ಜಿ.ಎಂ. ಸಿದ್ದೇಶ್ವರ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Advertisement
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾರ್ಗದರ್ಶಿ ಬ್ಯಾಂಕ್(ಕೆನರಾ ಬ್ಯಾಂಕ್) ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಾಲ ಪಡೆದಂತಹ ರೈತರು ಸಾಲ ಕಟ್ಟಿಯೇ ಕಟ್ಟುತ್ತಾರೆ. ಎಲ್ಲಿಗೂ ಹೋಗುವುದಿಲ್ಲ. ತಾಳ್ಮೆಯಿಂದ ಕಾಯಿರಿ. ಏನು ಆಗುವುದಿಲ್ಲ ಎಂದರು. ಕಳೆದ ವರ್ಷ ಬರ ಇತ್ತು. ಹಾಗಾಗಿ ಸಾಲ ಕಟ್ಟಲಿಕ್ಕೆ ಆಗಲಿಲ್ಲ. ಈ ವರ್ಷ ಮಳೆಯಾಗಿದೆ. ಬೆಳೆ ಸಮೃದ್ಧಿ ಆಗುವ ನಿರೀಕ್ಷೆಯೂ ಇದೆ. ನಮ್ಮ ರೈತರು ಸಾಲ ಕಟ್ಟಿಯೇ ಕಟ್ಟುತ್ತಾರೆ. ಹಾಗಾಗಿ ನೋಟಿಸ್ ನೀಡುವುದು, ಜಪ್ತಿ, ಬಲವಂತ ಮಾಡುವುದನ್ನು ಮಾಡಬೇಡಿ. ರೈತರು ಏನಾದರೂ ಆತ್ಮಹತ್ಯೆ ಮಾಡಿಕೊಂಡರೆ ತೊಂದರೆ ಅನುಭವಿಸಬೇಕಾಗುತ್ತದೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಬಲವಂತ ಮಾಡಬೇಡಿ ಎಂದು ಸೂಚಿಸಿದರು.
ಯಾವುದೇ ಕಾರಣಕ್ಕೂ ಸಾಲ ವಸೂಲಾತಿಗೆ ನೋಟಿಸ್ ಕೊಡುವುದು, ಬಲವಂತ ಮಾಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಸೂಚಿಸಿದರು. ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶ್ರುತ್ ಡಿ. ಶಾಸ್ತ್ರಿ ಮಾತನಾಡಿ, ವಾರ್ಷಿಕ ಸಾಲ ಯೋಜನೆಯಡಿ ಪ್ರಥಮ ತ್ತೈಮಾಸಿಕದಲ್ಲಿ ಕೃಷಿ ಕ್ಷೇತ್ರದ 466.17 ಕೋಟಿ ಗುರಿಗೆ 546.86 ಕೋಟಿ ನೀಡಲಾಗಿದೆ. ಸಣ್ಣ ಕೈಗಾರಿಕೆಗೆ 149.14 ಕೋಟಿ ಗುರಿಗೆ 116.26 ಕೋಟಿ ನೀಡಲಾಗಿದೆ. ಒಟ್ಟಾರೆ 883.94 ಕೋಟಿ ಗುರಿಗೆ 815.01(ಶೇ.92.2) ಗುರಿ ಮುಟ್ಟಲಾಗಿದೆ. ಎರಡನೇ ತ್ತೈಮಾಸಿಕದಲ್ಲಿ ಸಾಲದ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿಸಿದರು. ಕೆಲವಾರು ಬ್ಯಾಂಕ್‌ಗಳು ಒದಗಿಸಿರುವ ಸಾಲ ಸೌಲಭ್ಯದ ಪ್ರಮಾಣ ಶೇ.40 ಸಹ ದಾಟಿಲ್ಲ. ಯಾವುದೇ ಸಬೂಬು ಹೇಳುವಂತೆಯೇ ಇಲ್ಲ. ಡಿಸೆಂಬರ್‌ನಲ್ಲಿ ನಡೆಸುವ ಸಭೆಯ ವೇಳೆಗೆ ಕನಿಷ್ಟ ಶೇ.60 ರಷ್ಟು ಸಾಲ ಸೌಲಭ್ಯ ಒದಗಿ ಸಲೇಬೇಕು ಎಂದು ಸೂಚಿಸಿದ ಜಿ.ಎಂ. ಸಿದ್ದೇಶ್ವರ್ ಶೇ.60ಕ್ಕೆ ಸೀಮಿತವಾಗಬೇಡಿ. ಕನಿಷ್ಟ ಶೇ.60 ಇರಲೇಬೇಕು. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಾಲ ನೀಡಬೇಕು ಎಂದು ತಿಳಿಸಿದರು.
Related Articles
ಕಡಿಮೆ ಪ್ರಮಾಣದಲ್ಲಿ ಸಾಲ ನೀಡಲಾಗಿದೆ. ಕೆಲವರನ್ನ ವಾಪಸ್ ಕಳಿಸಲಾಗಿದೆ ಎಂಬ ದೂರುಗಳು ಸಹ ಬಂದಿವೆ. ಯಾವುದೇ ಕಾರಣಕ್ಕೂ ವಾಪಸ್ ಕಳಿಸುವಂತಿಲ್ಲ. ಸರ್ಕಾರದ ಯೋಜನೆಯಡಿ ಸಾಲದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪೆಂಡಿಂಗ್ ಇಡಬಾರದು. ಸಾಲ ನೀಡದೇ ಇದ್ದರೆ
ಯಾವ ಕಾರಣಕ್ಕೆ ಅರ್ಜಿ ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಸಿದ್ದೇಶ್ವರ್ ತಿಳಿಸಿದರು.
Advertisement
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ರಿಸರ್ವ್ ಬ್ಯಾಂಕ್ ಎಜಿಎಂ ಆನಂದ್ ನಿಮ್, ನಬಾರ್ಡ್ ಎಜಿಎಂ ರವೀಂದ್ರ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಾರ್ಯಾಲಯ ವಿಭಾಗೀಯ ಪ್ರಬಂಧಕ ಜಿ.ಜಿ. ದೊಡ್ಡಮನಿ, ಕೆ. ರಾಘವೇಂದ್ರ ನಾಯರಿ, ಎನ್. ರಾಮಮೂರ್ತಿ ಇತರರು ಇದ್ದರು.