Advertisement

LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ

09:14 AM May 07, 2024 | sudhir |

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮೊದಲ ಮತವನ್ನು ಚಲಾಯಿಸಿದರು.

Advertisement

ಮತದಾನ ಎನ್ನುವುದು ಮತ ಮತ್ತು ದಾನ ಎನ್ನುವ ಎರಡು ಪದಗಳನ್ನು ಒಳಗೊಂಡಿದೆ. ದಾನ ಎನ್ನುವುದು ಯೋಗ್ಯರಿಗೆ ನೀಡುವಂತಹದು. ಆಮಿಷಕ್ಕೆ ಬಿದ್ದು ಅದನ್ನು ಮಾರಿಕೊಳ್ಳಬಾರದು. ಯಾರಿಗೆ ದಾನ ಮಾಡುತ್ತಿದ್ದೇವೆ ಮತ್ತು ಯಾಕೆ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಅರಿವಿರಬೇಕು. ಆ ದಾನಕ್ಕೆ ಅವರು ಯೋಗ್ಯರಾಗಿದ್ದಾರಾ ಎಂದು ಯೋಚನೆ ಮಾಡಬೇಕು. ಅಪಾತ್ರರಿಗೆ ದಾನ ಮಾಡಬಾರದೆನ್ನುವ ವಿಚಾರವೂ ನಮ್ಮಲ್ಲಿ ಜಾರಿಯಲ್ಲಿದೆ. ಮತದಾನ ಮಾಡುವ ಅವಕಾಶ ಐದು ವರ್ಷಗಳಿಗೆ ಒಮ್ಮೆ ಸಿಗುವಂತಹದು. ಅಂತಹ ಅವಕಾಶವನ್ನು ಕಳೆದುಕೊಳ್ಳಬಾರದು ಮತ್ತು ಅದರ ಸದುಪಯೋಗ ಪಡೆಯಬೇಕು. ಮತದಾನ ಮಾಡದೇ ಬಿಟ್ಟರೆ ನಿಮ್ಮ ಹಕ್ಕು ಬಿಟ್ಟುಕೊಟ್ಟ ಹಾಗೆ. ನಂತರ ಅದರ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಳ್ಳುತ್ತೀರಿ. ಮತದಾನ ಮಾಡಿ ನಾಗರೀಕ ಹಕ್ಕು ಚಲಾಯಿಸಿ ಎಂದು ಸ್ವಾಮೀಜಿ ಮನವಿ ಮಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ವೀಕ್ಷಣೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಣಕು ಮತದಾನ ಪ್ರಕ್ರಿಯೆ ನಂತರ ಮತದಾನ ಎಲ್ಲಾ ಕಡೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next