ದಾವಣಗೆರೆ: ಪಂಚಮಸಾಲಿ, ವಾಲ್ಮೀಕಿ ನಾಯಕ, ಕುರುಬ ಸಮಾಜದಿಂದಮೀಸಲಾತಿಗೆ ಪ್ರಬಲ ಹೋರಾಟ, ಅಬ್ಬರಿಸಿದ ಕೊರೊನಾ, ಪ್ರಾಣವಾಯು,ಲಸಿಕೆಗಾಗಿ ಪರದಾಟ, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದಅಮಿತ್ ಶಾ ಹೇಳಿಕೆ, ಗಮನ ಸೆಳೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ, ದಾಖಲೆಮಳೆ, ಅತಿವೃಷ್ಟಿ, ವರ್ಷಾಂತ್ಯದಲ್ಲಿ ಆಪಘಾತಗಳ ಸರಮಾಲೆ..
,ಇವು ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ 2021ರಲ್ಲಿ ಘಟಿಸಿದ ಕೆಲ ಪ್ರಮುಖ ಘಟನಾವಳಿ. ಬೆಣ್ಣೆ ನಗರಿ… ಖ್ಯಾತಿಯದಾವಣಗೆರೆ ಜಿಲ್ಲೆ ಸಿಹಿಗಿಂತಲೂ ಹೆಚ್ಚಾಗಿ ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.ಮಹಾಮಾರಿ ಕೊರೊನಾ ರೂಪಾಂತರಿ ಒಮಿಕ್ರಾನ್‌ನ ಭಯ, ಆತಂಕದನಡುವೆಯೇ ಜಿಲ್ಲೆಯ ಜನರು ಹೊಸ ನಿರೀಕ್ಷೆಯೊಂದಿಗೆ ನೂತನ ವರ್ಷ2022ರ ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆಮೀಸಲುಹೋರಾಟಕಳೆದ ಕೆಲವಾರು ವರ್ಷದಿ ಂದ ಪ್ರಬಲ ಪಂಚಮಸಾಲಿ ಸಮಾಜಕ್ಕೆಪ್ರವರ್ಗ-2ಎ ಮೀಸಲಾತಿ ನೀಡಬೇಕು ಎಂಹ ಹೋರಾಟ ಜಾರಿಯಲ್ಲಿದೆ.
ಹರಿಹರದ ಹರ ಪೀಠದಲ್ಲಿ ಜ.14 ಮತ್ತು 15ರಂದು ನಡೆದ ಹರ ಜಾತ್ರೆಹೋರಾಟ ಕಾವನ್ನು ಇ®ಷು ° r ಹೆಚ್ಚಿಸಿತು.2ಎ ಮೀಸಲಾತಿಗೆ ಒತ್ತಾಯಿಸಿ ಶ್ರೀಜಯಮೃತ್ಯುಂಜಯ ಸ್ವಾಮೀಜಿ ಕೂಡಲ ಸಂಗಮದಿಂದ ಬೆಂಗಳೂರಿಗೆಪ್ರಾರಂಭಿಸಿದ ಪಾದಯಾತ್ರೆ ದಾವಣಗೆರೆ ಆಗಮಿಸಿದ ನಂತರ ಹೊಸರೂಪವೇ ಪಡೆಯಿತು. ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಪಾದಯಾತ್ರೆ ಕೂಡಿಕೊಂಡಿದ್ದಲ್ಲದೆ ಸರ್ಕಾರದ ವಿರುದ್ಧ ಬಾರು ಕೋಲುಚಳವಳಿಗೆ ನಾಂದಿ ಹಾಡಿದರು. ಉಭಯ ಜಗದ್ಗುರುಗಳು ಜೊತೆಯಾಗಿದಾವಣಗೆರೆಯಿಂದಪ್ರಾರಂಭಿಸಿದಪಾದಯಾತ್ರೆಪಂಚಮಸಾಲಿಸಮಾಜದಬಹು ದಿನಗಳ ಬೇಡಿಕೆ ಈಡೇರುವ ಸ್ಪಷ್ಟ ವಾತಾವರಣ ನಿರ್ಮಾಣಮಾಡಿದೆ. ವರ್ಷಾಂತ್ಯಕ್ಕೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ಹೆಗ್ಡೆ ದಾವಣಗೆರೆ ಜಿಲ್ಲೆಯಿಂದಯೇ ಸಮೀಕ್ಷೆ ಪ್ರಾರಂಭಿಸಿರುವುದುಸಮಾಜ ಬಾಂಧವರಲ್ಲಿ ಆಶಾಕಿರಣ ಮೂಡಿಸಿದೆ.
ಸಾಮಾಜಿಕ, ರಾಜಕೀಯಕ್ಷೇತ್ರದ ಮಾದರಿಯಲ್ಲೇ ಶೈಕ್ಷಣಿಕ ಮತ್ತು ಉದ್ಯೋಗ ಕàತೆÒ Åದಲ್ಲೂಅನ್ವಯವಾಗು ವಂತೆ ಶೇ.7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿರಾಜನಹಳ್ಳಿ ವಾಲೀ¾ಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿನೇತೃñದಲ್ಲಿ Ì ಬೆಂಗಳೂರು ಪಾದಯಾತ್ರೆ ಒಳಗೊಂಡಂತೆ ವಿವಿಧ ಹಂತದಹೋರಾಟ ನಡೆದಿವೆ. ಈಗ್ಗೂ ಹೋರಾಟ ಜಾರಿಯಲ್ಲಿದೆ. ಫೆಬ್ರವರಿಯಲ್ಲಿರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ, ಶೇ.7.5 ಮೀಸಲಾತಿ ನೀಡಬೇಕು.ಇಲ್ಲವಾದಲ್ಲಿ ತಾವು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ.
ನಾನೇದರೂ ಸñರೇ¤ … ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪಮುಂದೆಯೇ ಹೇಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಮೀಸಲಾತಿನೀಡುವ ಭರವಸೆ ನೀಡಿದ ನಂತರವೇ ವಾತಾವರಣ ತಿಳಿಯಾಗಿತ್ತು.ರಾಜ್ಯದ ಮತ್ತೂಂದು ಪ್ರಬಲ ಕುರುಬ ಸಮಾಜವನ್ನ ಪರಿಶಿಷ್ಟ ಜಾತಿ ಪಟ್ಟಿಗೆಸೇರಿಸಬೇಕು ಎಂದು ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆನಡೆದಶ್ರೀನಿರಂಜನಾನಂದಪುರಿಸ್ವಾಮೀಜಿನೇತೃತ್ವದಲ್ಲಿನಡೆದಪಾದಯಾತ್ರೆದಾವಣಗೆರೆ ಜಿಲ್ಲೆಯ ಮೂಲಕ ಮುಂದೆ ಸಾಗಿತು. ಸ್ವಾಮೀಜಿಯವರಪಾದಯಾತ್ರೆ ಜಿಲ್ಲೆಯಲ್ಲಿ ಹೊಸ ರೂಪ ಪಡೆದಿದ್ದು ಇತಿಹಾಸ.
ರಾ. ರವಿಬಾಬು