Advertisement

ದಾವಣಗೆರೆ ಒಂದೇ ದಿನ 225 ಹೊಸ ಕೋವಿಡ್ ಪ್ರಕರಣ ದೃಢ! ನಾಲ್ವರು ಸಾವು

08:30 PM Jul 29, 2020 | sudhir |

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ನಿಂದ ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 62 ವರ್ಷದ ವೃದ್ಧ (ರೋಗಿ ನಂಬರ್ 81489), 72 ವರ್ಷದ ವೃದ್ಧ (ರೋಗಿ ನಂಬರ್ 89365), 68 ವರ್ಷದ ವೃದ್ಧೆ (ರೋಗಿ ನಂಬರ್ 91438), 60 ವರ್ಷದ ವೃದ್ಧೆ (ರೋಗಿ ನಂಬರ್ 91545) ಮೃತಪಟ್ಟವರು. ನಾಲ್ವರ ನಿಧನದಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿದೆ.

Advertisement

ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈವರೆಗಿನ ಎಲ್ಲಾ ದಾಖಲೆ ಮೀರಿ 225 ಪ್ರಕರಣ ದೃಢಪಟ್ಟಿವೆ.

ಜಿಲ್ಲೆಯಲ್ಲಿ ಒಟ್ಟಾರೆ 1893 ಪ್ರಕರಣಗಳಲ್ಲಿ 867 ಸಕ್ರಿಯ ಪ್ರಕರಣಗಳಿವೆ. 16 ಸೋಂಕಿತರು ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 981 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next