Advertisement

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಅನುದಾನ ವಿನಿಯೋಗಿಸಿ

07:56 PM Dec 25, 2021 | Team Udayavani |

ದಾವಣಗೆರೆ: ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಲ್ಲಿಮೀಸಲಿಟ್ಟ ಅನುದಾನವನ್ನ ಸಂಕಷ್ಟದಲ್ಲಿರುವಪತ್ರಕರ್ತರ ನೆರವಿಗೆ ವಿನಿಯೋಗಿಸಬೇಕು ಎಂದುಒತ್ತಾಯಿಸಿ ಶುಕ್ರವಾರ ಪತ್ರಕರ್ತರ ನಿಯೋಗಮೇಯರ್‌ ಎಸ್‌.ಟಿ. ವೀರೇಶ್‌ ಅವರಿಗೆಒತ್ತಾಯಿಸಿದೆ.ಜಿಲ್ಲೆಯ ಪತ್ರಕರ್ತರು ಪ್ರಸಕ್ತ ಕೋವಿಡ್‌-19ಪ್ರಾರಂಭವಾದ ದಿನದಿಂದ ಈವರೆಗೆ ಆರ್ಥಿಕಸಮಸ್ಯೆ ಎದುರಿಸು ತ್ತಿದ್ದಾರೆ.

Advertisement

ಮಹಾನಗರಪಾಲಿಕೆಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆಮೀಸಲಿಟ್ಟ ಹಣವನ್ನು ನೀಡುವ ಮೂಲಕನೆರವಾಗಬೇಕು ಎಂದು ಒತ್ತಾಯಿಸಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರುಮತ್ತು ಮಾನ್ಯತೆ ಪಡೆದ ಪತ್ರಿಕೆಗಳಲ್ಲಿವರದಿಗಾರರಾಗಿ ಕಾರ್ಯನಿರ್ವಹಿಸುವವರುಅನಾರೋಗ್ಯಕ್ಕೆ ತುತ್ತಾದವರಿಗೆ ವೈದ್ಯರ ವರದಿಅನ್ವಯ ಆರ್ಥಿಕ ನೆರವು ನೀಡಬೇಕು. ಆಕಸ್ಮಿಕಸಾವು ಕಂಡಾಗ ಕುಟುಂಬಕ್ಕೆ ಆರ್ಥಿಕ ನೆರವುನೀಡುವಂತಾಗಬೇಕು.

ಯಾವುದೇ ವಯಸ್ಸಿನನಿರ್ಬಂಧ ವಿಧಿಸಬಾರದು ಎಂದು ತಿಳಿಸಿದರು.ಮಾನ್ಯತೆ ಹೊಂದಿದ ಪತ್ರಿಕೆಗಳ ಸಂಪಾದಕರುಮತ್ತು ಮಾಲಿಕರಿಂದ ಹಾಗೂ ವಾರ್ತಾಇಲಾಖೆಯಿಂದ ದೃಢೀಕರಿಸಬೇಕು ಹಾಗೂಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅನುಮೋದನೆ ಪರಿಗಣಿಸಿ ಪತ್ರಕರ್ತರಿಗೆ ಆರ್ಥಿಕಸಹಾಯ ನೀಡಬೇಕು. ಮಾದ್ಯಮ ಪಟ್ಟಿಯಲ್ಲಿರುವಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ವೀರಪ್ಪ ಎಂ. ಬಾವಿ ಮಾತನಾಡಿ,ಪ್ರಸಕ್ತ ವರ್ಷದ ಮಹಾನಗರ ಪಾಲಿಕೆಯಆಯವ್ಯಯದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ10 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಆದರೆ,ಇದುವರೆಗೂ ಆರ್ಥಿಕ ಸಮಸ್ಯೆಯಲ್ಲಿರುವಪತ್ರಕರ್ತರ ಸಂಕಷ್ಟಕ್ಕೆ ನೆರವಾಗಿಲ್ಲ. ಶಿವಮೊಗ್ಗಹಾಗೂ ಬೆಂಗಳೂರು ಬಿಬಿಎಂಪಿಯಲ್ಲಿ ಪತ್ರಕರ್ತರಕ್ಷೇಮಾಭಿವೃದ್ಧಿಗೆ ಹಣ ಮೀಸಲಿಟ್ಟಿದ್ದು ಅಲ್ಲಿನಕಾನೂನುಗಳ ಚೌಕಟ್ಟಿನಡಿ ಚರ್ಚಿಸಿ ತೀರ್ಮಾನಕ್ಕೆಬರುವಂತೆ ತಿಳಿಸಿದರು.

ಮನವಿ ಸ್ವೀಕರಿಸಿದ ಮೇಯರ್‌ ಎಸ್‌. ಟಿ.ವಿರೇಶ್‌ ಮಾತನಾಡಿ, ಜಿಲ್ಲಾ ಕಾರ್ಯ ನಿರತಪತ್ರಕರ್ತರ ಸಂಘ ನೀಡಿದ ಮನವಿಯಲ್ಲಿತಿಳಿಸಿರುವ ಕಾನೂನುಗಳು ಸೂಕ್ತವಾಗಿದ್ದು ಈಬಗ್ಗೆ ಇನ್ನೊಮ್ಮ ಸಭೆ ನಡೆಸಿ ಅಂತಿಮ ರೂಪನೀಡುವುದಾಗಿ ಭರವಸೆ ನೀಡಿದರು.ಪತ್ರಕರ್ತರಾದ ಬಾ.ಮ. ಬಸವರಾಜಯ್ಯ,ಬಸವರಾಜ್‌ ದೊಡ್ಡಮನಿ, ಡಾ| ಸಿ. ವರದರಾಜ್‌,ಎಚ್‌. ಎಂ. ಪಿ. ಕುಮಾರ್‌, ಇ.ಎಂ. ಮಂಜುನಾಥ್‌,ಮಾಗನೂರು ಮಂಜಪ್ಪ, ಕೆ. ಚಂದ್ರಣ್ಣ, ಆರ್‌.ಎಸ್‌. ತಿಪ್ಪೇಸ್ವಾಮಿ, ವಾರ್ತಾಧಿ ಕಾರಿ ಅಶೋಕ್‌ಕುಮಾರ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next