Advertisement

ರಸ್ತೆಗೆ ಮೀಸಲಾದ ಜಾಗ ಒತ್ತುವರಿ ತೆರವುಗೊಳಿಸಿ

05:58 PM Dec 23, 2021 | Team Udayavani |

ದಾವಣಗೆರೆ: ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದಸರ್ವೇ ನಂಬರ್‌ 5 ,6,7,8 ಮತ್ತು 16, 24 ರಲ್ಲಿ ರಸ್ತೆಗೆಮೀಸಲಾಗಿರುವ ಜಾಗದ ಒತ್ತುವರಿ ಜ.15ರ ಒಳಗೆತೆರವುಗೊಳಿಸಬೇಕು ಎಂದು ಎಐಟಿಯುಸಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಆವರಗೆರೆ ಎಚ್‌.ಜಿ. ಉಮೇಶ್‌ಒತ್ತಾಯಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರೈತ ಸಂಘದ ಜಿಲ್ಲಾ ಮುಖಂಡರು, ಉದ್ಯಮಿಗಳುರಸ್ತೆಗೆ ಮೀಸಲಿಟ್ಟಿರುವ 6 ಗುಂಟೆ ಜಾಗ ಒತ್ತುವರಿಮಾಡಿಕೊಂಡಿದ್ದಾರೆ.

Advertisement

ನ್ಯಾಯಾಲಯ ಆದೇಶ ನೀಡಿದ್ದರೂಜಿಲ್ಲಾ, ತಾಲೂಕು ಆಡಳಿತ ಆದೇಶವನ್ನು ಪಾಲನೆ ಮಾಡಿಲ್ಲ.ಜ. 15ರ ಒಳಗೆ ತೆರವು ಮಾಡಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಮಲ್ಲಶೆಟ್ಟಿಹಳ್ಳಿ ಗ್ರಾಮದ ಸರ್ವೇ ನಂಬರ್‌ 8/2 ರನಕಾಶೆ ಮತ್ತು ಅನುಮೋದಿತ ಕಟ್ಟಡ ವಿನ್ಯಾಸ ನಕ್ಷೆಯಲ್ಲಿರಸ್ತೆ ಇದೆ. ಆದರೆ, ವಾಸ್ತವವಾಗಿ ಅಲ್ಲಿ ರಸ್ತೆ ಇಲ್ಲದೆತೊಂದರೆ ಆನುಭವಿಸುವಂತಾಗಿದೆ. ಮಲ್ಲಶೆಟ್ಟಿಹಳ್ಳಿಯಿಂದಕುರ್ಕಿಯವರೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿರುವ ಬಗ್ಗೆಜಿಲ್ಲಾಡಳಿತ, ತಾಲೂಕು ಆಡಳಿತದ ಗಮನಕ್ಕೆ ತರಲಾಗಿತ್ತು.ಅಂತಿಮವಾಗಿ ಹೈಕೋರ್ಟ್‌ ಮೊರೆ ಹೋಗಲಾಗಿತ್ತು. ಉಚ್ಚನ್ಯಾಯಾಲಯ ಆದೇಶ ನೀಡಿದ್ದರೂ ತೆರವುಗೊಳಿಸಿಲ್ಲ.ಕೂಡಲೇ ರಸ್ತೆ ಒತ್ತುವರಿ ತೆರವು ಮಾಡಿಸಬೇಕು. ಇಲ್ಲದಿದ್ದಲ್ಲಿಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನ್ಯಾಯವಾದಿ ಮಂಜುಳಾ ಮಾತನಾಡಿ, ಮಲ್ಲಶೆಟ್ಟಿಹಳ್ಳಿಗ್ರಾಮದ ಸರ್ವೇ ನಂಬರ್‌ 5 ,6,7,8 ಮತ್ತು 16, 24 ರಲ್ಲಿರಸ್ತೆಗೆ ಮೀಸಲಾಗಿರುವ ಜಾಗದಲ್ಲಿರುವ 17 ಜನರಲ್ಲಿ 13ಜನರು ರಸ್ತೆಗೆ ಜಾಗ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ.ನಾಲ್ವರು ಮಾತ್ರ ಇನ್ನಿಲ್ಲದ ರೀತಿ ಅಡ್ಡಿಪಡಿಸುತ್ತಿದ್ದಾರೆ.ನ್ಯಾಯಾಲಯದ ಆದೇಶವನ್ನೂ ಜಿಲ್ಲಾ, ತಾಲೂಕುಆಡಳಿತ ಪಾಲನೆ ಮಾಡುತ್ತಿಲ್ಲ.

ಜ.15ರ ಒಳಗೆ ಒತ್ತುವರಿತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಕಟ್ಟಡ ಕಟ್ಟುವ ಮತ್ತು ಕ್ವಾರಿ ಕೆಲಸಗಾರರ ಸಂಘದ ಜಿಲ್ಲಾಅಧ್ಯಕ್ಷ ಎಂ. ಲಕ್ಷ್ಮಣ್‌, ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್‌,ಮಹಮ್ಮದ್‌ ರμàಕ್‌, ನರೇಗಾ ರಂಗನಾಥ್‌, ಜಿ.ಆರ್‌.ನಾಗರಾಜ್‌, ಭರತ್‌ಸಿಂಗ್‌, ಹೊನ್ನಮ್ಮ, ಮಲ್ಲಶೆಟ್ಟಿಹಳ್ಳಿಹನುಮೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next