Advertisement
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 276, ಹರಿಹರದಲ್ಲಿ 38, ಜಗಳೂರಿನಲ್ಲಿ 12, ಚನ್ನಗಿರಿ ಯಲ್ಲಿ 37, ಹೊನ್ನಾಳಿಯಲ್ಲಿ 33 ಹಾಗೂ ಹೊರ ಜಿಲ್ಲೆಯ 18 ಜನ ಒಳಗೊಂಡಂತೆ 414 ಸೋಂಕಿತರು ಗುಣಮುಖರಾಗಿದ್ದಾರೆ.
ಕಳೆದ ಮಾರ್ಚ್‌ನಿಂದ ಇದೇ ಮೊದಲ ಬಾರಿಗೆ ಒಂದೇ ದಿನ ಸೋಂಕಿತರ ಪ್ರಮಾಣ ಸಾವಿರದ ಗಡಿ ದಾಟಿವೆ. ಮೊದಲನೇ ಅಲೆಯಲ್ಲಿ ಒಂದೇ ದಿನ 648 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ದಾಖಲೆಯಾಗಿತ್ತು. ಭಾನುವಾರ 1,155 ಪ್ರಕರಣ ದೃಢಪಟ್ಟಿವೆ. ಜಿಲ್ಲಾ ಕೇಂದ್ರ ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 631 ಪ್ರಕರಣ ಪತ್ತೆಯಾಗಿವೆ. ಕೊರೊನಾ ಊಹೆಗೂ ಮೀರಿ ವ್ಯಾಪಿಸುತ್ತಿರುವದರಿಂದ ಜನರಲ್ಲಿ ಆತಂಕ ಮೂಡಿದೆ.
Related Articles
Advertisement
ಹರಿಹರದಲ್ಲಿ 150 , ಜಗಳೂರಿನಲ್ಲಿ 45, ಚನ್ನಗಿರಿಯಲ್ಲಿ 173, ಹೊನ್ನಾಳಿಯಲ್ಲಿ 113 ಹಾಗೂ ಹೊರ ಜಿಲ್ಲೆಯ 43 ಜನರು ಒಳಗೊಂಡಂತೆ 1,155 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.
ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 18747, ಹರಿಹರದಲ್ಲಿ 4643, ಜಗಳೂರಿನಲ್ಲಿ 1635, ಚನ್ನಗಿರಿಯಲ್ಲಿ 3294, ಹೊನ್ನಾಳಿಯಲ್ಲಿ 3712, ಹೊರ ಜಿಲ್ಲೆಯ 970 ಜನರು ಸೇರಿದಂತೆ ಈವರೆಗೆ ಒಟ್ಟು 33,001 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ದಾವಣಗೆರೆ ತಾಲೂಕಿನಲ್ಲಿ 16,705, ಹರಿಹರದಲ್ಲಿ 4054, ಜಗಳೂರಿನಲ್ಲಿ 1426, ಚನ್ನಗಿರಿಯಲ್ಲಿ 2795, ಹೊನ್ನಾಳಿಯಲ್ಲಿ 3219, ಹೊರ ಜಿಲ್ಲೆಯ 834 ಜನರು ಸೇರಿದಂತೆ 29,033 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3656 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಓರ್ವ ಮೃತಪಟ್ಟಿದ್ದಾರೆ. ದಾವಣಗೆರೆಯ ವಿನೋಬ ನಗರದ 61 ವರ್ಷದ ವೃದ್ಧೆ ಮೃತಪಟ್ಟವರು. ಈವರೆಗೆ ಕೊರೊನಾದಿಂದ 312 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 258 ಸೋಂಕಿತರು ಸಾಮಾನ್ಯ, 704 ಸೋಂಕಿತರು ಆಕ್ಸಿಜನ್, 36 ಸೋಂಕಿತರು ಎಚ್‌ಎಫ್‌ಎನ್‌ಸಿ, 52 ಸೋಂಕಿತರು ವೆಂಟಿಲೇಟರ್ 32 ಸೋಂಕಿತರು ವೆಂಟಿಲೇಟರ್ ರಹಿತ, 1133 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 274 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.