Advertisement
ಕಣಜ ಎಂಬ ಅನ್ವರ್ಥ: ಭದ್ರಾ ಅಚ್ಚುಕಟ್ಟು ಒಳಗೊಂಡಂತೆ 82,592 ಹೆಕ್ಟೇರ್ ನೀರಾವರಿ, 1,61,432 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿ 2,44,024 ಹೆಕ್ಟೇರ್ ಬೇಸಾಯ ವಿಸ್ತೀರ್ಣ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಹಿಂದೊಮ್ಮೆ ಮಳೆಯಾಶ್ರಿತ ಪ್ರದೇಶದ ಅತ್ಯಂತ ಪ್ರಮುಖ ಬೆಳೆಯಾಗಿದ್ದ ಹತ್ತಿ ಸ್ಥಾನದಲ್ಲಿ ಈಗ ಮೆಕ್ಕೆಜೋಳ ಕಾಣಿಸಿಕೊಂಡಿದೆ. ದಾಖಲೆಯ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿರುವ ಜಿಲ್ಲೆಗೆ ಮೆಕ್ಕೆಜೋಳದ ಕಣಜ… ಎಂಬ ಅನ್ವರ್ಥ ನಾಮವೂ ಇದೆ.
Related Articles
Advertisement
ಮಳೆಯ ತೀವ್ರ ಕೊರತೆಯಿಂದ ಹರಿಹರ ತಾಲೂಕಿನಲ್ಲಿ 4135,83 ಹೆಕ್ಟೇರ್, ದಾವಣಗೆರೆಯಲ್ಲಿ 35,984, ಜಗಳೂರಿನಲ್ಲಿ 26,890 ಹೆಕ್ಟೇರ್ ಒಳಗೊಂಡಂತೆ 67009.83 ಹೆಕ್ಟೇರ್ ಮೆಕ್ಕೆಜೋಳ ಹಾನಿಗೀಡಾಗಿತ್ತು.
ಹಿಂದೊಮ್ಮೆ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದ ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ಅತೀ ಸಾಮಾನ್ಯ ಎನ್ನುವಂತಾಗಿರುವ ಮಳೆಯ ಕೊರತೆಯ ಕಾರಣ ಮೆಕ್ಕೆಜೋಳದ ಇಳುವರಿಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿದೆ.
ಅತೀವವಾದ ಮಳೆಯ ಕಣ್ಣಾಮುಚ್ಚಾಲೆಯಾಟದಿಂದ ಈಚೆಗೆ ಬರ… ಖಾಯಂ ಆಗುತ್ತಿರುವುದು, ಈವರೆಗೆ ಕಂಡು ಕೇಳರಿಯದ ಸೈನಿಕ ಹುಳು… ಹಾವಳಿ, ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿರುವ ಕಾರಣ ಮೆಕ್ಕೆಜೋಳದ ಕಣಜ.. ದ ಖ್ಯಾತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ.
ಈ ಬಾರಿಯ ಗುರಿ…ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆಯ ನಿರೀಕ್ಷೆಯೊಂದಿಗೆ ಕೃಷಿ ಇಲಾಖೆ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 32,650 ಹೆಕ್ಟೇರ್, ಹರಿಹರದಲ್ಲಿ 10,275, ಜಗಳೂರಿನಲ್ಲಿ 31 ಸಾವಿರ, ಹೊನ್ನಾಳಿಯಲ್ಲಿ 26,650 ಹಾಗೂ 25,180 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯುವ ಗುರಿ ಇರಿಸಿಕೊಂಡಿದೆ. ಮಳೆಯ ಆಧಾರದಲ್ಲಿ ಗುರಿಯಲ್ಲಿ ಬದಲಾವಣೆ ಆಗಬಹುದು. ರೈತರು ಸಹ ಹೆಚ್ಚಾಗಿ ಬೆಳೆಯಬಹುದು. ಸಮಯ ಇದೆ…
ಮೆಕ್ಕೆಜೋಳ ಬಿತ್ತನೆಗೆ ಮೇ ಕೊನೆಯ ವಾರದಿಂದ ಜುಲೈ ಮಾಹೆಯವರೆಗೆ ಕಾಲಾವಕಾಶ ಇದೆ. ಉತ್ತಮ ಮಳೆ ಆದಲ್ಲಿ ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಆಗಲಿದೆ. ಆದರೆ, ಮಳೆ ಆಗದೇ ಹೋದಲ್ಲಿ ಮೆಕ್ಕೆಜೋಳ ಬಿತ್ತುವ ಸಮಯ ಮೀರಿದರೂ ರೈತರು ಅನಿವಾರ್ಯವಾಗಿ ಬಿತ್ತನೆ ಮಾಡುವುದು ಕಂಡು ಬರುತ್ತದೆ. ಅಂತಹ ಮೆಕ್ಕೆಜೋಳ ಸೈನಿಕ ಹುಳು… ಇತರೆ ಕಾಟಕ್ಕೆ ತುತ್ತಾಗುವುದು ಇತ್ತೀಚಿನ ವರ್ಷದಲ್ಲಿ ಕಾಣಿಸಿಕೊಂಡಿದೆ. ಸಕಾಲಿಕ ಉತ್ತಮ ಮಳೆಯಾದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗಲಿವೆ. ಹಾಗಾಗಿ ರೈತರು, ಜನರು ಈಗ ಮಳೆಯ ನಿರೀಕ್ಷೆಯಲ್ಲಿದ್ದಾರೆ. ರಾ.ರವಿಬಾಬು