Advertisement
ದಾವಣಗೆರೆ: ಕಟ್ಟಡ ಕಾರ್ಮಿಕರಿಗೆ ಕೊರೊನಾ ಪರಿಹಾರದ ಜತೆಗೆ ಸರ್ಕಾರ, ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕೇವಲ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 7477 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ.
Related Articles
Advertisement
ಇವರಲ್ಲಿ 5424 ಪುರುಷರು, 2053 ಮಹಿಳೆಯರು ಇದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಹರಿಹರ ಕಾರ್ಮಿಕ ಇಲಾಖೆ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1561 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನುಳಿದಂತೆ ದಾವಣಗೆರೆ ಒಂದನೇ ವೃತ್ತ ಕಚೇರಿಯಲ್ಲಿ 1422, ದಾವಣಗೆರೆ ಎರಡನೇ ವೃತ್ತ ಕಚೇರಿಯಲ್ಲಿ 989, ದಾವಣಗೆರೆ ಮೂರನೇ ವೃತ್ತ ಕಚೇರಿಯಲ್ಲಿ 1168, ಚನ್ನಗಿರಿ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ 1203, ಹೊನ್ನಾಳಿ ನಿರೀಕ್ಷಕರ ಕಚೇರಿಯಲ್ಲಿ 827 ಹಾಗೂ ಜಗಳೂರು ನಿರೀಕ್ಷಕರ ಕಚೇರಿಯಲ್ಲಿ 307ಜನರು ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಲಕ್ಷ ಮೀರಿದ ನೋಂದಣಿ: ಜಿಲ್ಲೆಯಲ್ಲಿ ಈವರೆಗೆ ನೋಂದಣಿ ಮಾಡಿಸಿಕೊಂಡ ಒಟ್ಟು ಕಟ್ಟಡ ಕಾರ್ಮಿಕರ ಸಂಖ್ಯೆ ಒಂದು ಲಕ್ಷ ಮೀರಿದೆ. ಕಾರ್ಮಿಕ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜೂನ್ 30ವರೆಗೆ ಒಟ್ಟು 1,02,658 ಜನರು ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಈ ಅಂಕಿ-ಅಂಶದ ಆಧಾರದಲ್ಲಿ ಜಿಲ್ಲೆಯ ದಾವಣಗೆರೆ ಎರಡನೇ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 20,806 (ಇವರಲ್ಲಿ 4488 ಮಹಿಳೆಯರು) ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಉಳಿದಂತೆ ದಾವಣಗೆರೆ ಕಾರ್ಮಿಕ ವೃತ್ತ ಕಚೇರಿಯಲ್ಲಿ ಒಂದರಲ್ಲಿ 15,673 (ಇವರಲ್ಲಿ 2740 ಮಹಿಳೆಯರು), ದಾವಣಗೆರೆ ಕಾರ್ಮಿಕ ವೃತ್ತ ಕಚೇರಿಯಲ್ಲಿ ಮೂರರಲ್ಲಿ 17,982 (ಇವರಲ್ಲಿ 4555 ಮಹಿಳೆಯರು), ಚನ್ನಗಿರಿ ನಿರೀಕ್ಷಕರ ಕಚೇರಿಯಲ್ಲಿ 11,813 (ಇವರಲ್ಲಿ 3084ಮಹಿಳೆಯರು), ಹರಿಹರ ನಿರೀಕ್ಷಕರ ಕಚೇರಿಯಲ್ಲಿ 17,916 (ಇವರಲ್ಲಿ 4229 ಮಹಿಳೆಯರು), ಹೊನ್ನಾಳಿ ನಿರೀಕ್ಷಕರ ಕಚೇರಿಯಲ್ಲಿ 9738 (ಇವರಲ್ಲಿ 1988 ಮಹಿಳೆಯರು), ಜಗಳೂರು ನಿರೀಕ್ಷಕರ ಕಚೇರಿಯಲ್ಲಿ 8730 (ಇವರಲ್ಲಿ 2200 ಮಹಿಳೆಯರು) ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ಸರ್ಕಾರ ವಿವಿಧ ಸೌಲಭ್ಯ ಕಲ್ಪಿಸುತ್ತಿರುವುದರಿಂದ ಕಟ್ಟಡ ಕಾರ್ಮಿಕರ ನೋಂದಣಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಇದರಲ್ಲಿ ಹೆಚ್ಚು ಜನ ಅನರ್ಹರು ಸೇರಿಕೊಳ್ಳುತ್ತಿರುವುದು ಬೇಸರದ ಸಂಗತಿ.