Advertisement

ಕಾರ್ಗಿಲ್ ದ್ವಿದಶಮಾನೋತ್ಸವ ಸಂಭ್ರಮ

10:07 AM Jul 27, 2019 | Naveen |

ದಾವಣಗೆರೆ: ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಶುಕ್ರವಾರ ಪ್ರೇರಣಾ ಯುವ ಸಂಸ್ಥೆಯಿಂದ ಬೃಹತ್‌ ಬುಲೆಟ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

Advertisement

ರೇಣುಕ ಮಂದಿರದಿಂದ ಪ್ರಾರಂಭವಾದ ಬುಲೆಟ್ ರ್ಯಾಲಿಗೆ ಮಾಜಿ ಸೈನಿಕರು ಚಾಲನೆ ನೀಡಿದರು. ಭಾರತ್‌ ಮಾತಾ ಕೀ ಜೈ…, ಜೈ ಜವಾನ್‌…, ಕಾರ್ಗಿಲ್ ವೀರ ಯೋಧರಿಗೆ ಜೈ… ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓ.ಬಿ. ಶಶಿಕಾಂತ್‌, 40-45 ದಿನ ನಡೆದಂತಹ ಕಾರ್ಗಿಲ್ ಯುದ್ಧದಲ್ಲಿ ನಾನು ಪಾಲ್ಗೊಂಡಿದ್ದು ಈ ಕ್ಷಣಕ್ಕೂ ರೋಮಾಂಚನ ಉಂಟು ಮಾಡುತ್ತಿದೆ. ನಮ್ಮ ಸೈನಿಕರ ಪರಾಕ್ರಮ, ತ್ಯಾಗ-ಬಲಿದಾನದ ಫಲವಾಗಿ ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಿಕ್ಕಿತು. ಪ್ರತಿ ಸೈನಿಕರ ತ್ಯಾಗ, ಪರಾಕ್ರಮ ಮರೆಯುವಂತೆಯೇ ಇಲ್ಲ ಎಂದು ಸ್ಮರಿಸಿದರು.

ಈಗಿನ ಯುವ ಜನಾಂಗ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಕೆಲಸ ಮಾಡಬೇಕು. ಭಯೋತ್ಪಾದಕರು ಒಳಗೊಂಡಂತೆ ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಿತರಿಗೆ ತಲುಪಿಸುವ ಮೂಲಕ ಪ್ರಾರಂಭಿಕ ಹಂತದಲ್ಲೇ ಮಟ್ಟ ಹಾಕಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಸಂಘದ ಖಜಾಂಚಿ ದಾಸಪ್ಪ ಮಾತನಾಡಿ, 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವು ಅವಿಸ್ಮರಣೀಯ. ನಾವು ಸೈನ್ಯದಲ್ಲಿದ್ದಾಗ ಇಷ್ಟೊಂದು ಅತ್ಯಾಧುನಿಕ ಮಾದರಿ ಶಸ್ತ್ರಾಸ್ತ್ರಗಳು ಇರಲಿಲ್ಲ. ಆದರೂ, ಕೆಚ್ಚೆದೆಯಿಂದ ಹೋರಾಟ ಮಾಡುತ್ತಿದ್ದೆವು. ಈಗ ಅತ್ಯಾಧುನಿಕ ಗನ್‌, ಬುಲೆಟ್ಫ್ರೂಫ್‌ ಜಾಕೆಟ್ ಇರುವ ಹಿನ್ನೆಲೆಯಲ್ಲಿ ಶತ್ರುಗಳನ್ನ ಕ್ಷಣಾರ್ಧದಲ್ಲಿ ಮಣ್ಣು ಮುಕ್ಕಿಸುವ ಸಾಮರ್ಥ್ಯ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಪ್ರೇರಣಾ ಯುವ ಸಂಸ್ಥೆ ಅಧ್ಯಕ್ಷ ಎಸ್‌.ಟಿ. ವೀರೇಶ್‌ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಪ್ರೇರಣಾ ಯುವ ಸಂಸ್ಥೆಯಿಂದ ಬೃಹತ್‌ ಬುಲೆಟ್ ರ್ಯಾಲಿಯ ಮೂಲಕ ಯೋಧರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ರೇಣುಕಾ ಮಂದಿರದಿಂದ ಪ್ರಾರಂಭವಾದ ಬುಲೆಟ್ ರ್ಯಾಲಿ ಅರುಣಾ ಚಿತ್ರಮಂದಿರ ಸರ್ಕಲ್, ವಿನೋಬ ನಗರ 2ನೇ ಮುಖ್ಯ ರಸ್ತೆ ರೆಡ್ಡಿ ಬಿಲ್ಡಿಂಗ್‌, ಟ್ಯಾಂಕ್‌ ಪಾರ್ಕ್‌, ಗುಂಡಿ ಮಹಾದೇವಪ್ಪ ವೃತ್ತ, ಮಾಮಾಸ್‌ ಜಾಯಿಂಟ್ ರಸ್ತೆ, ಬಾಪೂಜಿ ಹೈಸ್ಕೂಲ್, ಆಂಜನೇಯ ದೇವಸ್ಥಾನ, ಸುರಭಿ ಸ್ಟುಡಿಯೋ, ವಿದ್ಯಾನಗರ, ಎಸ್‌.ಎಸ್‌. ಕಲ್ಯಾಣ ಮಂಟಪ, ಡಬಲ್ ರಿಂಗ್‌ ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ಎಚ್.ಕೆ.ಆರ್‌. ವೃತ್ತ, ಜಯದೇವ ವೃತ್ತ, ಲಾಯರ್‌ ರಸ್ತೆ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಎಪಿಎಂಸಿ ಓವರ್‌ ಬ್ರಿಡ್ಜ್, ಗಣೇಶ ಹೋಟೆಲ್, ಈರುಳ್ಳಿ ಮಾರ್ಕೆಟ್, ಶ್ರಮಜೀವಿ ಲಾಡ್ಜ್, ಹಳೆ ಬಸ್‌ ನಿಲ್ದಾಣ, ಪ್ರವಾಸಿ ಮಂದಿರ ರಸ್ತೆ ಮೂಲಕ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಮುಕ್ತಾಯವಾಯಿತು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಗೌತಮ್‌ ಜೈನ್‌, ಶ್ರೀಧರ್‌, ಬಸವರಾಜಯ್ಯ, ಶಿವನಗೌಡ ಪಾಟೀಲ್, ಟಿಂಕರ್‌ ಮಂಜಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next