ದಾವಣಗೆರೆ: ಖಾಸಗಿ ಟೆಂಡರ್‌ದಾರರುಸಂಬಳ ಪಾವತಿಯಲ್ಲಿ ವಿಳಂಬ ಹಾಗೂಆಗಾಗ ಕೆಲಸಕ್ಕೆ ತೊಂದರೆ ಮಾಡುವಕಾರಣ ಮಹಾನಗರ ಪಾಲಿಕೆ ಹಾಗೂಸ್ಥಳೀಯ ಸಂಸ್ಥೆಗಳಲ್ಲಿರುವಂತೆ ನೇರ ಪಾವತಿ ಮಾಡುವ ವ್ಯವಸ್ಥೆ ಮಾಡಬೇಕು ಎಂದುಸಿ.ಜಿ.ಆಸ್ಪತ್ರೆಯ ಹೊರಗುತ್ತಿಗೆ ಸ್ವತ್ಛತಾ ಕಾರ್ಮಿಕರು, ರಾಜ್ಯ ಸಫಾಯಿ ಕರ್ಮಚಾರಿಆಯೋಗದ ಅಧ್ಯಕ್ಷರೆದುರು ಮನವಿಮಾಡಿಕೊಂಡರು.
ನಗರದ ಸಿ.ಜೆ. ಆಸ್ಪತ್ರೆ ಸಭಾಂಗಣದಲ್ಲಿಶನಿವಾರ ಸಫಾಯಿ ಕರ್ಮಚಾರಿಆಯೋಗದ ಅಧ್ಯಕ್ಷ ಎಂ. ಶಿವಣ್ಣಕಾರ್ಮಿಕರ ಕುಂದುಕೊರತೆ ಆಲಿಸಿದರು.ಈ ಸಂದರ್ಭದಲ್ಲಿ ಕಾರ್ಮಿಕರು ನೇರನೇಮಕಾತಿ ಮಾಡಿಕೊಳ್ಳಬೇಕು. ಈ ಹಿಂದಿನಗುತ್ತಿಗೆದಾರರಿಂದ ಭಾರೀ ತೊಂದರೆಆಗುತ್ತಿತ್ತು. ಎರಡೂ¾ರು ತಿಂಗಳಾದರೂಸಂಬಳ ಕೊಡಲ್ಲ. ಸಂಬಳ ಕೇಳಿದರೆ ಕೆಲಸಕ್ಕೆಬರುವುದು ಬೇಡ ಎನ್ನುತ್ತಾರೆ. ಕಾರ್ಮಿಕರಕಾರ್ಡ್ ನೀಡಲಾಗಿದೆಯಾದರೂ ಅದರಿಂದಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಅಳಲುತೋಡಿಕೊಂಡರು.
ಸಫಾಯಿ ಕರ್ಮಚಾರಿಗಳೆಂದುನೀಡಿರುವ ಗುರುತಿನಚೀಟಿಗಳುಉಪಯೋಗಕ್ಕೆ ಬರುತ್ತಿಲ್ಲ,ಮಹಾನಗರಪಾಲಿಕೆಯಲ್ಲಿ ಕೇಳಿದರೆ ಈ ಕಾರ್ಡ್‌ಗಳು ರಿಜಿಸ್ಟರ್ ಆಗಿಲ್ಲ ಎನ್ನುತ್ತಾರೆ ಮತ್ತುಆಯುಕ್ತರ ಸಹಿಯೇ ಪೋರ್ಜರಿ ಆಗಿದೆಎನ್ನುತ್ತಾರೆ ಹಾಗಾಗಿ ಈ ಕಾರ್ಡ್ ಗಳುಇದ್ದರೂ ಉಪಯೋಗಕ್ಕೆ ಬರದಂತಾಗಿವೆಎಂದು ದೂರಿದರು.
ಆಯೋಗದ ಅಧ್ಯಕ್ಷ ಎಂ. ಶಿವಣ್ಣಮಾತನಾಡಿ, ಇಲ್ಲಿನ ಗುತ್ತಿಗೆದಾರರುನೌಕರರಿಗೆ ನೇರ ಪಾವತಿ ವ್ಯವಸ್ಥೆಗೆಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು.ಅಲ್ಲಿಯವರೆಗೆ ಗುತ್ತಿಗೆದಾರರು ನೌಕರರಿಗೆಪ್ರತಿ ತಿಂಗಳು ವೇತನ ನೀಡಿ ವೇತನದರಸೀದಿ ನೀಡಬೇಕು. ಇದರಿಂದ ನೌಕರರಿಗೆತಮ್ಮ ವೇತನ, ಕಡಿತಗೊಂಡಿರುವ ಮಾಹಿತಿದೊರೆಯುತ್ತದೆ. ಗುತ್ತಿಗೆದಾರರು ಸರಿಯಾದಸಮಯಕ್ಕೆ ವೇತನ ಪಾವತಿಸಬೇಕು.ವೇತನದಲ್ಲಿ ಕಡಿತವಾಗುವ ಹಣದಮಾಹಿತಿ ಸರಿಯಾಗಿ ನೀಡಬೇಕು ಎಂದುಸೂಚಿಸಿದರು.
ಹಾಗೂ ಈ ಕುರಿತು ಆಸ್ಪತ್ರೆಮಂಡಳಿ,ಕಾರ್ಮಿಕಇಲಾಖೆಮತ್ತುಸಮಾಜಕಲ್ಯಾಣ ಇಲಾಖೆ ಪರಿಶೀಲಿಸಿ ಪ್ರತಿ ತಿಂಗಳು10 ನೇ ತಾರೀಕಿನೊಳಗೆ ವರದಿಯನ್ನುಆಯೋಗಕ್ಕೆ ಸಲ್ಲಿಸಬೇಕು ಎಂದರು.ಆಯೋಗದ ಕಾರ್ಯದರ್ಶಿ ರಮಾ,ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿರೇಷ್ಮಾ ಕೌಸರ್, ಜಿಲ್ಲಾ ಆರೋಗ್ಯಾಧಿಕಾರಿನಾಗರಾಜ್, ಸಿ.ಜಿ.ಆಸ್ಪತ್ರೆ ಅಧೀಕ್ಷಕಜಯಪ್ರಕಾಶ್ ಈ ಸಂದರ್ಭದಲ್ಲಿದ್ದರು.