Advertisement

29ರಂದು ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ

03:05 PM Dec 26, 2021 | Team Udayavani |

ದಾವಣಗೆರೆ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ವತಿಯಿಂದರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಡಿ. 29ರಂದು ಶಿವಮೊಗ್ಗದ ಕುವೆಂಪುರಂಗಮಂದಿರದಲ್ಲಿ ಸಂಘಟಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ|ಎಂ.ಆರ್‌. ಜಗದೀಶ್‌ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ತಿನ ರಾಜ್ಯಾಧ್ಯಕ್ಷಹುಲಿಕಲ್‌ ನಟರಾಜ್‌ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ.

Advertisement

ಇದೇ ಸಂದರ್ಭದಲ್ಲಿವಿಶ್ವ ಮಾನವ ದಿನಾಚರಣೆ, ರಾಜ್ಯಮಟ್ಟದ ಎಚ್‌.ಎನ್‌. ನರಸಿಂಹಯ್ಯ ಪ್ರಶಸ್ತಿಪ್ರದಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಉದ್ಘಾಟಿಸುವರು. ಇಸ್ರೋ ಮಾಜಿ ಅಧ್ಯಕ್ಷ ಡಾ| ಎ.ಎಸ್‌. ಕಿರಣ್‌ ಕುಮಾರ್‌ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಕೆ.ಎಸ್‌. ಈಶ್ವರಪ್ಪ, ಆರಗ ಜ್ಞಾನೇಂದ್ರ,ಡಾ| ಅಶ್ವತ್ಥನಾರಾಯಣ, ಬಿ.ಸಿ. ನಾಗೇಶ್‌, ಸಂಸದ ಬಿ.ವೈ. ರಾಘವೇಂದ್ರಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಹುಲಿಕಲ್‌ ನಟರಾಜ್‌ ಅಧ್ಯಕ್ಷತೆವಹಿಸುವರು.

ವಿಚಾರಗೋಷ್ಠಿಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭಕ್ಕೆ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು. ರಾಜ್ಯಮಟ್ಟದಎಚ್‌.ಎನ್‌. ಪ್ರಶಸ್ತಿಯನ್ನು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿಮುರುಘಾ ಶರಣರಿಗೆಹಾಗೂಮರಣೋತ್ತರವಾಗಿನಟಪುನೀತ್‌ರಾಜಕುಮಾರ್‌ಅವರಿಗೆ ಪ್ರದಾನ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ದಾವಣಗೆರೆಯಿಂದತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಂ.ಜಿ. ಬಸವನಗೌಡ ಅವರಿಗೆಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಿರ್ದೇಶಕರಾದ ಬಿ.ಸಿ. ಸಿದ್ದಪ್ಪ, ಕೆ.ಎಂ. ರುದ್ರಮುನಿ ಸ್ವಾಮಿ,ಕೆ.ಸಿ. ರಾಜೇಂದ್ರಪ್ರಸಾದ್‌ ಹಾಗೂ ಸಿ.ಎಂ. ಪ್ರೇಮ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next