Advertisement

Davanagere; ಒಂದೇ ದಿನ ಒಂದೇ ಗ್ರಾಮದ 8ಜನ ಸಾವು; ಹೂಳಲು ಜಾಗವಿಲ್ಲದೆ ಗ್ರಾಮಸ್ಥರ ಪ್ರತಿಭಟನೆ

11:56 AM Jul 11, 2024 | Team Udayavani |

ದಾವಣಗೆರೆ: ಒಂದೇ ಗ್ರಾಮದಲ್ಲಿ ಒಂದೇ ದಿನ ವಿವಿಧ ಕಾರಣದಿಂದ ಎಂಟು ಜನರು ಸಾವನ್ನಪ್ಪಿದ್ದರಿಂದ ಅಂತ್ಯಸಂಸ್ಕಾರಕ್ಕೆ ಹೂಳಲು ಜಾಗವಿಲ್ಲದ ಕಾರಣಕ್ಕೆ ಹೊಸ ಕುಂದುವಾಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ದಾವಣಗೆರೆಯ ಹೊರ ವಲಯದ ಹೊಸ ಕುಂದುವಾಡದಲ್ಲಿ ಗುರುವಾರ ಒಂದೇ ದಿನ 8 ಜನ ಸಾವನ್ನಪ್ಪಿದ್ದಾರೆ. 3,000 ಜನಸಂಖ್ಯೆ ಹೊಂದಿರುವ ಹೊಸ ಕುಂದುವಾಡ ಗ್ರಾಮದಲ್ಲಿ ಒಂದೇ ದಿನ ಎಂಟು ಜನರು ಮೃತಪಟ್ಟಿದ್ದಾರೆ.

ಮಾರಜ್ಜಿ (60) ಎಂಬುವರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಸಂತೋಷ್ (32) ಎಂಬಾತ ವಾಂತಿ ಭೇದಿಯಿಂದ, ಈರಮ್ಮ (65) ಜ್ವರದಿಂದ, ಭೀಮಕ್ಕ (60) ವಾಂತಿ ಭೇದಿಯಿಂದ, ಸುನೀಲ್ (25) ಜ್ವರದಿಂದ, ಶಾಂತಮ್ಮ (65) ವಯೋಸಹಜ ಹಾಗೂ 3 ದಿನದ ಗಂಡು ಮಗು ಉಸಿರಾಟದ ತೊಂದರೆಯಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಶವಸಂಸ್ಕಾರ ಮಾಡಲು ಸ್ಮಶಾನ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು ಸ್ಮಶಾನಕ್ಕಾಗಿ ಆಗ್ರಹಿಸಿ ಹೊಸ ಕುಂದವಾಡದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಸ್ಮಶಾನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಸ್ಮಶಾನಕ್ಕಾಗಿ ಗ್ರಹಿಸಿದ ಇಡೀ ಗ್ರಾಮದ ಜನರಿಂದ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next