Advertisement

ಮಾನವ ಹಕ್ಕುಗಳ ಸಮರ್ಪಕ ಅನುಷ್ಠಾನ ಎಲ್ಲರ ಕರ್ತವ್ಯ

07:29 PM Dec 11, 2021 | Team Udayavani |

ದಾವಣಗೆರೆ: ಮಾನವ ಹಕ್ಕುಗಳಸಮರ್ಪಕ ಅನುಷ್ಠಾನದ ಕರ್ತವ್ಯಪ್ರತಿಯೊಬ್ಬರದ್ದಾಗಿದೆ ಎಂದು ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದರಾಜೇಶ್ವರಿ ಎನ್‌. ಹೆಗಡೆ ತಿಳಿಸಿದರು.

Advertisement

ಶುಕ್ರವಾರ ಜಿಲ್ಲಾ ಕಾನೂನು ಸೇವಾಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದಸಂಯುಕ್ತಾಶ್ರಯದಲ್ಲಿ ಜಿಲ್ಲಾ ವಕೀಲರಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಸಮಾನತೆಯಅಳಿಸಿ, ಸಮಾನತೆಯ ಸಮಾಜ ನಿರ್ಮಾಣಮಾಡುವ ಧ್ಯೇಯ ವಾಕ್ಯದೊಂದಿಗೆಸಾಗುವ ಮೂಲಕ ಮಾನವ ಹಕ್ಕುಗಳನ್ನುರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳಘೋಷಣೆ ಒಂದು ಐತಿಹಾಸಿಕ ಮುನ್ನುಡಿ.ಜಾತಿ , ಧರ್ಮ, ವರ್ಗ, ರಾಷ್ಟ್ರೀಯತೆಭೇದವನ್ನು ಅಳಿಸಿ ಮಾನವ ಕುಲದ ಘನತೆಗೆಮಾನವ ಹಕ್ಕುಗಳು ಸಹಕಾರಿಯಾಗಿದೆ.ಮಾನವ ಹಕ್ಕುಗಳ ಅಡಿಯಲ್ಲಿ ಹಲವಾರುಕಾನೂನುಗಳು ಒಳಂಬಡಿಕೆಗಳು ಮತ್ತುಜಾಗತೀಕ ಘೋಷಣೆಗಳು ಜಾರಿಯಲ್ಲಿವೆಅವುಗಳ ಸಮರ್ಪಕ ಅನುಷ್ಠಾನ ಎಲ್ಲರಮೇಲಿದೆ ಎಂದು ತಿಳಿಸಿದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತುಸತ್ರ ನ್ಯಾಯಾ ಧೀಶ ಎನ್‌. ಶ್ರೀಪಾದ್‌ಮಾತನಾಡಿ, ಮಾನವ ಹಕ್ಕುಗಳು ಮೂಲಭೂತ ಹಕ್ಕುಗಳಾಗಿವೆ. ಸಂವಿಧಾನದಲ್ಲಿಮಾನವ ಹಕ್ಕುಗಳನ್ನು ಸೇರಿಸಲಾಗಿದೆ.ಮಾನವ ಹಕ್ಕುಗಳು ನೈಸರ್ಗಿಕಹಕ್ಕುಗಳಾಗಿವೆ. ಪ್ರತಿಯೊಬ್ಬರಿಗೂಹುಟ್ಟಿನೊಂದಿಗೆ ಬರುವ ಹಕುಗಳಾಗಿವೆಎಂದು ತಿಳಿಸಿದರು.

ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಪ್ರವೀಣ ನಾಯಕ್‌ ಮಾತನಾಡಿ, ಮಾನವಹಕ್ಕುಗಳ ವ್ಯಾಪ್ತಿ ಅತ್ಯಂತ ವ್ಯಾಪಕವಾಗಿದೆ.ಶೀಘ್ರ ನ್ಯಾಯಾದಾನ ಮಾಡುವುದು ಸಹಮಾನವ ಹಕ್ಕಾಗಿದೆ. ಆ ನಿಟ್ಟಿನಲ್ಲಿ ಲೋಕಅದಾಲತ್‌ಗಳು ಕಾರ್ಯ ನಿರ್ವಹಿಸುತ್ತಿದೆಎಂದರು.ಹಿರಿಯ ವಕೀಲ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಕಳೆದ ಏಳುದಶಕದಿಂದ ಮುಕ್ತ ಮತ್ತು ಪ್ರಜಾಸತ್ತಾತ್ಮಕಜಗತ್ತಿನಲ್ಲಿ ಮಾನವ ಹಕ್ಕುಗಳುಶಕ್ತಿಶಾಲಿಯಾಗಿ ಮಿಡಿಯುತ್ತಾ ಬಂದಿದೆ.ಪ್ರತಿಯೊಬ್ಬ ನಾಗರಿಕರನ್ನು ಶೋಷಣೆ,ಅನ್ಯಾಯ ಮತ್ತು ದಬ್ಟಾಳಿಕೆಗಳಿಂದ ರಕ್ಷಿಸುವಪ್ರತಿನಿಧಿ ಯಾಗಿ ಕಾರ್ಯ ನಿರ್ವಸುವಲ್ಲಿನಿರತವಾಗಿವೆ ಎಂದು ತಿಳಿಸಿದರು.

Advertisement

ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಡಿ.ಪಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು.ಕೌಟುಂಬಿಕ ನ್ಯಾಯಾಲದ ನ್ಯಾಯಾ ಧೀಶಬಿ. ದಶರಥ. ಬಿ., ಜಿಲ್ಲಾ ವಕೀಲರ ಸಂಘದಕಾರ್ಯದರ್ಶಿ ಎಲ್‌.ಎಚ್‌.ಪ್ರದೀಪ್‌, ಸಹಕಾರ್ಯದರ್ಶಿ ಜಿ.ಕೆ. ಬಸವರಾಜ್‌, ಕೆ.ಎಸ್‌.ರೇಖಾ ಸೇರಿದಂತೆ ಸಂಘದ ಪದಾಧಿಕಾರಿಗಳು, ವಕೀಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next