Advertisement

ಕಾಂಗ್ರೆಸ್‌ ಸದಸ್ಯರ ಆರೋಪ ಸತ್ಯಕ್ಕೆ ದೂರ: ಶಿಲ್ಪಾ

05:02 PM Dec 18, 2021 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆಯ ವಿಪಕ್ಷನಾಯಕರು ಸೇರಿದಂತೆ ಕಾಂಗ್ರೆಸ್‌ ಸದಸ್ಯರುಪಾಲಿಕೆಯ ಆಡಳಿತದ ವಿರುದ್ಧ ಮಾಡಿರುವಆರೋಪಗಳೆಲ್ಲವೂ ನಿರಾಧಾರ ಹಾಗೂ ಸತ್ಯಕ್ಕೆದೂರ ಎಂದು ಪಾಲಿಕೆ ಉಪಮೇಯರ್‌ ಶಿಲ್ಪಾಜಯಪ್ರಕಾಶ್‌ ಸ್ಪಷ್ಟನೆ ನೀಡಿದರು.

Advertisement

ಅವರು ಶುಕ್ರವಾರ ಸಂಜೆ ಪಾಲಿಕೆ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಕಾಂಗ್ರೆಸ್‌ ಸದಸ್ಯರು ಡಿ.16ರಂದು ಸುದ್ದಿಗೋಷ್ಠಿಯಲ್ಲಿಮಾಡಿರುವ ಆರೋಪಗಳೆಲ್ಲವನ್ನೂ ತಳ್ಳಿಹಾಕಿದರುಹಾಗೂ ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ತಪ್ಪುಭಾವನೆ ಮೂಡಿಸಲು ಸುಳ್ಳು ಆರೋಪ ಮಾಡಿದ್ದಾರೆಎಂದರು.ಕೊರೊನಾ ಲಾಕ್‌ಡೌನ್‌, ಚುನಾವಣಾನೀತಿಸಂಹಿತೆಯ ಕಾರಣದಿಂದಾಗಿ ಪ್ರತಿ ತಿಂಗಳುಸಾಮಾನ್ಯ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂಬುದನ್ನುಒಪ್ಪಿಕೊಳ್ಳುತ್ತೇವೆ.

ಆದರೆ, ಯಾವ ರೋಗ, ಅಡೆತಡೆಇಲ್ಲದ ಅವಧಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ನವರು ವರ್ಷಕ್ಕೆ ಎರಡೂ¾ರು ಸಭೆ ಕೂಡ ಮಾಡಿಲ್ಲ.ಈ ಬಗ್ಗೆ ದಾಖಲೆಗಳೂ ಇವೆ. ಹೀಗಾಗಿ ಈ ಬಗ್ಗೆಆರೋಪ ಮಾಡಲು ಕಾಂಗ್ರೆಸ್‌ವರಿಗೆ ನೈತಿಕತೆಯೇಇಲ್ಲ ಎಂದರು.

ವಾಣಿಜ್ಯ ಕಸ ಹಾಗೂ ಕಲ್ಯಾಣ ಮಂಟಪದ ಕಸಸಂಗ್ರಹಣೆಗಾಗಿ ಏಜೆನ್ಸಿಗಳಿಗೆ ನೀಡಿ ಶುಲ್ಕ ಆಕರಿಸುವಪದ್ಧತಿ 2018ರಲ್ಲಿ ಕಾಂಗ್ರೆಸ್‌ ಆಡಳಿತಾವಧಿಯಲ್ಲಿಯೇಆರಂಭವಾಗಿದ್ದು ನಾವು ಹೊಸದಾಗಿ ಜಾರಿಗೆತಂದಿಲ್ಲ. ಏಜೆನ್ಸಿದಾರರು ಸಂಗ್ರಹಿಸಿದ ಶುಲ್ಕದಲ್ಲಿಪಾಲಿಕೆಗೆ ಕಟ್ಟಬೇಕಾದ ಹಣ ಕಟ್ಟುತ್ತಿದ್ದಾರೆ. ಈಕುರಿತು ಕಾಂಗ್ರೆಸ್‌ ಸದಸ್ಯರು ಮಾಡಿದ ಆರೋಪಸತ್ಯಕ್ಕೆ ದೂರ ಎಂದರು

Advertisement

Udayavani is now on Telegram. Click here to join our channel and stay updated with the latest news.

Next