Advertisement

ಪಾರಂಪರಿಕ ವಿದ್ಯೆ ಧಾರೆ ಎರೆಯಿರಿ

09:55 AM Jul 01, 2019 | Naveen |

ದಾವಣಗೆರೆ: ಪಾರಂಪರಿಕ ವೈದ್ಯರು ಕಲಿತಿರುವ ವಿದ್ಯೆಯನ್ನು ಗುಟ್ಟಾಗಿ ಇಟ್ಟುಕೊಳ್ಳದೆ ಇತರರಿಗೆ ಧಾರೆ ಎರೆಯುವ ಮೂಲಕ ಪಾರಂಪರಿಕ ವೈದ್ಯ ಪದ್ಧತಿ ಮುಂದುವರೆಯುವಂತೆ ಮಾಡಬೇಕು ಎಂದು ಹೆಬ್ಟಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

Advertisement

ಶನಿವಾರ ರೋಟರಿ ಬಾಲಭವನದಲ್ಲಿ ಪಾರಂಪರಿಕ ವೈದ್ಯ ಪರಿಷತ್ತು ಜಿಲ್ಲಾ ಘಟಕ ಏರ್ಪಡಿಸಿದ್ದ ಪಾರಂಪರಿಕ ವೈದ್ಯರ ಜಿಲ್ಲಾ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪಾರಂಪರಿಕ ವೈದ್ಯರು ತಮ್ಮ ಪದ್ಧತಿಯ ಮುಂದುವರಿಕೆಗೆ ಕಾರಣೀಕರ್ತರಾಗಬೇಕು ಎಂದು ತಿಳಿಸಿದರು.

ಅನಾದಿ ಕಾಲದಿಂದಲೂ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಗಿಡದ ಹೆಸರು ಹೇಳಬಾರದು ಎಂಬ ಮಾತಿದೆ. ಹಾಗಾಗಿಯೇ ಔಷಧಕ್ಕೆ ಬಳಸುವ ಗಿಡದ ಹೆಸರು ಹೇಳುತ್ತಿರಲಿಲ್ಲ. ಆ ಗಿಡವನ್ನು ಹಾಳು ಮಾಡಬಹುದು ಎಂಬ ಕಾರಣಕ್ಕೆ ಆ ರೀತಿಯಾಗಿ ಗಿಡದ ಹೆಸರು ಹೇಳಬಾರದು ಎನ್ನಲಾಗುತ್ತಿತ್ತು. ಈಗಲೂ ಅಂತಹ ರಹಸ್ಯ ಕಾಪಾಡಿಕೊಳ್ಳುವ ಅಗತ್ಯ ಇಲ್ಲ. ಇತರರಿಗೆ, ಆಸಕ್ತರಿಗೆ ಗಿಡದ ಹೆಸರು ಪರಿಚಯ ಮಾಡಿಕೊಡುವ ಮೂಲಕ ಪದ್ಧತಿ ಮುಂದುವರೆಸಬೇಕು ಎಂದು ತಿಳಿಸಿದರು.

ಪಾರಂಪರಿಕ ವೈದ್ಯರು ಕಲಿತಿರುವ ವಿದ್ಯೆಯನ್ನು ಧಾರೆ ಎರೆಯುವುದರಿಂದ ಯಾವುದೇ ತೊಂದರೆ ಆಗುವುದೇ ಇಲ್ಲ. ಆರೋಗ್ಯಭಾಗ್ಯ ನೀಡುವಂತಹ ಗಿಡಮೂಲಿಕೆಗಳ ಬಗ್ಗೆ ಎಲ್ಲರೂ ಜಾಗೃತಿ ಮೂಡಿಸಬೇಕು ಎಂದು ಆಶಿಸಿದರು.

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಅನ್ಯ ಪದ್ಧತಿಯ ಮಿಶ್ರಣ ಮಾಡಬಾರದು. ಬಹು ಅಮೂಲ್ಯವಾದ ಪದ್ಧತಿಯ ಉಪಯೋಗ ಎಲ್ಲರಿಗೂ ಆಗಬೇಕಾದ ಅಗತ್ಯತೆಯ ಹಿನ್ನೆಲೆಯಲ್ಲಿ ಈ ವಿದ್ಯೆ ಮುಂದಿನ ಪೀಳಿಗೆಗೂ ಉಳಿಯುವಂತಾಗಲು ವಿದ್ಯೆಯನ್ನು ಗ್ರಂಥದ ರೂಪದಲ್ಲಿ ಹೊರ ತರಬೇಕು. ಶ್ರೀ ಮಠದಿಂದ ಪುಸ್ತಕ ಹೊರ ತಂದು ಉಚಿತವಾಗಿ ವಿತರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

Advertisement

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ರಾಜಣ್ಣ ಮಾತನಾಡಿ, ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸ ಆಗಬೇಕು. ಆಧುನಿಕ ವೈದ್ಯ ಪದ್ಧತಿಯಿಂದ ನಶಿಸುತ್ತಿರುವ ಪಾರಂಪರಿಕ ವೈದ್ಯ ಪದ್ಧತಿಯ ಬಗ್ಗೆ ಹೆಚ್ಚು ತಿಳಿವಳಿಕೆ ನೀಡುವಂತಾಗಬೇಕು. ಕಲಿತಂತಹ ವಿದ್ಯೆಯನ್ನು ಪುಸ್ತಕಗಳ ರೂಪದಲ್ಲಿ ಹೊರ ತರಬೇಕು. ಇಲಾಖೆಗೆ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಅವುಗಳನ್ನ ರಕ್ಷಿಸುವ, ಬೆಳೆಸುವ ಕೆಲÓ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪಾರಂಪರಿಕ ವೈದ್ಯ ಪರಿಷತ್ತು ರಾಜ್ಯ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಮಾತನಾಡಿ, ಪರಿಷತ್ತಿನಿಂದ 30 ದಿನಗಳ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿಯ ಅಗತ್ಯತೆಯನ್ನು ಮನಗಂಡು ಆಗಸ್ಟ್‌ನಲ್ಲಿ 100 ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ್‌, ಎ. ಸುಬ್ರಹ್ಮಣ್ಯ, ಜಿಲ್ಲಾ ಅಧ್ಯಕ್ಷ ರಹಮತುಲ್ಲಾ, ಬಿ.ಎಂ. ಶಿವಮೂರ್ತಿ ಇತರರು ಇದ್ದರು. ಆಜೀವ ಸದಸ್ಯತ್ವ ಪ್ರಮಾಣಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next