ದಾವಣಗೆರೆ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣ ಮತ್ತು ಬ್ಯಾಂಕಿಂಗ್‌ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವಕೇಂದ್ರ ಸರ್ಕಾರದ ನಿರ್ಧಾರ ವಿರೋಧಿ ಸಿಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತವೇದಿಕೆ ನೇತೃತ್ವದಲ್ಲಿ ಶುಕ್ರವಾರ ಮಂಡಿಪೇಟೆ ಕೆನರಾ ಬ್ಯಾಂಕ್ ಶಾಖೆ ಎದುರು ಬ್ಯಾಂಕ್‌ಅಧಿಕಾರಿಗಳು, ನೌಕರರು ಮುಷ್ಕರನಡೆಸಿದರು.
ಕೇಂದ್ರ ಸರ್ಕಾರದ ಖಾಸಗೀಕರಣನೀತಿ ಖಂಡಿಸಿ ಘೋಷಣೆಗಳನ್ನು ಕೂಗಿಆಕ್ರೋಶವನ್ನು ಹೊರಹಾಕಿದ ಬ್ಯಾಂಕ್‌ಅಧಿಕಾರಿಗಳು, ನೌಕರರು ಖಾಸಗೀಕರಣನಿರ್ಧಾರ ಕೈಬಿಡದಿದ್ದಲ್ಲಿ ಮುಂದಿನದಿನಗಳಲ್ಲಿ ಹೋರಾಟವು ಇನ್ನಷ್ಟುತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆಎಚ್ಚರಿಕೆ ರವಾನಿಸಿದರು.
ದೇಶಕ್ಕೆ ಮಾಸ್‌ಬ್ಯಾಂಕಿಂಗ್‌ನ ಅಗತ್ಯತೆವಿದೆಯೇ ಹೊರತುಕ್ಲಾಸ್ ಬ್ಯಾಂಕಿಂಗ್‌ನ ಅಗತ್ಯತೆ ಇಲ್ಲ ಎಂದುಪ್ರತಿಪಾದಿಸಿದರು.ಸಾರ್ವಜನಿಕ ವಲಯದ ಬ್ಯಾಂಕುಗಳನಂಬಿ ಠೇವಣಿ ಇಟ್ಟಿರುವಂತಹಒಂದು ಲಕ್ಷದ ಐವತ್ತೇಳು ಸಾವಿರಕೋಟಿ ರೂಪಾಯಿಗಳ ಗತಿಯೇನು,ಠೇವಣಿಗೆ ಭದ್ರತೆ ನೀಡುವರ್ಯಾರು ಎಂಬಪ್ರಶ್ನೆ ಎದುರಾಗಿದೆ. ಸಾರ್ವಜನಿಕರುಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸಿಕೊಳ್ಳಲುಬೀದಿಗಿಳಿದು ಹೋರಾಟ ಮಾಡಬೇಕಾಗಿದೆ.ಪûಾತೀತವಾಗಿ ಹೋರಾಟ ಮಾಡಬೇಕುಎಂದು ಖಾಸಗೀಕರಣ ವಿರೋ ಸುತ್ತಿರುವಬ್ಯಾಂಕ್ ಸಂಘಟನೆಗಳ ಹೋರಾಟಗಾರರುಮನವಿ ಮಾಡಿದರು.
ಬ್ಯಾಂಕ್ ಕಾರ್ಮಿಕ ಸಂಘಟನೆಗಳಸಂಯುಕ್ತ ವೇದಿಕೆ ಜಿಲ್ಲಾ ಸಂಚಾಲಕ ಕೆ.ಎನ್.ಗಿರಿರಾಜ್, ಸಹ ಸಂಚಾಲಕ ಕೆ.ವಿಶ್ವನಾಥಬಿಲ್ಲವ, ಜಿಲ್ಲಾ ಬ್ಯಾಂಕ್ ನೌಕರರ ಸಂಘದಅಧ್ಯಕ್ಷ ಬಿ.ಆನಂದಮೂರ್ತಿ, ಪ್ರಧಾನಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ,ಕಿ ರಣ್ ರಜಪೂತ್, ಎಸ್.ಟಿ.ಶಾಂತಗಂಗಾಧರ್, ಅಜಿತ್‌ಕುಮಾರ್ ನ್ಯಾಮತಿ,ಎಚ್.ಎಸ್.ತಿಪ್ಪೇಸ್ವಾಮಿ, ದುರುಗಪ್ಪ,ಆರ್. ಆಂಜನೇಯ, ಪರಶುರಾಮ, ಕೆ.ಶಶಿಶೇಖರ್, ಸುಜಯಾ ನಾಯಕ್, ಸುರೇಶ್‌ಚೌಹಾಣ್, ಅನಿಲ್‌ಕುಮಾರ್, ಅಜಯ್‌ಕುಮಾರ್, ಎಂ.ಎಂ.ಸಿದ್ದಲಿಂಗಯ್ಯ,ಜ್ಞಾನೇಶ್ವರ್, ನಿತ್ಯಾನಂದ ಡೋಂಗ್ರೆ,ದೀಪಾ, ಗೀತಾ, ಸುಮಂತ್ ಭಟ್, ಟಿ.ಕೆ.ಗೊಂಬಿ, ಎಚ್.ನಾಗರಾಜ್, ಸುನಂದಮ್ಮ,ಮಂಜುಳಾ ತಣಿಗೆರೆ, ಶಂಭು ಹಿರೇಮಠಇತರರು ಭಾಗವಹಿಸಿದ್ದರು.