Advertisement

Davanagere ಅಪ್ರಾಪ್ತನಿಂದ ಆಟೋ ಚಾಲನೆ; ಮಾಲಿಕನಿಗೆ ದಂಡ ವಿಧಿಸಿದ ನ್ಯಾಯಾಲಯ

10:10 PM Jul 29, 2024 | Team Udayavani |

ದಾವಣಗೆರೆ: ಅಪ್ರಾಪ್ತ ಬಾಲಕನ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ನ್ಯಾಯಾಲಯ ವಾಹನ ಮಾಲಿಕನಿಗೆ 26 ಸಾವಿರ ರೂ. ದಂಡ ವಿಧಿಸಿದೆ.

Advertisement

ಆಟೋರಿಕ್ಷಾ ಮಾಲಿಕ ರಹೀಂ ಎಂಬುವವರಿಗೆ 26 ಸಾವಿರ ರೂ. ದಂಡ ವಿಧಿಸಲಾಗಿದೆ. ನಗರದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡುವುದನ್ನು ತಡೆಯಲು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌ ಅವರ ಮಾರ್ಗದರ್ಶನ ಮತ್ತು ಸೂಚನೆಯಂತೆ ದಾವಣಗೆರೆ ಟ್ರಾಫಿಕ್‌ ಪೊಲೀಸ್‌ ಸಿಪಿಐ ನಲವಾಗಲು ಮಂಜುನಾಥ್‌ ನೇತೃತ್ವದಲ್ಲಿ ಉತ್ತರ ಸಂಚಾರ ಠಾಣೆ ಪಿಎಸ್‌ಐ ಗಳೊಂದಿಗೆ ವಿಶೇಷ ಕಾರ್ಯಾಚರಣೆ ಕೈಗೊಂಡ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ ಬಳಿ ರಹೀಮ್‌ ಎಂಬ ವ್ಯಕ್ತಿ ವಿಮೆ ಚಾಲ್ತಿ ಇಲ್ಲದ ತನ್ನ ಆಟೋರಿಕ್ಷಾ ವನ್ನು ಅಪ್ರಾಪ್ತ ವಯಸ್ಸಿನ (17 ವರ್ಷ) ಬಾಲಕನಿಗೆ ಚಲಾಯಿಸಲು ನೀಡಿದ್ದು ಪತ್ತೆಯಾಗಿದ್ದು ರಿಕ್ಷಾವನ್ನು ಜಪ್ತಿ ಪಡಿಸಿಕೊಂಡು ದಾವಣಗೆರೆ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆಟೋ ರಿಕ್ಷಾ ಮಾಲಿಕ ರಹೀಂ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆಟೋವನ್ನು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಆರೋಪಿಗೆ 26 ಸಾವಿರ ರೂಪಾಯಿ ದಂಡ ವಿಧಿಸಿದೆ.

ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next