Advertisement

ಮತಜಾಗೃತಿ ಮೂಡಿಸಿದ ಮಹಿಳಾ ಕಾರ್‌ ರ‍್ಯಾಲಿ

10:19 AM Apr 12, 2019 | |

ದಾವಣಗೆರೆ: ಲೋಕಸಭಾ ಚುನಾವಣೆ-2019ರ ಅಂಗವಾಗಿ ಸ್ವೀಪ್‌
ವತಿಯಿಂದ ಗುರುವಾರ ಕಡ್ಡಾಯ ಮತದಾನ ಜಾಗೃತಿಗೆ ಮಹಿಳಾ ಕಾರ್‌
ರ್ಯಾಲಿ ನಡೆಯಿತು.

Advertisement

ನಗರದ ಸಕಾರಿ ಹೈಸ್ಕೂಲ್‌ ಮೈದಾನದಲ್ಲಿ ರ‍್ಯಾಲಿಗೆ ಹಸಿರು ನಿಶಾನೆ ತೋರುವ ಮುನ್ನ ಮಾತನಾಡಿದ, ಜಿಲ್ಲಾ ಚುನಾವಣಾವಧಿಕಾರಿ ಜಿ.ಎನ್‌. ಶಿವಮೂರ್ತಿ, ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹು ಮುಖ್ಯವಾಗಿದ್ದು, ಮಹಿಳೆ ಪರಿಣಾಮಕಾರಿಯಾಗಿ ಮತಜಾಗೃತಿ ಮೂಡಿಸಬಹುದು. ಈ
ಹಿನ್ನೆಲೆಯಲ್ಲಿ ವಿನೂತನವಾಗಿ ಈ ಮಹಿಳಾ ಕಾರ್‌ ರ‍್ಯಾಲಿ ಆಯೋಜಿಸಲಾಗಿದೆ.
ಯಶಸ್ವಿ ಮತದಾನಕ್ಕೆ ಇಂತಹ ರ‍್ಯಾಲಿ ಸಹಕಾರಿಯಾಗಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಓ ಎಚ್‌. ಬಸವರಾಜೇಂದ್ರ ಮಾತನಾಡಿ,
ಮಹಿಳೆಯರಿಗೆ ಮಕ್ಕಳು, ಕುಟುಂಬದ ಮನವೊಲಿಸುವ ಗುಣವಿದ್ದು,
ಮತದಾನ ಜಾಗೃತಿಯಲ್ಲಿ ಇವರ ಪಾತ್ರ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಕಾರ್‌ ರ‍್ಯಾಲಿ ಪರಿಣಾಮಕಾರಿಯಾಗಲಿದೆ ಎಂದರು.

ಸಾರಿಗೆ ಪ್ರಾದೇಶಿಕ ಅಧಿಕಾರಿ ಲಕ್ಷ್ಮೀಕಾಂತ್‌ ನಾಲವಾರ ಮಾತನಾಡಿ,
ರ್ಯಾಲಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ. ಈ ರ‍್ಯಾಲಿಯು ದಾವಣಗೆರೆಯಿಂದ ಚನ್ನಗಿರಿ, ಹರಿಹರ ಮತ್ತು ಹೊನ್ನಾಳಿ ತಾಲೂಕುಗಳ ಮಾರ್ಗವಾಗಿ ಸಾಗಿ ಪುನಃ ದಾವಣಗೆರೆ ತಲುಪಲಿದ್ದು ಸುಮಾರು 200 ಕಿ.ಮೀ. ಸಂಚರಿಸಿ ಮತದಾನದ ಕುರಿತು ಜಾಗೃತಿ ಮೂಡಿಸಲಿದೆ ಎಂದರು.

ಪ್ರತಿ ಮತವೂ ಅಮೂಲ್ಯ, ತಪ್ಪದೇ ಮತ ಚಲಾಯಿಸಿ. ಮತದಾನ ಕೇಂದ್ರದಲ್ಲಿರುವ ಸೌಲಭ್ಯಗಳು, ದಿವ್ಯಾಂಗರಿಗೆ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ನಮ್ಮದು ಕೇವಲ ಒಂದು ಮತವಲ್ಲ! ಅದು ಪ್ರಜಾಪ್ರಭುತ್ವದ ಮೌಲ್ಯ. ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಇತ್ಯಾದಿ ಮತಜಾಗೃತಿ ಫಲಕಗಳನ್ನು ಪ್ರದರ್ಶಿಸುತ್ತಾ ಕಲಾತಂಡದ ಮಹಿಳೆಯರು ರ‍್ಯಾಲಿಯಲ್ಲಿ ಸಾಗಿದರು.

ಚುನಾವಣಾ ಜಿಲ್ಲಾ ಸಾಮಾನ್ಯ ವೀಕ್ಷಕ ಆನಂದ್‌ ಶರ್ಮಾ, ಜಿಲ್ಲಾ ಪೊಲೀಸ್‌
ವರಿಷ್ಠ ಆರ್‌. ಚೇತನ್‌, ಜಿಪಂ ಉಪ ಕಾರ್ಯದರ್ಶಿ ಭೀಮಾನಾಯ್ಕ, ಪಾಲಿಕೆ
ಆಯುಕ್ತ ವೀರೇಂದ್ರ ಕುಂದಗೋಳ, ಡಿಡಿಪಿಯು ಶೇಖರಪ್ಪ, ಕ್ರೀಡಾ ಮತ್ತು
ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ನಗರ ಡಿವೈಎಸ್‌ಪಿ ನಾಗರಾಜ್‌, ಸಿಪಿಐ ಆನಂದ್‌, ದಾವಣಗೆರೆ ತಾ.ಪಂ ಇಓ ಎಂ.ವಿ.ಚಳಗೇರಿ, ಸಾರಿಗೆ ನಿರೀಕ್ಷಕರಾದ ಅನಿಲ್‌ ಮಾಸೂರ್‌,
ಖಾಲಿದ್‌, ಶಾನಭಾಗ್‌, ಶಿವಕುಮಾರ್‌, ಇತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next