Advertisement

ಹೊನ್ನಾಳಿ-ನ್ಯಾಮತಿ: 533 ಮತದಾರರಿಂದ ಹಕ್ಕು ಚಲಾವಣೆ

07:26 PM Dec 11, 2021 | Team Udayavani |

ಹೊನ್ನಾಳಿ: ಶಿವಮೊಗ್ಗ ವಿಧಾನ ಪರಿಷತ್ತಿಗೆಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಬೆಳಗ್ಗೆ8ರಿಂದಲೇ ಪ್ರಾರಂಭವಾದರೂ ಹೊನ್ನಾಳಿ,ನ್ಯಾಮತಿ ತಾಲೂಕಿನಾದ್ಯಂತ ಗ್ರಾಪಂ ಹಾಗೂಪುರಸಭಾ ಸದಸ್ಯರು ಬೆಳಗ್ಗೆ 10ರ ನಂತರಮತ ಚಲಾಯಿಸಲು ಆಗಮಿಸಿದ ಪ್ರಯುಕ್ತಮತದಾನ ಮಂದಗತಿಯಲ್ಲಿ ಸಾಗಿತು.ಅವಳಿ ತಾಲೂಕಿನ 45 ಗ್ರಾಪಂ ಹಾಗೂಪುರಸಭೆ 1 ಮತಗಟ್ಟೆಯಲ್ಲಿ ಮಧ್ಯಾಹ್ನ 3.30ಕ್ಕೆಎಲ್ಲ ಸದಸ್ಯರು ಮತದಾನ ಮಾಡಿದರು.

Advertisement

ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಪಂನಮತಗಟ್ಟೆಯಲ್ಲಿ ಮಾತ್ರ ಬೆಳಗ್ಗೆ 9.55ಕ್ಕೆ ಎಲ್ಲಸದಸ್ಯರು ಬಂದು ಮತದಾನ ಮಾಡಿದರು.ಬಾಕಿ ಇರುವ ಎಲ್ಲ ಗ್ರಾಪಂನಲ್ಲಿ ಬೆಳಗ್ಗೆ 10.30ರಂತರ ಪ್ರಾರಂಭವಾಯಿತು ಎಂದು ನೋಡಲ್‌ಚುನಾವಣಾ ಧಿಕಾರಿ ತಿಳಿಸಿದರು.

ಶುಕ್ರವಾರ ಅವಳಿ ತಾಲೂಕಿನಲ್ಲಿ ಬಹಳಷ್ಟುಮದುವೆ ಹಾಗೂ ಶುಭ ಕಾರ್ಯಕ್ರಮಗಳುಇದ್ದುದರಿಂದ ಗ್ರಾಪಂ ಸದಸ್ಯರು ಮದುವೆಮುಗಿಸಿ ಬಂದು ಮತದಾನ ಮಾಡಿದರು. 46ಮತಗಟ್ಟೆಯಲ್ಲಿ ಶಾಸಕ, ಪುರಸಭಾ ಸದಸ್ಯರುಹಾಗೂ ಗ್ರಾಪಂ ಸದಸ್ಯರು ಸೇರಿ ಒಟ್ಟು 533ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಬಿಗಿ ಬಂದೋಬಸ್ತ್: ಸಿಪಿಐ ದೇವರಾಜ್‌ನೇತೃತ್ವದಲ್ಲಿ ಅವಳಿ ತಾಲೂಕಿನ 46 ಮತಗಟ್ಟೆಗಳಲ್ಲಿಯಾವುದೇ ಅವಘಡ ಸಂಭವಿಸದಂತೆಪೊಲೀಸ್‌ ಸಿಬ್ಬಂದಿ ನೇಮಿಸಲಾಗಿತ್ತು.ಮತದಾನ ಮಾಡಲು ಬಂದವರು ಆಗೊಮ್ಮೆಈಗೊಮ್ಮೆ ಆಗಮಿಸಿದ್ದರಿಂದ ಮತದಾನಶಾಂತಿಯುತವಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next