ಹೊನ್ನಾಳಿ: ದಾವಣಗೆರೆ ಜಿಲ್ಲೆಯಲ್ಲಿಯೇ ನ್ಯಾಮತಿಪಟ್ಟಣದ ಕೆಪಿಎಸ್ ಸರ್ಕಾರಿ ಪದವಿಪೂರ್ವಕಾಲೇಜು ಮಾದರಿಯಾಗಿದೆ ಎಂದು ಕಾಲೇಜುಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಂ.ಶಿವರಾಜು ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ. ರೇಣುಕಾಚಾರ್ಯ ಅವರ ನಿರ್ದೇಶನದಂತೆ ಬುಧವಾರ ನ್ಯಾಮತಿ ಪಟ್ಟಣದ ಕೆಪಿಎಸ್‌ನ ಹಳೆಕಟ್ಟಡದ ಪರಿಶೀಲನೆ ಹಾಗೂ ಕೆಪಿಎಸ್ ಪದವಿಪೂರ್ವಕಾಲೇಜಿನ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಂತರಅವರು ಮಾತನಾಡಿದರು.
ಕೆಪಿಎಸ್ ಕಾಲೇಜಿನ ಸಿಬ್ಬಂದಿಯಲ್ಲಿರುವಸಹಕಾರ, ಅನ್ಯೋನ್ಯತೆ, ವಿದ್ಯಾರ್ಥಿಗಳಲ್ಲಿನ ಶಿಸ್ತು,ಕಾಲೇಜಿನ ಕಲಿಕಾ ಪರಿಸರ ಉತ್ತಮವಾಗಿದೆ.ದಾವಣಗೆರೆ ಜಿಲ್ಲೆಯ ಎಲ್ಲಾ ಸರ್ಕಾರಿ ಪದವಿಪೂರ್ವಕಾಲೇಜುಗಳು ಮಾದರಿ ಕಾಲೇಜುಗಳಾಗಿಪರಿವರ್ತನೆಯಾಗಬೇಕು ಎನ್ನುವುದು ನನ್ನ ಆಶಯ.ಜಿಲ್ಲೆಯ ಎಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜುಗಳಪ್ರಾಂಶುಪಾಲರು, ಉಪನ್ಯಾಸಕರು ಉತ್ತಮಬೋಧನಾ ಕಲಿಕೆ ಪ್ರಕ್ರಿಯೆಯನ್ನು ರೂಢಿಸಿಕೊಂಡುಸಾಗಿದರೆ ಉತ್ತಮ ಫಲಿತಾಂಶದೊಂದಿಗೆವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು.
ಹೊನ್ನಾಳಿ ಪಟ್ಟಣದ ಶ್ರೀ ಚನ್ನೇಶ್ವರ ಪದವಿಪೂರ್ವಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು,ಅರಬಗಟ್ಟೆ ಗ್ರಾಮದ ಸರ್ಕಾರಿ ಪದವಿಪೂರ್ವಕಾಲೇಜು ಹಾಗೂ ನ್ಯಾಮತಿ ತಾಲೂಕಿನ ಸೌಳಂಗಸರ್ಕಾರಿ ಪದವಿಪೂರ್ವ ಕಾಲೇಜು, ನ್ಯಾಮತಿಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವಕಾಲೇಜುಗಳಿಗೆ ಭೇಟಿ ನೀಡಿ ಉಪನ್ಯಾಸಕರಸಭೆ ನಡೆಸಿದ್ದೇನೆ. ಅಲ್ಲದೆ ಶೈಕ್ಷಣಿಕ ಪ್ರಗತಿಗೆಮಾರ್ಗದರ್ಶನ ಮಾಡಿರುವುದಾಗಿ ತಿಳಿಸಿದರು.
ಸರ್ಕಾರಿ ಕಾಲೇಜುಗಳಿಗೆ ಅತ್ಯಂತ ಬಡ ಮಕ್ಕಳುಬರುತ್ತಾರೆ. ಅಂತಹ ಮಕ್ಕಳಿಗೆ ಒಳ್ಳೆಯ ಶಿಕ್ಷಣಸಿಗಬೇಕಾದರೆ ತರಗತಿಗಳಲ್ಲಿ ಪಾಠ, ಪ್ರವಚನಗಳುಉತ್ತಮವಾಗಿರಬೇಕು. ಸರ್ಕಾರ ಎಲ್ಲಾ ಸೌಲಭ್ಯಗಳನ್ನುಕೊಡುತ್ತಿದ್ದು ಸೌಲಭ್ಯಗಳ ಸದುಪಯೋಗಕ್ಕೆನಾವೆಲ್ಲರೂ ಕೈಜೋಡಿಸಬೇಕೆಂದರು.
ಪ್ರಾಂಶುಪಾಲ ವಿ.ಪಿ.ಪೂರ್ಣಾನಾಂದ, ಕಚೇರಿಅಧೀಕ್ಷಕ ಭರತ್, ಉಪನ್ಯಾಸಕರಾದ ಎಚ್.ಆರ್.ಗಂಗಾಧರ, ಶಿವಕುಮಾರ್, ಗಂಗಾಧರನವುಲೆ,ಡಾ.ನಾದಾ, ಆಕಾಶ್, ರಾಜಶ್ರೀ, ಶಾಂತಲಾ, ಅತಿಥಿಉಪನ್ಯಾಸಕರಾದ ಪಿ.ವೀರೂಪಾಕ್ಷಪ್ಪ, ಯೋಗೇಶ್,ಮಂಜುನಾಥ, ರೂಪ, ವಿನಯ್, ಸಿಬ್ಬಂದಿಯವರಾದಮಂಜುಳಾಪಾಟೀಲ್, ಅಶೋಕ್ ಇದ್ದರು.