯಕ್ರಮವು ಐ.ಎಸ್.ಟಿ.ಇ ಸಹಯೋಗದಲ್ಲಿನಡೆಯುತ್ತಿದೆ. ತಾಂತ್ರಿಕ ಸಂಸ್ಥೆಗಳಾದ ಬಿ.ಪಿ.ಎಲ್ಯಾಬ್ಸ್ ಹಾಗೂ ಸೂಕ್ಷ್ಮಸ್ ಸಂಸ್ಥೆಗಳು ಸಹಕಾರನೀಡಿವೆ ಎಂದರು.ರಾಜ್ಯದ ಹಲವಾರು ಎಂಜಿನಿಯರಿಂಗ್ ಕಾಲೇಜುಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಶಿವಮೊಗ್ಗ, ಚಿತ್ರದುರ್ಗ, ರಾಣಿಬೆನ್ನೂರು,ಚಿಕ್ಕಮಗಳೂರು, ಕಾರ್ಕಳ, ಮೈಸೂರು, ಬೆಂಗಳೂರುನಗರಗಳಿಂದ ವಿದ್ಯಾರ್ಥಿಗಳು ನೋಂದಣಿಮಾಡಿಸಿದ್ದಾರೆ. ಸ್ಪರ್ಧಾ ವಿಜೇತರಿಗೆ 25,000ರೂ.ಗಳ ನಗದು ಪುರಸ್ಕಾರ ಸಹ ನೀಡಲಾಗುವುದುಎಂದು ತಿಳಿಸಿದರು.ಸುಕಲ್ಪದ ಸಂಚಾಲಕ ಡಾ| ಸುನೀಲಕುಮಾರ್‌ಮಾತನಾಡಿ, ಕಾರ್ಯಕ್ರಮಕ್ಕೆ ಜ. 11ರಂದು ಬೆಳಿಗ್ಗೆ9:30ಕ್ಕೆ ಬೆಂಗಳೂರಿನ ಡಾ| ಶರ್ವಣಿ ಜಿ.ಎಸ್.ಚಾಲನೆ ನೀಡುವರು.
ಸ್ಪರ್ಧೆಗಳು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ನಡೆಯಲಿದ್ದು, ಆಫ್‌ಲೈನ್‌ನಲ್ಲಿ ನಗರದಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು ಮಾತ್ರಭಾಗವಹಿಸಲಿದ್ದಾರೆ ಎಂದರು.ಉತ್ಪಾದನಾ ಮೇಳ: ಜಿಎಂಐಟಿ ಕಾಲೇಜಿನ ಜೈವಿಕತಂತ್ರಜ್ಞಾನ ವಿಭಾಗದಿಂದ ಜ. 10ರಂದು ಉತ್ಪಾದನಾಮೇಳವನ್ನು ಕಾಲೇಜಿನಲ್ಲಿ ಸಂಘಟಿಸಲಾಗಿದೆ ಎಂದುಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥಡಾ| ಪ್ರಕಾಶ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಮೇಳವು ಕೇವಲ ಉತ್ಪನ್ನಗಳ ಪ್ರದರ್ಶನವಾಗಿದ್ದುಇದರಲ್ಲಿ ವಿದ್ಯಾರ್ಥಿಗಳು ಹೊಸ ಉತ್ಪನ್ನತಯಾರಿಕೆಗೆ ಬೇಕಾಗುವ ಕೌಶಲ್ಯಗಳನ್ನುವಿವರಿಸಲಿದ್ದಾರೆ. ಮೇಳದ ಮೂಲಕ ಜೈವಿಕತಂತ್ರಜ್ಞಾನದ ಹೊಸ ತಾಂತ್ರಿಕತೆಯಿಂದ ಮನುಕುಲಕ್ಕೆಉಪಯೋಗವಾಗುವುದಕ್ಕೆ ಒತ್ತು ನೀಡಲಾಗುತ್ತಿದೆ.ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದಒಟ್ಟು 43ಉತ್ಪನ್ನಗಳನ್ನು ನಾಲ್ಕು ವಿಭಾಗದಲ್ಲಿವರ್ಗೀಕರಿಸಲಾಗಿದೆ.
ಹೀಲಿಂಗ್ ಉತ್ಪನ್ನಗಳು,ಸಾವಯವ ಉತ್ಪನ್ನಗಳು, ಪರಿಸರಸ್ನೇಹಿ ಉತ್ಪನ್ನಗಳುಹಾಗೂ ರೋಗ ನಿರೋಧಕ ಉತ್ಪನ್ನಗಳು ಮತ್ತುಶಕ್ತಿವರ್ಧಕ, ಖಾದ್ಯ ಉತ್ಪನ್ನಗಳು ಇದರಲ್ಲಿವೆ ಎಂದುಮೇಳದ ಆಯೋಜಕಿ ದೀಪ್ತಿ ಪಲ್ಲೇದ್ ಮಾಹಿತಿನೀಡಿದರು.ಸುಕಲ್ಪ ಕಾರ್ಯಕ್ರಮ ಸಂಯೋಜಕ ಅಮಿತ್‌ಶೇಖರ್, ತರಬೇತಿ ಹಾಗೂ ನೇಮಕಾತಿವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.