Advertisement

ಕ್ರೀಡೆ-ಸ್ಪರ್ಧೆಗಳ ಮೂಲಕ ಮತದಾರರ ಜಾಗೃತಿ

01:24 PM Apr 19, 2019 | Team Udayavani |

ದಾವಣಗೆರೆ: ಸಾಮೂಹಿಕ ಚಿತ್ರರಚನೆ, ಭಿತ್ತಿ ಚಿತ್ರ ರಚನೆ,
ಹಗ್ಗ-ಜಗ್ಗಾಟ, ಮಡಿಕೆ ಹೊಡೆಯುವುದು, ರಂಗೋಲಿ ಸ್ಪರ್ಧೆ,
ಜಾಗೃತಿ ಗಾಯನ, ಜಾನಪದ ತಂಡಗಳ ಪ್ರದರ್ಶನ, ಮೆಹಂದಿ
ಸಂಭ್ರಮ, ಸ್ಕಿನ್‌ ಆರ್ಟ್‌ ಮತ್ತು ಸಾಹಸ ಕ್ರೀಡೆಗಳ ಪ್ರದರ್ಶನದ
ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

Advertisement

ಗುರುವಾರ ಸಂಜೆ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಮೂಹ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ವಿಶ್ವವಿದ್ಯಾಲಯ ಲಲಿತಕಲಾ ಮಹಾವಿದ್ಯಾಲಯ, ಹಿಮಾಲಯನ್‌ ಅಡ್ವೆಂಚರ್‌ ಆ್ಯಂಡ್‌ ನ್ಪೋರ್ಟ್ಸ್ ಅಕಾಡೆಮಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಉತ್ಸವ ಮತದಾನ ಜಾಗೃತಿಗೆ ವೇದಿಕೆಯಾಗಿತ್ತು.

ಯುವತಿಯರು, ವಿದ್ಯಾರ್ಥಿನಿಯರು, ಮಹಿಳೆಯರು ರಂಗೋಲಿ ಮೂಲಕ ಮತದಾನದ ಮಹತ್ವದ ಸಂದೇಶ ಸಾರಿದರು. ಚಿತ್ರಕಲಾ ಶಿಕ್ಷಕರು ಮತದಾನದ ಬೆರಳಿನ ಚಿತ್ರದ ಮೂಲಕ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದರು.

ದಾವಣಗೆರೆ ವಿಶ್ವವಿದ್ಯಾಲಯದ ಲಲಿತಕಲಾ ಮಹಾವಿದ್ಯಾಲುದ
ವಿದ್ಯಾರ್ಥಿಗಳು ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್‌, ಸಂಸತ್‌,
ಸರತಿ ಸಾಲಲ್ಲಿ ಮತದಾರರು ನಿಂತಿರುವ ಚಿತ್ರ ಬರೆಯುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.

ಹಗ್ಗ ಜಗ್ಗಾಟ, ಗೋಣಿ ಚೀಲದ ಸ್ಪರ್ಧೆ ಸಹ ನಡೆದವು.
ಜೆ.ಎಚ್‌. ಪಟೇಲ್‌ಕಾಲೇಜು ವಿದ್ಯಾರ್ಥಿನಿಯರು ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಚ್‌. ಬಸವರಾಜೇಂದ್ರ ಅವರಿಗೆ ತ್ರಿವರ್ಣ ಧ್ವಜದ ಟ್ಯಾಟೂ ಹಾಕುವ ಮೂಲಕ ಗಮನ ಸೆಳೆದರು.
ಹಿಮಾಲಯನ್‌ ಅಡ್ವೆಂಚರ್‌ ಆ್ಯಂಡ್‌ ಸ್ಪೋರ್ಟ್ಸ್
ಅಕಾಡೆಮಿಯಿಂದ ಕ್ಲೈಂಬಿಂಗ್‌, ರೋಪ್ಲಿಂಗ್‌ ಮೂಲಕ ಎಲ್ಲರಲ್ಲಿ
ರೋಚಕತೆ ಉಂಟು ಮಾಡಿದರು. ಮತದಾನ ಮಾಡುವಂತೆ
ಕೋರಿದರು.

Advertisement

ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಚ್‌. ಬಸವರಾಜೇಂದ್ರ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲಾ ಸ್ವೀಪ್‌ ಸಮಿತಿಯಿಂದ ಮಾಡಲಾಗಿದೆ ಎಂದರು.

ಜಿಲ್ಲಾ ಮಟ್ಟದಿಂದ ಗ್ರಾಪಂ ವರೆಗಿನ ಎಲ್ಲಾ ಇಲಾಖೆಗಳಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ರೀತಿಯ ಮತ
ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಸಾರ್ವಜನಿಕರು ಮತದಾನ ಪ್ರಕ್ರಿಯೆಯಲ್ಲಿ ಅಧಿಕ ಪ್ರಮಾಣದಲ್ಲಿ
ಪಾಲ್ಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕ ಆನಂದ್‌ ಶರ್ಮಾ, ಜಿಲ್ಲಾ ಪಂಚಾಯತ್‌ ಉಪಕಾರ್ಯ ದರ್ಶಿ ಭೀಮಾನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೆರಿ, ಸಿಡಿಪಿಒ ಎಂ. ವೀಣಾ, ಜೆ.ಎಚ್‌. ಪಟೇಲ್‌ ಕಾಲೇಜಿ ಕಾರ್ಯದರ್ಶಿ
ದೊಗ್ಗಳ್ಳಿ ಗೌಡ್ರು ಪುಟ್ಟರಾಜ್‌, ಪ್ರಾಚಾರ್ಯೆ ಪ್ರತಿಭಾ ಪಿ. ದೊಗ್ಗಳ್ಳಿ,
ವ್ಯವಸ್ಥಾಪಕ ಕರಿಬಸಪ್ಪ, ಗಿರೀಶ್‌ ದೇವರಮನೆ, ವಿದ್ಯಾರ್ಥಿಗಳು
ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next