Advertisement

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

07:38 PM May 14, 2024 | Team Udayavani |

ದಾವಣಗೆರೆ: ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಮಂಗಳವಾರ ಅಪರೂಪದ ಮದುವೆಯೊಂದು ನಡೆದಿದೆ.

Advertisement

ನಿವೃತ್ತ ಶಿಕ್ಷಕ ನಾಗರಾಜ್ (66), ರುಕ್ಮಿಣಿ (56) ವಿವಾಹ ಬಂಧನಕ್ಕೊಳಗಾದ ಅಪರೂಪದ ಜೋಡಿ. ನಿವೃತ್ತ ಶಿಕ್ಷಕ ನಾಗರಾಜ್ ಅವರಿಗೆ ಇದು ಎರಡನೇ ಮದುವೆ. ರುಕ್ಮಿಣಿಗೆ ಮಾತ್ರ ಇದು ಮೊದಲನೇ ಮದುವೆ.

ನಾಗರಾಜ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ನಾಗರಾಜ್ ಅವರ ಮಕ್ಕಳಿಬ್ಬರೂ ಹೊರದೇಶದಲ್ಲಿ ವಾಸವಿದ್ದಾರೆ. ಇಳಿ ವಯಸ್ಸಿನಲ್ಲಿ ಒಂಟಿತನದಲ್ಲಿದ್ದ ನಾಗರಾಜ್ ಮರು ಮದುವೆ ಆಗಲು ಬಯಸಿದ್ದರು.

ಮತ್ತೊಂದೆಡೆ ರುಕ್ಮಿಣಿ ಅವರು ಮದುವೆಯಾಗದೆ ಸಹೋದರನ ಮನೆಯಲ್ಲಿ ವಾಸವಿದ್ದರು.ಎರಡೂ ಕುಟುಂಬದವರು ಚರ್ಚಿಸಿ ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ವಿವಾಹ ನೆರವೇರಿಸಿದರು.

ವಿವಾಹ ಅಂದರೆ ಕೇವಲ ದೈಹಿಕ ಸಂಬಂಧವಲ್ಲ, ಮಾನಸಿಕ ಸಮ್ಮಿಲನ ಎನ್ನುವಂತೆ 56 ವರ್ಷದ ರುಕ್ಮಿಣಿ, 66 ವರ್ಷದ ನಾಗರಾಜ್ ಜೊತೆಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next