ದಾವಣಗೆರೆ: ಬೆಳೆ ಪರಿಹಾರ ವಿತರಣೆಗೆಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಚಾರಿತ್ರಿಕ,ಮಹತ್ವಪೂರ್ಣ ಮತ್ತು ಐತಿಹಾಸಿಕ ನಿರ್ಣಯಕೈಗೊಂಡಿದೆ ಎಂದು ಜಿಲ್ಲಾ ಬಿಜೆಪಿ ಆಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಪರಿಹಾರ ಮೊತ್ತವನ್ನುಹೆಚ್ಚಿಸುವ ಮಹತ್ವಪೂರ್ಣ ನಿರ್ಧಾರ ಕೈಗೊಳ್ಳುವಮೂಲಕ ಬಿಜೆಪಿ ರೈತರ ಪರ ಸರ್ಕಾರ ಎಂಬುದನ್ನುಮತ್ತೂಮ್ಮೆ ಸಾಬೀತುಪಡಿಸಿದ್ದಾರೆ ಎಂದರು.
ಒಣ ಬೇಸಾಯ ಪದ್ಧತಿಯಲ್ಲಿನ ಒಂದು ಹೆಕ್ಟೇರ್‌ಪ್ರದೇಶದಲ್ಲಿನ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿವಿಕೋಪ ನಿಧಿ ಯಿಂದ 6,800 ರೂ. ಪರಿಹಾರನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್‌ನ 6,800 ರೂ. ಜೊತೆಗೆ 6,800 ರೂ. ಕೊಡಲುನಿರ್ಧರಿಸಿದೆ. ರೈತರಿಗೆ ಒಟ್ಟೂ 13,600 ರೂಪಾಯಿಪರಿಹಾರ ದೊರೆಯಲಿದೆ.
ಸರ್ಕಾರ ಬರೀ ಬಾಯಿಮಾತಿನಲ್ಲಿ ಹೇಳದೆ ಹಣಕಾಸನ್ನುಮೀಸಲಿಟ್ಟಿರುವುದುರೈತರ ಪರ ಕಾಳಜಿಗೆ ಸಾಕ್ಷಿ ಎಂದು ತಿಳಿಸಿದರು.ನೀರಾವರಿ ಪ್ರದೇಶದ ಒಂದು ಹೆಕ್ಟೇರ್‌ಪ್ರದೇಶದಲ್ಲಿನ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿವಿಕೋಪ ನಿಧಿಯಿಂದ 13,500 ರೂ. ಪರಿಹಾರನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ 11,500 ರೂ.ಪರಿಹಾರ ಹೆಚ್ಚುವರಿಯಾಗಿ ನೀಡಲಿದೆ. ರೈತರಿಗೆಒಂದು ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 25 ಸಾವಿರರೂ. ಪರಿಹಾರ ದೊರೆಯಲಿದೆ. ರಾಜ್ಯ ಸರ್ಕಾರಕ್ಕೆ 12ಸಾವಿರ ಕೋಟಿ ರೂಪಾಯಿ ಹೆಚ್ಚುವರಿಯಾದರೂರೈತರ ಮೇಲಿನ ಕಾಳಜಿಯಿಂದ ಪರಿಹಾರ ಮೊತ್ತಹೆಚ್ಚಿಸಿರುವುದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಪ್ರಮಾಣವಚನ ಸೀÌಕರಿಸಿದ ದಿನವೇ ರೈತರ ಮಕ್ಕಳಿಗೆಶಿಷ್ಯ ವೇತನ ಘೋಷಣೆ ಮಾಡಿದ್ದರು. ಇದೀಗ ರಾಜ್ಯಸರ್ಕಾರ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವಬಗ್ಗೆ ಅಧಿಕೃತ ಆದೇಶ ಹೊರಡಿಸಿ, ಅನುಷ್ಠಾನಕ್ಕೆತಂದಿರುವುದರಿಂದ ನಾಡಿನ ರೈತರ ಮಕ್ಕಳಿಗೆ ಸಾಕಷ್ಟುನೆರವು ದೊರೆಯಲಿದೆ ಎಂದು ತಿಳಿಸಿದರು.
ಬಲವಂತ, ಆಮಿಷವೊಡ್ಡಿ ನಡೆಸಲಾಗುತ್ತಿದ್ದಂತಹಮತಾಂತರವನ್ನು ತಡೆಯುವ ಉದ್ದೇಶದಿಂದ ರಾಜ್ಯಸರ್ಕಾರ ಧಾರ್ಮಿಕ ಸ್ವಾತಂತ್ರÂ ಹಕ್ಕು ಸಂರಕ್ಷಣಾಕಾಯ್ದೆ-2021 ವಿಧೇಯಕ ಮಂಡಿಸಿರುವುದುಸ್ವಾಗತಾರ್ಹ. ಅನೇಕರು ಬಲವಂತ ಇಲ್ಲವೆಆಮಿಷದಿಂದ ಮತಾಂತರ ಆಗುತ್ತಿರುವುದುಗುಟ್ಟಾಗೇನೂ ಇರಲಿಲ್ಲ. ಜಗಜ್ಜಾಹೀರಾಗಿತ್ತು.
ಅಂತಹ ಮತಾಂತರಕ್ಕೆ ಕಡಿವಾಣ ಹಾಕಲು ರಾಜ್ಯಸರ್ಕಾರ ವಿಧೇಯಕ ಮಂಡನೆ ಮಾಡಿದೆ. ಆದಷ್ಟುಬೇಗ ಕಾಯ್ದೆ ಯಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್‌ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಜಿಲ್ಲಾ ವಕ್ತಾರ ಡಿ.ಎಸ್. ಶಿವಶಂಕರ್,ಮಾಧ್ಯಮ ಪ್ರಮುಖ್ ಎಚ್.ಪಿ. ವಿಶ್ವಾಸ್‌ಸುದ್ದಿಗೋಷ್ಠಿಯಲ್ಲಿದ್ದರು.