Advertisement
ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಭರ್ತಿಯಾದ ತುಂಗಾ ಡ್ಯಾಮ್‌ನಿಂದ ಅಧಿಕ ಪ್ರಮಾಣದ ನೀರು ಹೊರ ಹರಿಸಿರುವುದರಿಂದ ತುಂಗಭದ್ರಾ ನದಿ ನೀರು ದಾವಣಗೆರೆ ಜಿಲ್ಲೆಯ ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಜನರಿಗೆ ಸಂಕಷ್ಟ ತಂದೊಡ್ಡಿದೆ.
Related Articles
Advertisement
ದಾವಣಗೆರೆ ನಗರ ಸೇರಿದಂತೆ ತಾಲೂಕಿನಾದ್ಯಂತ ಕಳೆದ 48 ಗಂಟೆಗಳಿಂದ ಸತತವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.
ದಾವಣಗೆರೆ ತಾಲೂಕಲ್ಲಿ 2.3 ಎಂ.ಎಂ. ವಾಡಿಕೆಗೆ 14.1 ಎಂ.ಎಂ.ನಷ್ಟು ವಾಸ್ತವ ಮಳೆ ಆಗಿದೆ. ಹರಿಹರ 2.0 ಮಿ.ಮೀ. ವಾಡಿಕೆಗೆ 20.1 ಮಿಮೀ ವಾಸ್ತವ ಮಳೆ ಸುರಿದಿದೆ. ಹೊನ್ನಾಳಿ 35.6 ಮಿಮೀ, ಚನ್ನಗಿರಿ 35, ಜಗಳೂರು 4.8 ಮಿಮೀ. ಒಟ್ಟು ಸರಾಸರಿ 3.4 ಮಿಮೀ ವಾಡಿಕೆಗೆ 22.5ರಷ್ಟು ವಾಸ್ತವ ಮಳೆ ಸುರಿದಿದೆ.
ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆಗಳು ಭಾಗಶ: ಹಾನಿಯಾಗಿದ್ದು, ಅಂದಾಜು 64 ಸಾವಿರ ರೂ. ನಷ್ಟವಾಗಿದೆ. ಹರಿಹರ ತಾಲೂಕಲ್ಲಿ 2 ಕಚ್ಚಾ ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಅಲ್ಲೂ ಸಹ 64 ಸಾವಿರದಷ್ಟು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 8 ಕಚ್ಚಾ ಹಾಗೂ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 7 ಪಕ್ಕಾ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಜಗಳೂರು ಮತ್ತು ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.