Advertisement

ಮಾಜಿ ಶಾಸಕರಿಂದ ಸಾಂತ್ವನ ಹೇಳುವ ನಾಟಕ : ರೇಣು

10:01 PM Jul 12, 2021 | Team Udayavani |

ಹೊನ್ನಾಳಿ: ಇಷ್ಟು ದಿನ ಕಾಣದಂತೆ ಮಾಯವಾಗಿದ್ದ ಮಾಜಿ ಶಾಸಕರು ಇದೀಗ ಚುನಾವಣೆ ಬಂತೆಂದು ಕೋವಿಡ್‌ನಿಂದ ಮೃತಪಟ್ಟ ಕುಟುಂಬಸ್ಥರ ಮನೆಗೆ ತೆರಳಿ ಸಾಂತ್ವನ ಹೇಳುವ ನಾಟಕವಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾಜಿ ಶಾಸಕರ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ತಾಲೂಕಿನ ಹೊಸಹಳ್ಳಿ, ಹೊಸಹಳ್ಳಿ ಫಸ್ಟ್‌ ಕ್ಯಾಂಪ್‌, ಹೊಸಹಳ್ಳಿ ಸೆಂಕೆಡ್‌ ಕ್ಯಾಂಪ್‌, ಹನಗವಾಡಿ, ಬಾಗವಾಡಿ, ಹುರುಳೇಹಳ್ಳಿ, ಲಿಂಗಾಪುರ ಗ್ರಾಮಗಳಲ್ಲಿ ಕೆಎಸ್‌ಡಿಎಲ್‌ ವತಿಯಿಂದ 52.50 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಕೊರೊನಾ ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಕಾಣದಂತೆ ಮಾಯವಾಗಿದ್ದರು.

ಮನೆಯಿಂದ ಹೊರ ಬಂದರೆ ತಮಗೆ ಕೊರೊನಾ ಬರುತ್ತದೆಂದು ಹೊರ ಬಾರದೆ ಕ್ಷೇತ್ರದ ಜನರ ಆರೋಗ್ಯ ಹಾಳಾದರೂ ಪರವಾಗಿಲ್ಲ. ತಾವೂ ಆರೋಗ್ಯವಾಗಿ ಇದ್ದರೆ ಸಾಕು ಎಂದು ಮನೆ ಸೇರಿದ್ದರು. ಬದುಕಿದ್ದಾಗ ಜನರ ಮನೆಗೆ ಬಾಗಿಲಿಗೆ ಹೋಗಿ ಅವರಿಗೆ ಆತ್ಮಸ್ಥೈರ್ಯ ತುಂಬದ ಮಾಜಿ ಶಾಸಕರು ಇದೀಗ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಕೊರೊನಾದಿಂದ ಮೃತಪಟ್ಟವರ ಮನೆಗೆ ತೆರಳಿ ಸಾಂತ್ವನ ಹೇಳುವ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾನು ರಾಜಕೀಯ ಉದ್ದೇಶದಿಂದ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲಾ ಅದು ನನಗೆ ಮುಖ್ಯವೂ ಅಲ್ಲಾ. ನನಗೆ ಅವಳಿ ತಾಲೂಕಿನ ಜನರ ಆರೋಗ್ಯ ಮುಖ್ಯ ಈ ನಿಟ್ಟಿನಲ್ಲಿ ನಾನು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ಸೇರಿ ಒಟ್ಟು ರೂ.30 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

Advertisement

ಹೊಸಹಳ್ಳಿ ಗ್ರಾಮದಲ್ಲಿ ಕೆಆರ್‌ಐಡಿಎಲ್‌ ನಿಂದ 55 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಉದ್ಘಾಟನೆ, 5 ಲಕ್ಷ ವೆಚ್ಚದಲ್ಲಿ ಮೆಟಿÉಂಗ್‌ ರಸ್ತೆ, ಐದು ಲಕ್ಷ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ, ಐದು ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಹೊಸಹಳ್ಳಿ ಫಸ್ಟ್‌ ಕ್ಯಾಂಪ್‌ ಹಾಗೂ ಸೆಂಕೆಡ್‌ ಕ್ಯಾಂಪ್‌ನಲ್ಲಿ 9.50 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್‌ ನಿರ್ಮಾಣ ಕಾಮಗಾರಿ, ಹುರಳೇಹಳ್ಳಿ ಗ್ರಾಮದಲ್ಲಿ ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ 1.80 ಲಕ್ಷ, ಬಾಗೇವಾಡಿ ಗ್ರಾಮದಲ್ಲಿ ಕಾಂಪೌಂಡ್‌ ನಿರ್ಮಾಣ ಹಾಗೂ ಪಿಠೊಪಕರಣ ಸೇರಿ ಒಟ್ಟು ರೂ.6 ಲಕ್ಷ ರೂಪಾಯಿ ಕಾಮಗಾರಿ, ಕೆಎಸ್‌ಡಿಎಲ್‌ನಿಂದ ರೂ.52.50 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಕೆಎಸ್‌ಡಿಎಲ್‌ ನಿರ್ದೇಶಕ ಶಿವುಹುಡೇದ್‌, ತಾಪಂ ಮಾಜಿ ಅಧ್ಯಕ್ಷ ಕುಳಗಟ್ಟೆ ರಂಗನಾಥ್‌, ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ತಿಪ್ಪೇಶಪ್ಪ, ಲಿಂಗಾಪುರ ಗ್ರಾ.ಪಂ ಅಧ್ಯಕ್ಷ ಶಿವು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next