Advertisement

2ರಿಂದ ವೀರಶೈವ ಪುರೋಹಿತ ಮಹಾಸಭಾ ಅಧಿವೇಶನ

03:09 PM Jan 23, 2021 | Team Udayavani |

ಹೊನ್ನಾಳಿ: ಸಮಾಜದ, ಸಂಸ್ಕೃತಿ ಇತರ ಧಾರ್ಮಿಕ ವ್ಯವಹಾರಗಳು, ತತ್ವಜ್ಞಾನ ಇದನ್ನೆಲ್ಲ ಪರಿಚಯ ಮಾಡಿಕೊಂಡು ಅದರಂತೆ ನಮ್ಮ ನಿತ್ಯ ಜೀವನ ರೂಢಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಿಕೊಳ್ಳಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್‌ ಚನ್ನ  ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಹಿರೇಕಲ್ಮಠದಲ್ಲಿ ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದಿಂದ ಫೆ.2, 3 ಮತ್ತು 4 ರಂದು ಮೂರು ದಿನಗಳ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನ ನಡೆಯಲಿರುವ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭೌತಿಕ ಸಂಪತ್ತುಗಳಾದ ಮನೆ, ಆಸ್ತಿ, ಬ್ಯಾಂಕ್‌ನಲ್ಲಿರುವ ಹಣ ಇದೇ ನಮ್ಮ ಸಂಪತ್ತಲ್ಲ. ಅದಕ್ಕಿಂತ ಮಿಗಿಲಾದ ಪಿತ್ರಾರ್ಜಿತ ಆಸ್ತಿ ಅಂದರೆ ನಮ್ಮ ಧರ್ಮ ಮತ್ತು ಸಂಸ್ಕೃತಿ. ಅದನ್ನು ನಾವು ಉಳಿಸಿಕೊಳ್ಳಬೇಕು, ಕಳೆದುಕೊಳ್ಳಬಾರದು.

ಇದನ್ನೂ ಓದಿ : ಅಧಿಕಾರ-ಅನುದಾನ ದೊರೆತರೆ ತಾಪಂ ಬಲಿಷ್ಠ

ಸಮಾಜದ ಧರ್ಮ, ಸಂಸ್ಕೃತಿ ಹಾಗೂ ಇತಿಹಾಸದ ಪರಿಚಯವನ್ನು ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದಿಂದ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಗಳಿಸಿದ ವಿದ್ಯೆ ಅಂದರೆ ತತ್ವಜ್ಞಾನ. ಮರಣದ ನಂತರವೂ ಮನಸ್ಸಿನಲ್ಲಿ ಸಂಸ್ಕಾರದ ರೂಪದಲ್ಲಿ ಈ ಜ್ಞಾನ ಉಳಿಯುತ್ತದೆ. ಜ್ಞಾನಕ್ಕೆ ನಾಶ ಇಲ್ಲ. ನಾವು ಗಳಿಸಿದ ಉತ್ತಮ ಜ್ಞಾನ ಶರೀರದ ನಂತರವೂ ಅಂತಃ ಕರಣದಲ್ಲಿ ಸಂಸ್ಕಾರದ ರೂಪದಲ್ಲಿ ಉಳಿಯುತ್ತದೆ. ಅಂತಹ ಮೂರು ದಿನಗಳ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನದಲ್ಲಿ ದೈನಂದಿನ ಬದುಕನ್ನು ನಡೆಸುವಂತಹ ಪ್ರಯತ್ನ ನೀಡಲಿ ಎಂದರು.

ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತ್ರಿಮಠ ಮಾತನಾಡಿ, ಫೆಬ್ರವರಿಯಲ್ಲಿ 3 ದಿನಗಳ ಕಾಲ ನಡೆಯುವ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನದಲ್ಲಿ ನಾಡಿನ ವಿದ್ವಾಂಸರಿಂದ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ಧಾರ್ಮಿಕ, ವೈಜ್ಞಾನಿಕ, ವೈಚಾರಿಕವಾಗಿ ವಿಶ್ಲೇಷಣಾ ಶಿಬಿರ, ವೀರಶೈವ ಲಿಂಗಾಯತ, ಜಂಗಮ ಪುರೋಹಿತರ, ಅರ್ಚಕರ, ಜ್ಯೋತಿಷಿಗಳ ಆಗಮಿಕರ ಆಚಾರ – ವಿಚಾರ ಸಂಹಿತೆಗಳ ವಿಚಾರ ವಿನಿಮಯ ಹಿತರಕ್ಷಣೆ ಸಮಸ್ತ ಅಭಿವೃದ್ಧಿಗಳ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

Advertisement

ಕೆ.ಎಸ್‌. ವೀರಪ್ಪದೇವರು, ಕೆ.ಜಿ.ಮಹದೇವಸ್ವಾಮಿ, ಹನುಮನಹಳ್ಳಿ ನಾಗರಾಜಶಾಸ್ತ್ರಿ, ಬೆನಕನಹಳ್ಳಿ ಬೆನಕಯ್ಯ, ದೇವರಾಜ ಶಾಸ್ತ್ರಿ, ಎಂ.ಎಸ್‌.ಶಾಸ್ತ್ರಿಹೊಳೆಮಠ, ಕೆ.ಎಂ.ಪರಮೇಶ್ವರಯ್ಯ, ಅಂದಾನಯ್ಯ ಶಾಸ್ತ್ರಿ, ಎ.ಜಿ.ಹೇಮಲತಾ ಮಾತನಾಡಿದರು.

ಇದನ್ನೂ ಓದಿ : ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next