Advertisement

ದಾರ್ಶನಿಕರನ್ನುಜಾತಿಗೆ ಸೀಮಿತಗೊಳಿಸದಿರಿ

02:41 PM Jan 02, 2022 | Team Udayavani |

ದಾವಣಗೆರೆ: ಮಹಾನ್‌ ವ್ಯಕ್ತಿಗಳನ್ನು ನಿರ್ದಿಷ್ಟಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರುಇಡೀ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಎಲ್ಲರೂಸ್ಮರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಹೇಳಿದರು.

Advertisement

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರಆಯೋಜಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ ಮಾತನಾಡಿದರು. ಮಹಾನ್‌ ಚೇತನಗಳಸ್ಮರಣೆಗೆ ಸರ್ಕಾರದ ವತಿಯಿಂದ ಜಯಂತಿಆಚರಣೆ ಮಾಡಲಾಗುತ್ತದೆ. ಸೂರ್ಯ, ಚಂದ್ರ,ಭೂಮಿ ಇರುವವರೆಗೂ ಅಮರಶಿಲ್ಪಿ ಜಕಣಾಚಾರಿಅಮರವಾಗಿರುತ್ತಾರೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ|ವಿಜಯಮಹಾಂತೇಶ ದಾನಮ್ಮನವರ್‌ ಮಾತನಾಡಿ,ಬೇಲೂರು ಹಳೇಬೀಡುಗಳಲ್ಲಿ ಜಕಣಾಚಾರ್ಯರಶಿಲ್ಪಕಲೆಯ ವೈವಿಧ್ಯತೆ ಹಾಗೂ ವೈಭವವನ್ನುಕಾಣಬಹುದಾಗಿದೆ. ವಿಶ್ವಕರ್ಮ ಅಭಿವೃದ್ಧಿನಿಗಮ ಸ್ಥಾಪನೆ ಮಾಡುವ ಮೂಲಕ ಸರ್ಕಾರ ಈಸಮುದಾಯದ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆಎಂದು ತಿಳಿಸಿದರು.ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದಮಾತನಾಡಿ, ಕನ್ನಡ ನಾಡು ದೇಶದಲ್ಲಿಯೇಶಿಲ್ಪಕಲೆಗೆ ಶ್ರೀಮಂತವಾಗಿದ್ದು ಅದನ್ನು ನೋಡಲುವಿದೇಶಿಯರು ಬರುತ್ತಿದ್ದಾರೆ. ಇದರ ಕೀರ್ತಿಅಮರಶಿಲ್ಪಿ ಜಕಣಚಾರಿಯವರಿಗೆ ಸಲ್ಲುತ್ತದೆ.

ಸರ್ಕಾರದ ವತಿಯಿಂದ ಅವರ ಜಯಂತಿಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌,ನಗರಕೋಶದ ಯೋಜನಾಧಿಕಾರಿ ನಜ್ಮಾ, ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರವಿಚಂದ್ರ, ವಿಶ್ವಕರ್ಮ ಸಮಾಜದ ನಾಗೇಂದ್ರಚಾರಿ,ವಿರೇಂದ್ರಚಾರಿ, ಸಾಲುಮರದ ವೀರಾಚಾರಿ,ತಹಶೀಲ್ದಾರ್‌ ಬಿ.ಎಸ್‌. ಗಿರೀಶ್‌, ಹರಿಹರತಹಸೀಲ್ದಾರ್‌ ರಾಮಚಂದ್ರ ಹಾಗೂ ಇತರರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next