ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಒಂದು ವರ್ಷದ ಮಗು ಒಳಗೊಂಡಂತೆ 16 ಜನರಲ್ಲಿ ಮಹಾಮಾರಿ ಕೋವಿಡ್ -19 ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 325 ಪ್ರಕರಣಗಳಲ್ಲಿ ಇದುವರೆಗೆ 266 ಜನರು ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 51 ಸಕ್ರಿಯ ಪ್ರಕರಣಗಳಿವೆ.
ರೋಗಿ ನಂಬರ್ 8064ರ ಸಂಪರ್ಕದಿಂದ 45 ವರ್ಷದ ವ್ಯಕ್ತಿ (ರೋಗಿ ನಂಬರ್15374) ಸೋಂಕು ದೃಢಪಟ್ಟಿದೆ. ರೋಗಿ ನಂಬರ್10386ರ ಸಂಪರ್ಕದಿಂದ 35 ವರ್ಷದ ವ್ಯಕ್ತಿ (ರೋಗಿ ನಂಬರ್15375) ಸೋಂಕು ವಕ್ಕರಿಸಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ 66 ವರ್ಷದ ವೃದ್ಧ (ರೋಗಿ ನಂಬರ್15376) ಸೋಂಕಿಗೆ ತುತ್ತಾಗಿದ್ದಾರೆ. 28 ವರ್ಷದ ವ್ಯಕ್ತಿ(ರೋಗಿ ನಂಬರ್15377), 30 ವರ್ಷದ ವ್ಯಕ್ತಿ(ರೋಗಿ ನಂಬರ್15378)ಗೆ ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ರೋಗಿ ನಂಬರ್ 9892ರ ಸಂಪರ್ಕದಿಂದ ಒಂದು ವರ್ಷದ ಬಾಲಕನಲ್ಲಿ (ರೋಗಿ ನಂಬರ್15379) ಸೋಂಕು ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ 33 ವರ್ಷದ ವ್ಯಕ್ತಿ (ರೋಗಿ ನಂಬರ್15380) ಸೋಂಕಿಗೆ ಒಳಗಾಗಿದ್ದಾರೆ. 40 ವರ್ಷದ ವ್ಯಕ್ತಿ(ರೋಗಿ ನಂಬರ್15381), 11 ವರ್ಷದ ಬಾಲಕಿ (ರೋಗಿ ನಂಬರ್15382), 31 ವರ್ಷದ ಪುರುಷ (ರೋಗಿ ನಂಬರ್15383) ಸೋಂಕಿಗೆ ತುತ್ತಾಗಿದ್ದಾರೆ. ರೋಗಿ ನಂಬರ್14403 ರ ಸಂಪರ್ಕದಿಂದ 58 ವರ್ಷದ ವೃದ್ಧೆ (ರೋಗಿ ನಂಬರ್15384) ಸೋಂಕು ದೃಢಪಟ್ಟಿದೆ.
ರೋಗಿ ನಂಬರ್ 9892ರ ಸಂಪರ್ಕದಿಂದ 58 ವರ್ಷದ ವೃದ್ಧನಲ್ಲಿ (ರೋಗಿ ನಂಬರ್15385) ಸೋಂಕು ತಗುಲಿದೆ. 65 ವರ್ಷದ ವೃದ್ಧ (ರೋಗಿ ನಂಬರ್15386), 49 ವರ್ಷದ ವ್ಯಕ್ತಿ (ರೋಗಿ ನಂಬರ್15387), 58 ವರ್ಷದ ವ್ಯಕ್ತಿ (ರೋಗಿ ನಂಬರ್15388), 50 ವರ್ಷದ ಮಹಿಳೆ (ರೋಗಿ ನಂಬರ್15389) ಯಲ್ಲಿ ಸೋಂಕು ದೃಢಪಟ್ಟಿದೆ.