Advertisement

ಈಗಲಾದರೂ ಮನೆಯಿಂದ ಹೊರಗೆ ಬರಬೇಡಿ..

11:23 AM May 04, 2020 | Naveen |

ದಾವಣಗೆರೆ: ದಾವಣಗೆರೆಯಲ್ಲಿ ಭಾನುವಾರ ಒಂದೇ ದಿನ 21 ಜನರಲ್ಲಿ ಕೋವಿಡ್ ಪಾಸಿಟಿವ್‌(ಪ್ರಾಥಮಿಕ ವರದಿ) ಪತ್ತೆಯಾಗಿರುವುದು ಅತ್ಯಂತ ನೋವಿನ ವಿಚಾರ. ಜನರು ಈಗಲಾದರೂ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಮನೆಯಿಂದ ಹೊರ ಬರಬಾರದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಕಳಕಳಿಯ ಮನವಿ ಮಾಡಿದ್ದಾರೆ.

Advertisement

ದಾವಣಗೆರೆಯಲ್ಲಿ ಒಟ್ಟಾರೆ 7 ಸಕ್ರಿಯ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಯಾವುದೇ ಪ್ರಕರಣಗಳು ಆಗದಂತೆ ನಡೆಸಿದ ತುರ್ತುಸಭೆಯ ಮುಕ್ತಾಯ ಹಂತದಲ್ಲಿ 21 ಜನರಿಗೆ ಕೋವಿಡ್ ಪಾಸಿಟಿವ್‌ ಎಂಬ ಪ್ರಾಥಮಿಕ ವರದಿ ಬಂದಿತು. ನಿಜಕ್ಕೂ ಅತೀ ನೋವಿನ ವಿಚಾರ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು. ಕಳೆದ ಭಾನುವಾರ ದಾವಣಗೆರೆ ಜಿಲ್ಲೆ ಹಸಿರು ವಲಯದಲ್ಲಿತ್ತು. ಹಾಗಾಗಿ ವಾಣಿಜ್ಯ ಚಟುವಟಿಕೆಗೆ ಅನುಮತಿ ನೀಡಲಾಗಿತ್ತು. ಕೆಲವೇ ಗಂಟೆಯಲ್ಲೇ ಒಬ್ಬರಲ್ಲಿ ಕೊರೊನಾ ಪಾಸಿಟಿವ್‌ ಎಂಬ ವರದಿ ಬಂದ ನಂತರ ಎಲ್ಲವನ್ನೂ ಮುಚ್ಚಬೇಕಾಯಿತು ಎಂದು ತಿಳಿಸಿದರು.

ಈಗ ಪ್ರಾಥಮಿಕ ವರದಿ ಪ್ರಕಾರ 21 ಜನರಲ್ಲಿ ಕೋವಿಡ್ ಪಾಸಿಟಿವ್‌ ಬಂದಿದೆ. ಇನ್ನೂ ಹೆಚ್ಚಾಗದಂತೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕರೆ ನೀಡಿರುವಂತೆ ಕೋವಿಡ್ ವಿರುದ್ಧ ಯುದ್ಧವನ್ನೇ ಮಾಡಬೇಕಾಗಿದೆ. ಅದರಂತೆ ಎಲ್ಲರೂ ಕೆಲಸ ಮಾಡೋಣ ಎಂದು ಮನವಿ ಮಾಡಿದರು. ಒಂದೇ ದಿನ 21ಪ್ರಕರಣಗಳ ವರದಿ ಬಂದಿರವುದರಿಂದ ಸರ್ಕಾರ ದಾವಣಗೆರೆಯನ್ನ ಕಂಟೈನ್‌ಮೆಂಟ್‌ ಮಾಡಬಹುದು. ಇಲ್ಲವೇ ರೆಡ್‌ ಝೋನ್‌ ಎಂದು ಪರಿಗಣಿಸಬಹುದು. ಮುಂದೆ ಪರಿಸ್ಥಿತಿ ಗಂಭೀರವಾಗಬಹುದು. ಇಡೀ ದಾವಣಗೆರೆಯನ್ನೇ ಸೀಲ್‌ಡೌನ್‌ ಮಾಡಿದರೂ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಜನರು ಪರಿಸ್ಥಿತಿಯ ಗಂಭೀರತೆಯ ಅರ್ಥ ಮಾಡಿಕೊಂಡು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಲೇಕೂಡದು.

ಅಗತ್ಯ ವಸ್ತುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಜನರು ಆನ್‌ಲೈನ್‌ ಮೂಲಕ ಇಲ್ಲವೇ ಜಿಲ್ಲಾಡಳಿತ ಪ್ರಾರಂಭಿಸಿರುವ ಹೆಲ್ಪ್ಲೈನ್‌ (ಸಹಾಯವಾಣಿ) ಸಂಪರ್ಕಿಸಿ ಹಾಲು, ಔಷಧಿ, ದಿನಸಿ ಪಡೆದುಕೊಳ್ಳಬೇಕು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಎಲ್ಲಾ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌
ಮಾತನಾಡಿ, ಕೋವಿಡ್‌-19 ಹರಡದಂತೆ ಪ್ರತಿಯೊಬ್ಬರು ಜಾಗ್ರತೆಯಿಂದ ಇರಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next