ಹೊನ್ನಾಳಿ: ಮೌನಾನುಷ್ಠಾನದಿಂದ ದೇವರಪೂಜೆ, ಪ್ರಾರ್ಥನೆ ಮಾಡುವುದರಿಂದ ಸರ್ವರಅಭಿವೃದ್ಧಿಯಾಗುತ್ತದೆ. ಹಾಗಾಗಿ ಮಾತಿಗಿಂತಮೌನಕ್ಕೇ ಹೆಚ್ಚು ಮಹತ್ವವಿದೆ ಎಂದು ಹೊಟ್ಯಾಪುರಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.
ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಶ್ರೀಹುತ್ತೇಶ್ವರ ದೇಗುಲದ ಅವರಣದಲ್ಲಿ ಶುಕ್ರವಾರ ರಾತ್ರಿ ಹೊನ್ನಾಳಿ ಶ್ರೀ ಚನ್ನಪ್ಪ ಸ್ವಾಮಿ ಹಿರೇಕಲ್ಮಠದಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿಯವರು ಲೋಕಕಲ್ಯಾಣಾರ್ಥವಾಗಿಮೂರು ದಿನಗಳ ಕಾಲ ಮೌನ ಇಷ್ಟಲಿಂಗಪೂಜಾನುಷ್ಠಾನದ ಅಂಗವಾಗಿ ಹಮ್ಮಿಕೊಂಡಿದ್ದಧರ್ಮಸಭೆಯ ಉದ್ಘಾಟನೆ ನೆರವೇರಿಸಿ ಶ್ರೀಗಳುಆಶೀರ್ವಚನ ನೀಡಿದರು.ಗಡಿ ಕಾಯುವ ಸೈನಿಕರು ಹಾಗೂ ಅನ್ನ ಕೊಡುವರೈತರು ದೇಶದ ಎರಡು ಕಣ್ಣುಗಳಿದ್ದಂತೆ. ಸೈನಿಕರಹಾಗೂ ರೈತರ ನಿಸ್ವಾರ್ಥ ದುಡಿಮೆಗೆ ಬೆಲೆಕಟ್ಟಲಾಗದು.
ದೇಶದ ಪ್ರಜೆಗಳು ನೆಮ್ಮದಿಯಿಂದಬದುಕುತ್ತಿರುವುದರ ಹಿಂದೆ ಸೈನಿಕರ ಶ್ರಮವಿದೆ.ಸೈನಿಕರು ಗಡಿಯಲ್ಲಿ ಚಳಿ, ಮಳೆ, ಗಾಳಿ, ಬಿಸಿಲುಲೆಕ್ಕಿಸದೆ ದೇಶ ಕಾಯುತ್ತಾ ಜನರಿಗೆ ರಕ್ಷಣೆನೀಡುತ್ತಿದ್ದಾರೆ. ಅನ್ನ ಕೊಡುವ ರೈತ, ದೇಶ ಕಾಯುವಸೈನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪಮಾತನಾಡಿ, ಧಾರ್ಮಿಕ, ಆಧಾತ್ಮಿಕ ಕಾರ್ಯದಜೊತೆಗೆ ಶೈಕ್ಷಣಿಕ, ಸಾಮಾಜಿಕ ಪರಿಸರವನ್ನುನಿರಂತರವಾಗಿ ಕ್ರಿಯಾಶೀಲಗೊಳಿಸುವಲ್ಲಿ ಹಾಗೂಸಮಾಜದ ಹಿತವನ್ನು ಕಾಪಾಡುವಲ್ಲಿ ಲಿಂಗೈಕ್ಯಒಡೆಯರ್ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿಯವರ ಕೊಡುಗೆ ಅಪಾರ. ಈಗಿನಚನ್ನಮಲ್ಲಿಕಾರ್ಜುನ ಶ್ರೀಗಳು ಲೋಕ ಕಲ್ಯಾಣಕ್ಕಾಗಿಜಗತ್ತಿಗೆ ಬೆಳಕು ಚೆಲ್ಲುವಂತಹ ಕೆಲಸ ಮಾಡುತ್ತಿದ್ದರೆಎಂದು ಶ್ಲಾಘಿಸಿದರು.
ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕಧನಂಜಯಪ್ಪ ಗಡೆಕಟ್ಟೆ ಉಪನ್ಯಾಸ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಶಿಲ್ಪಾ ಮಂಜಪ್ಪ,ಗಿರೀಶ್, ಪತ್ರಕರ್ತರಾದ ಪರಮೇಶ್ವರಪ್ಪ,ಎಂ.ಎಸ್. ಶಾಸ್ತ್ರಿ ಹೊಳೆಮs…, ಶಿಕ್ಷಕ ರಾಜಶೇಖರಪ್ಪಮಾತನಾಡಿದರು. ಅನ್ನದಾನಯ್ಯ ಶಾಸ್ತ್ರಿ, ತೆಂಗಿನಕಾಯಿರಾಜಪ್ಪ, ಉಮೇಶ್, ಮಠದ ಹುತ್ತೇಶಯ್ಯ ಇದ್ದರು.ಶ್ರೀ ಚನ್ನೇಶ್ವರ ಗಾನ ಕಲಾ ಸಂಘದವರಿಂದ ಸಂಗೀತಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಜರುಗಿದವು