Advertisement
ದಾವಣಗೆರೆ ತಾಲೂಕಿನ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳಿಂದ ನಗರದ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಈ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿಗಳು ಪ್ರತಿ ಗ್ರಾಮದಲ್ಲೂ ಎಲ್ಲ ರೈತರಿಗೂ ಇಲಾಖೆಗಳ ಸೌಲಭ್ಯಗಳೊಂದಿಗೆ ತಾಂತ್ರಿಕವಾಗಿ ಹೇಗೆ ಈ ಕೀಟ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರೇವಣಸಿದ್ದನಗೌಡ ಮಾತನಾಡಿ, ಈ ಅಭಿಯಾನ ಆರು ದಿನಗಳ ಕಾಲ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಲಿದೆ. ಮೇ 29 ಮತ್ತು 30ರಂದು ಮಾಯಕೊಂಡ ಹಾಗೂ 31 ಮತ್ತು ಜೂನ್ 1ರಂದು ಆನಗೋಡು ಹೋಬಳಿಗಳಲ್ಲಿ ಸಂಚರಿಸಲಿದೆ ಎಂದರು.
ಈಗಾಗಲೇ ತಾಲೂಕು ಆಡಳಿತ ರೈತರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಇತರೆ ಪರಿಕರಗಳನ್ನು ಪೂರೈಸಲು ಸನ್ನದ್ಧವಾಗಿದೆ. ಈಗಾಗಲೇ ತಾಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೂ ಈ ಕುರಿತು ತರಬೇತಿ ಸಹ ನೀಡಲಾಗಿದೆ ಎಂದು ತಿಳಿಸಿದರು.
ಕಳಪೆ ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ಸಹ ನೀಡಲಾಗಿದೆ. ರೈತರು ಸಹ ಈ ನಿಟ್ಟಿನಲ್ಲಿ ಯಾವುದೇ ಕೃಷಿ ಪರಿಕರ ಮುಖ್ಯವಾಗಿ ಬಿತ್ತನೆ ಬೀಜಗಳನ್ನು ಅನಧಿಕೃತ ಅಥವಾ ಪರವಾನಗಿ ಇಲ್ಲದ ಮಾರಾಟಗಾರರಿಂದ ಪಡೆಯಬಾರದು ಎಂದು ಕೋರಿದರು.
ತಾಲೂಕಿನ ಯಾವುದೇ ಭಾಗದಲ್ಲಿ ಅಂತಹ ಕಾನೂನು ಬಾಹಿರ ಕೃಷಿ ಪರಿಕರಗಳ ಸಂಗ್ರಹ, ಮಾರಾಟ ಕಂಡು ಬಂದಲ್ಲಿ ಕೃಷಿ ಇಲಾಖೆಗೆ ಮಾಹಿತಿ ನೀಡಿ, ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ವೆಂಕಟೇಶಮೂರ್ತಿ, ಲಾವಣ್ಯ, ತೇಜವರ್ಧನ್ ಮತ್ತು ಲೋಕೇಶಪ್ಪ, ರವಿಕುಮಾರ್ ಹಾಗೂ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಆತ್ಮ ಸಿಬ್ಬಂದಿ ಉಪಸ್ಥಿತರಿದ್ದರು.