Advertisement

ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ

12:35 PM Dec 25, 2021 | Team Udayavani |

ದಾವಣಗೆರೆ: ಗ್ರಾಹಕರು ಕೊಳ್ಳುವ, ಪಡೆಯುವಸೇವೆಯ ಗುಣಮಟ್ಟ, ಪ್ರಮಾಣ, ಬೆಲೆ ಒಳಗೊಂಡಂತೆಮುಖ್ಯ ಅಂಶಗಳನ್ನ ಪರಿಶೀಲಿಸಬೇಕು ಎಂದು ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷಗೋಖಲೆ ಘಾಳಪ್ಪ ತಿಳಿಸಿದರು.

Advertisement

ಶುಕ್ರವಾರ ಜನತಾಬಜಾರ್‌ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರಮಾಹಿತಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಬದುಕಿನಲ್ಲಿ ಎಲ್ಲರೂಗ್ರಾಹಕರೇ. ಯಾವುದೇ ವಸ್ತು ಕೊಂಡುಕೊಳ್ಳುವಮೊದಲು ಗ್ರಾಹಕರು ಗುಣಮಟ್ಟ ಉತ್ತಮ,ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿಯೇಖರೀದಿಸಬೇಕು ಎಂದರು.

ಗ್ರಾಹಕರು ಪಡೆಯುವ ಸೇವೆ, ಖರೀದಿಗೆಪ್ರತಿಯಾಗಿ ಬಿಲ್‌ ಅಥವಾ ರಸೀದಿ ತಪ್ಪದೆ ಕೇಳಿಪಡೆಯಬೇಕು. ಗ್ರಾಹಕರು ಎಚ್ಚರ ಆಗುವವರೆಗೂಅನ್ಯಾಯ, ಶೋಷಣೆ ಹಾಗೂ ಮೋಸ ನಿಲ್ಲುವುದಿಲ್ಲ.ವ್ಯಾಪಾರ, ಖರೀದಿ, ಸೇವೆ ಹೀಗೆ ವಿವಿಧವ್ಯವಹಾರಗಳಲ್ಲಿ ವಂಚನೆ, ಅನ್ಯಾಯ ಹಾಗೂಮೋಸಕ್ಕೆ ಒಳಗಾಗುವ ಗ್ರಾಹಕರು ಜಿಲ್ಲಾ ಗ್ರಾಹಕರವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿಪರಿಹಾರ ಪಡೆದುಕೊಳ್ಳಲು ಮುಂದಾಗಬೇಕು ಎಂದುತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next