Advertisement
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಮಂಗಳವಾರ ಜಲಶಕ್ತಿ ಅಭಿಯಾನ ಅನುಷ್ಠಾನ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನವು ಐದು ಮುಖ್ಯ ಕಾರ್ಯಕ್ರಮಗಳಾದ ನೀರು ಸಂರಕ್ಷಣೆ ಮತ್ತು ಮಳೆಕೊಯ್ಲು, ಸಾಂಪ್ರದಾಯಿಕ ನೀರಿನ ಮೂಲಗಳ ನವೀಕರಣ, ನೀರಿನ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ಕುರಿತು ಜಿಲ್ಲೆಯಲ್ಲಿ ಸಾಧಿಸಬಹುದಾದಂತಹ ಪ್ರಗತಿ ಕುರಿತು ಇನ್ನು ಮೂರು ದಿನಗಳ ಕ್ರಿಯಾಯೋಜನೆ ರಚಿಸಬೇಕು. ಸಂಬಂಧಿಸಿದ ಇಲಾಖೆಗಳು ತಾವು ಸಾಧಿಸಿದ ಪ್ರಗತಿ ಕುರಿತು ಕಡ್ಡಾಯವಾಗಿ ಜಲಶಕ್ತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದರು.
Related Articles
Advertisement
ಜಲಶಕ್ತಿ ಅಭಿಯಾನದಡಿ ಜಿಲ್ಲೆಯಲ್ಲಿ ಸಾಧಿಸಬಹುದಾದ ಪ್ರಗತಿ ಕುರಿತು ಪಿಪಿಟಿ ಪ್ರದರ್ಶನದ ಮೂಲಕ ವಿವರಿಸಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ವಿಶ್ವದ ಜನಸಂಖ್ಯೆಯಲ್ಲಿ ಶೇ.17ರಷ್ಟು ಭಾರತೀಯರಿದ್ದಾರೆ. ಆದರೆ ಶೇ.8ರಷ್ಟು ಮಾತ್ರ ಮಳೆ ನೀರು ಬಳಕೆಯಾಗುತ್ತಿದೆ. ಇನ್ನು ಶೇ.92ರಷ್ಟು ಪೋಲಾಗುತ್ತಿದೆ. ಮಳೆನೀರನ್ನು ಹೇಗೆ ಸಂರಕ್ಷಿಸಬೇಕು, ಜಲಸಂರಕ್ಷಣೆ ಏಕೆ ಮತ್ತು ಹೇಗೆ ಮಾಡಬೇಕೆಂಬ ಬಗ್ಗೆ ವಿವರಿಸಿದರು.
ಜಲ ಸಂರಕ್ಷಣೆ ಮತ್ತು ನೀರು ಮಿತಬಳಕೆಗೆ ಆದ್ಯತೆ ನೀಡಬೇಕು. ಬೋರ್‌ವೆಲ್ ರೀಚಾರ್ಜ್, ನೀರಿನ ಮರುಬಳಕೆ, ಸರ್ಕಾರಿ ಜಾಗ-ಕಚೇರಿ, ಶಾಲಾ ಕಾಲೇಜು, ಆಸ್ಪತ್ರೆಗಳಲ್ಲಿ ಗಿಡ ನೆಡುವಿಕೆ, ಮನೆಗಳಲ್ಲಿ ಮಳೆಯಕೊಯ್ಲು ಕೈಗೊಳ್ಳಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಕಾರ್ಯಸ್ಥಗಿತವಾಗಿರುವ ಮಳೆಕೊಯ್ಲಿಗೆ ಚಾಲನೆ ನೀಡಲು ಡಿಡಿಪಿಐ ಕ್ರಿಯಾಯೋಜನೆ ತಯಾರಿಸಬೇಕು. ಸರ್ಕಾರಿ ಭೂಮಿಗಳಲ್ಲಿ ಅರಣ್ಯೀಕರಣ ಹಾಗೂ ಮುಖ್ಯವಾಗಿ ಐಇಸಿ ಚಟುವಟಿಕೆ ಕೈಗೊಳ್ಳಬೇಕು. ಯಾವುದೇ ಕೆಲಸಗಳು ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಲಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಹೇಳಿದರು.
ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಜಿಪಂ ಸಹಾಯಕ ಯೋಜನಾಅಧಿಕಾರಿ ಶಶಿಧರ್, ಡಿಎಚ್ಓ ಡಾ|ರಾಘವೇಂದ್ರಸ್ವಾಮಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯ್ಕ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.