Advertisement

ಮೃತಪಟ್ಟ ವಾರಿಯರ್‌ ಕುಟುಂಬಕ್ಕೆ ನೀಡಿಲ್ಲ ಪರಿಹಾರ

06:04 PM Jul 22, 2021 | Team Udayavani |

ಹರಪನಹಳ್ಳಿ: ಕೊರಾನಾದಿಂದ ಮೃತಪಟ್ಟ ಕುಟುಂಬಕ್ಕೆ ಇದುವರೆಗೂ ಪರಿಹಾರ ನೀಡಲಾಗದ ಆಡಳಿತರೂಢ ಬಿಜೆಪಿ ಸರ್ಕಾರ ಬರೀ ಸುಳ್ಳು ಪ್ರಚಾರ ಮಾಡುತ್ತ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ವಾಗ್ಧಾಳಿ ನಡೆಸಿದರು. ಪಟ್ಟಣದ ಹಳೇ ಬಸ್‌ ನಿಲ್ದಾಣದ ಸಮೀಪದ ಗರಡಿಮನೆ ಆವರಣದಲ್ಲಿ ದೈನಂದಿನ ಉಚಿತ ಊಟ ಸೇವಾ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

Advertisement

ದೇಶದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳಲಾಗದಷ್ಟು ಕುಸಿತ ಕಂಡಿದೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮವರ್ಗದ ಕುಟುಂಬಗಳ ಬದುಕು ಆಯೋಮಯವಾಗಿದೆ. ರೂಪಾಯಿ ಮೌಲ್ಯ ಕುಸಿತವಾದರೂ, ಡಾಲರ್‌ ಮೌಲ್ಯ ಹೆಚ್ಚಳಕ್ಕೆ ಪ್ರಧಾನಿ ಮೋದಿಯವರೇ ಕಾರಣ, ರಾವಣರಾಜ್ಯ ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್‌ ಬೆಲೆ ರೂ. 55 ಇದ್ದರೆ, ಸೀತೆಯ ನಾಡು ನೇಪಾಳದಲ್ಲಿ ರೂ. 60 ಇದೆ. ಆದರೆ ರಾಮರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಶತಕ ಬಾರಿಸಿವೆ.

ಜಿಡಿಪಿ ಬೆಳೆಸುವ ಮೂಲಕ ಆರ್ಥವ್ಯವಸ್ಥೆಯನ್ನು ಸರಿದಾರಿಗೆ ತರಬೇಕಾದ ಪ್ರಧಾನಮಂತ್ರಿಯವರು ತಮ್ಮ ಗಡ್ಡ ನೆವರಿಸಿಕೊಳ್ಳುವ ಮೂಲಕ ಶೋಕಿಗೆ ಇಳಿದಿದ್ದಾರೆ ಎಂದು ಕುಟುಕಿದರು. ಸಂಡೂರು ಕ್ಷೇತ್ರದ ಶಾಸಕ ಈ. ತುಕಾರಾಂ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಎಂ. ಶಿವಯೋಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ. ಸುಭಾಷ್‌ ಚಂದ್ರ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಆಶಾಲತಾ, ಮುಖಂಡರಾದ ಸೋಮಪ್ಪ, ಮುಂಡರಗಿ ನಾಗರಾಜ್‌, ಇಮಾಮ್‌ ಹೊಸಪೇಟೆ, ಇರ್ಫಾನ್‌ ಮುದಗಲ್‌, ಸಿದ್ದು ಹಳ್ಳೇಗೌಡ, ತೆಲಿಗಿ ಉಮಾಕಾಂತ್‌, ಪುಷ್ಪಾ ದಿವಾಕರ್‌, ಶಿವುಕುಮಾರ್‌ ನಾಯ್ಕ, ಶ್ರೀಕಾಂತ್‌, ಜಿಷಾನ್‌ಅಲಿ, ವಿಜಯ್‌ ದಿವಾಕರ್‌, ಮತ್ತೂರು ಬಸವರಾಜ್‌, ಶಿವರಾಜ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next