Advertisement
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 13 , ಹರಿಹರ, ಹೊನ್ನಾಳಿಯಲ್ಲಿ ತಲಾ ಮೂವರು, ಚನ್ನಗಿರಿಯಲ್ಲಿ ನಾಲ್ವರು, ಹೊರ ಜಿಲ್ಲೆಯ ಒಬ್ಬರು ಒಳಗೊಂಡಂತೆ 24 ಸೋಂಕಿತರು ಗುಣಮುಖರಾಗಿದ್ದಾರೆ.
Related Articles
Advertisement
ಜಿಲ್ಲೆಯಲ್ಲಿ ಕೊರೊನಾದಿಂದ ನಾಲ್ವರು ಮೃತಪಟ್ಟಿದ್ದಾರೆ. ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 67 ವರ್ಷದ ವೃದ್ಧ, ನಿಟುವಳ್ಳಿಯ ಎಚ್.ಕೆ.ಆರ್. ವೃತ್ತದ ನಿವಾಸಿ 66 ವರ್ಷದ ವೃದ್ಧ, ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದ 50 ವರ್ಷದ ಮಹಿಳೆ, ಹರಿಹರ ತಾಲೂಕಿನ ಹರಗನಹಳ್ಳಿಯ 65 ವರ್ಷದ ವೃದ್ಧ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ 541 ಜನರು ಬಲಿಯಾಗಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 78 ಸೋಂಕಿತರು ಸಾಮಾನ್ಯ, 321 ಸೋಂಕಿತರು ಆಕ್ಸಿಜನ್, 16 ಸೋಂಕಿತರು ಎನ್‌ಐವಿ, 45 ಸೋಂಕಿತರು ವೆಂಟಿಲೇಟರ್ 20 ಸೋಂಕಿತರು ವೆಂಟಿಲೇಟರ್ ರಹಿತ, 220 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 148 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಬ್ಯ್ಲಾಕ್ ಫಂಗಸ್ ಪ್ರಕರಣ ವರದಿಯಾಗಿಲ್ಲ. ಈವರೆಗೆ ಜಿಲ್ಲೆಯಲ್ಲಿ 108 ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 35, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 21, ಬಾಪೂಜಿ ಆಸ್ಪತ್ರೆಯಲ್ಲಿ ಇಬ್ಬರು, ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ಒಬ್ಬರು ಒಳಗೊಂಡಂತೆ 59 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 36, ಎಸ್.ಎಸ್. ಹೈಟೆಕ್‌ನಲ್ಲಿ 13 ಒಳಗೊಂಡಂತೆ 49 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.