Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಬಾಲಾಕೋಟ್ ಭಾರತದಲ್ಲಿದೆಯೇನೋ ಎಂಬಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾರೆಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ನನಗೆ ಬಾಗಲಕೋಟೆ
ಗೊತ್ತೇ ಹೊರತು ಬಾಲಾಕೋಟ್ ತಿಳಿಯದು ಎಂದು ಎಚ್.ಡಿ.
ಕುಮಾರಸ್ವಾಮಿ ಪ್ರತಿಕ್ರಿಯೆ ನೀಡ್ತಾರೆ. ಸಿಎಂ ಕುಮಾರಸ್ವಾಮಿಗೆ
ತಮ್ಮ ಮಕ್ಕಳು ಮಂಡ್ಯ-ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಆ ಜಿಲ್ಲೆಗಳು ಮಾತ್ರ ಗೊತ್ತಿದೆ. ಈಗ ದೇವೇಗೌಡರ ಸ್ಪರ್ಧೆಯಿಂದ ತುಮಕೂರು ಗೊತ್ತಾಗಿದೆ. ಅವರಿಗೆ ಬಾಗಲಕೋಟೆ, ದಾವಣಗೆರೆ ಕೂಡ ತಿಳಿದಿಲ್ಲ ಎಂದು ಟಾಂಗ್ ನೀಡಿದರು.
Related Articles
Advertisement
ಜಿ.ಎಂ.ಸಿದ್ದೇಶ್ವರ್ ಸಹ ಮೂರು ಬಾರಿ ಸಂಸದರಾಗಿ ದಾವಣಗೆರೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ದಾವಣಗೆರೆಗೆ ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ, ರೈಲ್ವೆ ಜೋಡಿ ಮಾರ್ಗ ಸೇರಿದಂತೆ 26ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಜಯ ಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಸ್ಪತ್ರೆ ಬಂದ್ ಆಗಿದೆ ನಮ್ಮ ಆಸ್ಪತ್ರೆ ಬಂದ್ ಆಗಿರುವುದರಿಂದ
ಸರ್ಕಾರ ರಚಿಸಲು ನಾವು ಯಾವುದೇ
ಆಪರೇಷನ್ ಮಾಡುವುದಿಲ್ಲ. ಮೇಲಾಗಿ
ಈಗ ನಮ್ಮಲ್ಲಿ ಡಾಕ್ಟರ್ ಕಡಿಮೆ ಇದ್ದು, ಬರುವ
ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಲೋಕಸಭಾ
ಚುನಾವಣೆ ಫಲಿತಾಂಶ ಪ್ರಕಟವಾದ ನಂತರ
ಎಲ್ಲರೂ ಬಯಲಿಗೆ ಬರಲಿದ್ದಾರೆ. ನಾವೇನೇ
ಮಾಡಿದರೂ ಮಾಧ್ಯಮದವರಿಗೆ ತಿಳಿಯಲಿದೆ.
.ರಾಜುಗೌಡ,
ಮಾಜಿ ಸಚಿವ ಶಾಮನೂರು ಹೇಳಿಕೆಗೆ ಸ್ವಾಗತ
ಈ ಚುನಾವಣೆ ನಂತರ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂಬುದಾಗಿ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆಯನ್ನು ತಾವು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನಗಳಿಸಲಿದೆ. ನಂತರ ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಬರಲಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಎರಡನ್ನೂ ನಿಭಾಯಿಸಬೇಕಾಗಿರುವುದರಿಂದ ಬಿಎಸ್ ವೈ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲಿದ್ದಾರೆ. ಹಾಗಾಗಿ ಶಾಮನೂರು ಶಿವಶಂಕರಪ್ಪನವರು ಹೇಳಿರುವುದು ಸರಿಯಾಗಿದೆ ಎಂದು ತಿಳಿಸಿದರು. 23ರ ಮಧ್ಯರಾತ್ರಿ ಸರ್ಕಾರ ಬೀಳಲಿದೆ ಎಂಬುದಾಗಿ ಬಿಜೆಪಿ ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಸುಮ್ಮನೆ ಏನನ್ನೂ ಹೇಳಲ್ಲ. ಮೇಲಾಗಿ ಅವರು ಗುರುಗಳು. ಯಾವುದೋ ಲೆಕ್ಕಾಚಾರ ಆಧರಿಸಿ ಹಾಗೆ ಹೇಳಿರಬಹುದು ಎಂದರು. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್, ಮುಖಂಡರಾದ ಲೋಕಿಕೆರೆ ನಾಗರಾಜ್, ಬಸವರಾಜ ಬೇತೂರು, ಎಸ್ಟಿ ಮೋರ್ಚಾದ ಲೋಹಿತ್
ಕುಮಾರ್, ಶ್ರೀನಿವಾಸ್, ಧನುಷ್‌ರೆಡ್ಡಿ, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.