Advertisement
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 94 , ಹರಿಹರದಲ್ಲಿ 29, ಜಗಳೂರಿನಲ್ಲಿ 21, ಚನ್ನಗಿರಿ ಯಲ್ಲಿ 39, ಹೊನ್ನಾಳಿಯಲ್ಲಿ 43 ಹಾಗೂ ಹೊರ ಜಿಲ್ಲೆಯ ಇಬ್ಬರು ಒಳಗೊಂಡಂತೆ 228 ಸೋಂಕಿತರು ಗುಣಮುಖರಾಗಿದ್ದಾರೆ.
Related Articles
Advertisement
ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 22642, ಹರಿಹರದಲ್ಲಿ 5843, ಜಗಳೂರಿನಲ್ಲಿ 2208, ಚನ್ನಗಿರಿಯಲ್ಲಿ 4994, ಹೊನ್ನಾಳಿಯಲ್ಲಿ 4789, ಹೊರ ಜಿಲ್ಲೆಯ 1220 ಜನರು ಸೇರಿದಂತೆ 41,696 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3846 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಏಳು ಜನರು ಮೃತಪಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಹರಿಶಿಣಘಟ್ಟದ 40 ವರ್ಷದ ವ್ಯಕ್ತಿ, ದಾವಣಗೆರೆಯ ಎಸ್.ಎಂ. ಕೃಷ್ಣ ನಗರದ 36 ವರ್ಷದ ವ್ಯಕ್ತಿ, ಕುವೆಂಪು ನಗರದ 67 ವರ್ಷದ ವೃದ್ಧ, ದೇವರಾಜ ಅರಸು ಬಡಾವಣೆಯ 70 ವರ್ಷದ ವೃದ್ಧ, ಹೊನ್ನಾಳಿ ತಾಲೂಕಿನ ತಿಮ್ಮಲಾಪುರ ಗ್ರಾಮದ 54 ವರ್ಷದ ವ್ಯಕ್ತಿ, ವಡೆಯರ ಹತ್ತೂರು ಗ್ರಾಮದ ಎ.ಕೆ. ಕಾಲೋನಿಯ 40 ವರ್ಷದ ಮಹಿಳೆ, ಅರೆಮಲ್ಲಹಳ್ಳಿ ಗ್ರಾಮದ 65 ವರ್ಷದ ವೃದ್ಧೆ ಮೃತಪಟ್ಟವರು. ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 407 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 169 ಸೋಂಕಿತರು ಸಾಮಾನ್ಯ, 688 ಸೋಂಕಿತರು ಆಕ್ಸಿಜನ್, 26 ಸೋಂಕಿತರು ಎನ್‌ಐವಿ, 52 ಸೋಂಕಿತರು ವೆಂಟಿಲೇಟರ್ 35 ಸೋಂಕಿತರು ವೆಂಟಿಲೇಟರ್ ರಹಿತ, 865 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 863 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.