ಹೊನ್ನಾಳಿ: ಸರ್ಕಾರ ಅತಿಥಿ ಉಪನ್ಯಾಸಕರಿಗೆವೇತನ, ಕಾಯಂಗೊಳಿಸುವುದುಸೇರಿದಂತೆ ಬೇಡಿಕೆ ಈಡೇರಿಕೆಗೆ ತಾರತಮ್ಯಮಾಡುತ್ತಿದೆ ಎಂದು ಆರೋಪಿಸಿ ಪಟ್ಟಣದಸರ್ಕಾರಿ ಪ್ರಥಮದರ್ಜೆ ಕಾಲೇಜಿನಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟಕ್ಕೆಬೆಂಬಲ ವ್ಯಕ್ತಪಡಿಸಿದರು.
ನಂತರ ಪ್ರಾಚಾರ್ಯ ಶಿವಬಸಪ್ಪ ಎಚ್. ಯತ್ತಿನಹಳ್ಳಿಅವರಿಗೆ ಮನವಿ ಸಲ್ಲಿಸಿದರು.ಹೊನ್ನಾಳಿ ತಾಲೂಕು ಅತಿಥಿಉಪನ್ಯಾಸಕರ ಸಂಘದ ಕಾರ್ಯದರ್ಶಿಡಾ| ಪ್ರಶಾಂತಕುಮಾರ್ ಶರ್ಮಮಾತನಾಡಿ, ಸರ್ಕಾರಿ ಪ್ರಥಮದರ್ಜೆಕಾಲೇಜುಗಳು ನಡೆಯುತ್ತಿರುವುದು ಅತಿಥಿಉಪನ್ಯಾಸಕರಿಂದ ಎಂಬುದು ಸತ್ಯ.
ಆದರೆ ಕಳೆದ 15 ವರ್ಷಗಳಿಂದ ಕಾಲೇಜುಗಳಲ್ಲಿದುಡಿಯುತ್ತಾ ಇದನ್ನೇ ನಂಬಿ ಜೀವನಸಾಗಿಸುತ್ತಿರುವ ಉಪನ್ಯಾಸಕರ ಕುಟುಂಬಬೀದಿಗೆ ಬರುವಂತಾಗಿದೆ. ಸರ್ಕಾರಗೌರವಧನವನ್ನು ಸರಿಯಾಗಿ ನೀಡದೆಐದಾರು ತಿಂಗಳುಗಳ ಕಾಲ ವಿಳಂಬಮಾಡುತ್ತಿದೆ. ಕಡಿಮೆ ವೇತನದಲ್ಲೇದುಡಿಸಿಕೊಳ್ಳುತ್ತಾ ಬಂದಿದೆ.
ಸೇವಾಭದ್ರತೆಯೂ ಮರೀಚಿಕೆಯಾಗಿದೆ ಎಂದುದೂರಿದರು.ಕಳೆದ 15-20 ವರ್ಷಗಳಿಂದ ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವವರಿಗೆ ಈಗವಯಸ್ಸಾಗಿದ್ದು, ಯಾವುದೆ ಇಲಾಖೆಗಳಿಗೆಅರ್ಜಿ ಸಲ್ಲಿಸಿದ ಸ್ಥಿತಿ ತಲುಪಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿವಯಸ್ಸಾದ ಅತಿಥಿ ಉಪನ್ಯಾಸಕರನ್ನುಹಂತ ಹಂತವಾಗಿ ಕಾಯಂಗೊಳಿಸಲುಚಿಂತನೆ ನಡೆಸಿಲ್ಲ.
ಆದ್ದರಿಂದ ರಾಜ್ಯಾದ್ಯಂತಹೋರಾಟ ನಡೆಯುತ್ತಿದೆ ಎಂದರು.ಅತಿಥಿ ಉಪನ್ಯಾಸಕರ ಸಂಘದತಾಲೂಕು ಅಧ್ಯಕ್ಷ ಜಿ ಹಳದಪ್ಪ, ವಿನಾಯಕ,ಶ್ರೀನಿವಾಸ್, ಮೋಹನಕುಮಾರ, ಯು.ಬ.ಜಯಪ್ಪ, ಪ್ರಕಾಶ್, ಹರಿಣಿ ಶಾಸ್ತ್ರಿ, ಪುಷ್ಪಲತಾ,ಕುಮಾರಸ್ವಾಮಿ ಅತಿಥಿ ಉಪನ್ಯಾಸಕರುಇದ್ದರು.