Advertisement

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಲಿ

03:13 PM Dec 26, 2021 | Team Udayavani |

ಹೊನ್ನಾಳಿ: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರುಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಗ್ರಾಮ ಸಂಪನ್ಮೂಲವ್ಯಕ್ತಿ ಚಂದ್ರಕಲಾ ಹೇಳಿದರು.ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶ್ರೀಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತ ಮಹಾವಿದ್ಯಾಲಯದಎನ್ನೆಸ್ಸೆಸ್‌ ಘಟಕದ ವತಿಯಿಂದ ಪಟ್ಟಣದ ಹಿರೇಕಲ್ಮಠದಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿಉತ್ತಮ ಆಡಳಿತ ನೀಡುವಲ್ಲಿ ಗ್ರಾಪಂ ಸದಸ್ಯರಪಾತ್ರ ಕುರಿತು ಅವರು ಮಾತನಾಡಿದರು.

Advertisement

ಮಹಿಳಾಮೀಸಲಾತಿಯಿಂದಾಗಿ ಜನಪ್ರತಿನಿಧಿಗಳಾಗಿಆಯ್ಕೆಯಾಗುವಮಹಿಳೆಯರು ಸಂಬಂಧಿಸಿದ ಸಂಸ್ಥೆಗಳಲ್ಲಿ ಸಕ್ರಿಯವಾಗಿಕಾರ್ಯನಿರ್ವಹಿಸುವ ಮೂಲಕ ತಾವು ರಬ್ಬರ್‌ ಸ್ಟಾಂಪ್‌ಗಳಲ್ಲ ಎಂಬುದನ್ನು ತೋರಿಸಬೇಕು. ಸಾಮಾಜಿಕ ನ್ಯಾಯಸಭೆಯಲ್ಲಿ ಕನಿಷ್ಠ ಓರ್ವ ಮಹಿಳೆ ಇರಬೇಕು. ಈ ನಿಟ್ಟಿನಲ್ಲಿಎಲ್ಲರೂ ಒತ್ತಡ ಹೇರಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಯುವರಾಜ್‌ ಎಂ. ಜಕ್ಕಾಳಿ ಮಾತನಾಡಿ,ಗ್ರಾಪಂ ಚುನಾವಣೆಗಳು ನಡೆಯುವ ಬಗೆ ಹಾಗೂ ಗ್ರಾಪಂಸದಸ್ಯರಕರ್ತವ್ಯಗಳ ಬಗ್ಗೆ ವಿವರಿಸಿದರು.

ಕೈಗಾರಿಕಾ ತರಬೇತಿಕೇಂದ್ರದ ಪ್ರಾಂಶುಪಾಲ ಜಗದೀಶ್‌ ಮೋತಿ ಕಾರ್ಯಕ್ರಮಉದ್ಘಾಟಿಸಿದರು.ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಮಹಾವಿದ್ಯಾಲಯದ ಪ್ರಾಂಶುಪಾಲ ಎಚ್‌.ಎಂ.ಗುರುಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಐಟಿಐ ಕಾಲೇಜಿನಕಿರಿಯ ತರಬೇತಿ ಅಧಿಕಾರಿಗಳಾದ ರಾಮಚಂದ್ರಪ್ಪಕಡೇಮನಿ, ಕೋರಿ ಯೋಗೀಶ್‌ ಕುಳಗಟ್ಟೆ, ಶ್ರೀಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ನಿಜಗುಣ ಶಿವಯೋಗಿ, ಟಿ. ಶಿವರಾಜ್‌, ಎನ್ನೆಸ್ಸೆಸ್‌ಕಾರ್ಯಕ್ರಮಾಧಿಕಾರಿ ಪ್ರತಿಮಾ ನಿಜಗುಣ ಶಿವಯೋಗಿ,ಎಲ್‌.ಆರ್‌. ಅಪೇûಾ, ಮಂಗಳಗೌರಮ್ಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next