Advertisement

ಅಭಿವೃದ್ಧಿ ಗೊತ್ತಿರದ ಬಿಜೆಪಿಗೆ ಪಾಠ ಕಲಿಸಿ: ಶಾಮನೂರು

12:31 PM Apr 18, 2019 | Team Udayavani |

ದಾವಣಗೆರೆ: ಅಭಿವೃದ್ಧಿ ಎಂದರೆ ಏನೆಂದು ತಿಳಿಯದ ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

Advertisement

ಬುಧವಾರ ದಾವಣಗೆರೆ ದಕ್ಷಿಣ ವಿಧಾನ ಸಭಾಕ್ಷೇತ್ರದ ಗ್ರಾಮಾಂತರ ಪ್ರದೇಶಗಳಾದ ಜರೀಕಟ್ಟೆ, ಮುದಹದಡಿ, ದುರ್ಗಾಂಬಿಕಾ ಕ್ಯಾಂಪ್‌, ಹಳೇ ಬಿಸಲೇರಿ, ಹೊಸ ಬಿಸಲೇರಿ, ನಾಗನೂರು, ನಾಗಮ್ಮ ಕೇಶವಮೂರ್ತಿ ಬಡಾವಣೆಯ‌ಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರವಾಗಿ ಚುನಾವಣಾ ಪ್ರಚಾರ ಹಾಗೂ ರೋಡ್‌ ಷೋ ನಡೆಸಿ ಅವರು ಮಾತನಾಡಿದರು.

ವಿಕಾಸ, ಅಚ್ಛೇದಿನ್‌ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸೈನಿಕರ ಹೆಸರಲ್ಲಿ ಮತ ಕೇಳಲು ಹೊರಟಿದೆ. ದೇಶಕ್ಕೆ ಮೋದಿ ಕೊಡುಗೆ
ಶೂನ್ಯ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಸಹ ಸಂಸದರ ಕೊಡುಗೆ ಶೂನ್ಯ ಎಂದು ದೂರಿದರು.ಬಡಜನರ ಬ್ಯಾಂಕ್‌ ಖಾತೆಗೆ 15 ಲಕ್ಷ ನೀಡುತ್ತೇನೆಂದ ಮೋದಿ ಈಗ ನಾನು ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. 70 ಲಕ್ಷ ಕೋಟಿ ಖರ್ಚು ಮಾಡಿ ಗಂಗಾ ನದಿ ಶುದ್ಧೀಕರಣ ಮಾಡಲಾಗಿದೆ ಎಂದು ಬೊಗಳೆ ಬಿಡುತ್ತಿದ್ದಾರೆ.
ಸೋಲುವ ಭಯದಿಂದ ಕಂಗೆಟ್ಟಿರುವ ಬಿಜೆಪಿಯವರು ಸರ್ಕಾರದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷಗಳಿಗೆ ಭಯ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ಸಂಸದರು 3 ಬಾರಿ ಆಯ್ಕೆ ಆಗಿದ್ದರೂ ಸಹ ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ
ಕೇಳುತ್ತಿದ್ದಾರೆ. ಮೋದಿ ಆಡಳಿತದಿಂದ ಈ ದೇಶದ ಜನಕ್ಕೆ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದರು.

ನಿರ್ಲಕ್ಷé ಧೋರಣೆಯ ಸಂಸದರನ್ನು ಮನೆಗಟ್ಟಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಎಚ್‌.ಬಿ. ಮಂಜಪ್ಪ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ನಾಗನೂರು ಗ್ರಾಮದಲ್ಲಿ ಸಂಸದರಿಗೆ ಗ್ರಾಮದ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ ಕಾರ್ತಿಕ್‌
ಎಂಬ ಯುವಕನನ್ನು ಸನ್ಮಾನಿಸಿದ ಶಾಮನೂರು ಶಿವಶಂಕರಪ್ಪ, ಯುವಕ ಕಾರ್ತಿಕ್‌ನಂತೆ ಪ್ರಶ್ನಿಸುವ ಗುಣವನ್ನು ಬೆಳೆ‌ಸಿಕೊಳ್ಳಬೇಕು.
ಅಭಿವೃದ್ಧಿ ಮಾಡುವ ಕಾಂಗ್ರೆಸ್‌ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Advertisement

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್‌, ಎಪಿಎಂಸಿ ಅಧ್ಯಕ್ಷ ಬಿಸಲೇರಿ ಈರಣ್ಣ, ಮಾಜಿ ಉಪಾಧ್ಯಕ್ಷ ಹದಡಿ ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ಕುಕ್ಕವಾಡ ಮಲ್ಲೇಶಪ್ಪ, ಮುದಹದಡಿ ದಿಳ್ಳೆಪ್ಪ, ನಂದಿಗೌಡ್ರು, ಶಿರಮಗೊಂಡನಹಳ್ಳಿ ರುದ್ರೇಶ್‌, ತುರ್ಚಘಟ್ಟದ ರಿಯಾಜ್‌, ಜರೀಕಟ್ಟೆ ಹನುಮಂತಪ್ಪ, ಉಮಾದೇವಿ, ಮೌನೇಶ್‌, ವೆಂಕಟೇಶ್‌, ಶಿವನಗೌಡ, ನಾಗನೂರಿನ ಎನ್‌.ಡಿ.ಉಜ್ಜಪ್ಪ, ಗೌಡ್ರು ಶಶಿಕುಮಾರ್‌, ಮಹೇಶ್‌, ರಾಘವೇಂದ್ರ, ಆವರಗೆರೆ ಮಂಜು, ಎ.ಕೆ. ಚಂದ್ರಪ್ಪ, ಎ.ಕೆ.ನೀಲಪ್ಪ, ಎ.ಕೆ.ಗುಡ್ಡಪ್ಪ, ನಾಗಮ್ಮ ಕೇಶವಮೂರ್ತಿ ಮಲ್ಲಿಕಾರ್ಜುನ್‌ ಇದ್ದರು.

ಕಾಂಗ್ರೆಸ್‌ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಮೈತ್ರಿ ಅಭ್ಯರ್ಥಿ ಮಂಜಪ್ಪ ಪರ ಮತಬೇಟೆ.

Advertisement

Udayavani is now on Telegram. Click here to join our channel and stay updated with the latest news.

Next